ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇಶದ ಹೆಮ್ಮೆಯ ಉದ್ಯಮಿ, ಟಾಟಾ ಸಮೂಹದ ಮುಖ್ಯಸ್ಥಾ ರತನ್ ಟಾಟಾರವರ #Ratan Tata ನಿಧನದ ಸುದ್ದಿ ದೇಶದ ಜನತೆಗೆ ಅಪಾರ ದು:ಖವನ್ನುಂಟು ಮಾಡಿದ್ದು, ದೇಶದ ಆರ್ಥಿಕಾಭಿವೃದ್ಧಿಗೆ ತುಂಬಲಾರದ ನಷ್ಟವನ್ನುಂಟಾಗಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸಂತಾಪ ವ್ಯಕ್ತಪಡಿಸಿದೆ.
Also read: ಏಳು ಬೀಳು ಇದ್ದಾಗಲೆ ಕೃಷಿಯಲ್ಲಿ ಮೇಲೆ ಬರಲು ಸಾಧ್ಯ
ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿರುವುದು ಮಾತ್ರವಲ್ಲ ಜೊತೆಗೆ ಭಾತರದ ಉದ್ಯಮ ವಲಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಎತ್ತರಕ್ಕೆ ಕೊಂಡೊಯ್ದ್ದ ದೂರದೃಷ್ಟಿಯ ಮಹಾನ್ ವ್ಯಕ್ತಿತ್ವವನ್ನು ಹೊಂದಿದ್ದರು. ರತನ್‌ಟಾಟಾರವರು ತಮ್ಮ ಬದುಕು ಸಾಧನೆಗಳ ಮೂಲಕ ಅಜರಾಮರರಾಗಿದ್ದಾರೆ. ಅಗಲಿದ ಮಹಾನ್ ಛೇತನಕ್ಕೆ ಭಗವಂತ ಸದ್ಗತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ. ಗೋಪಿನಾಥ್, ಪದಾಧಿಕಾರಿಗಳು, ನಿದೇಶಕರುಗಳು ಗೌರವ ಶ್ರದ್ದಾಂಜಲಿಯನ್ನು ಅರ್ಪಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post