ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ರಾಜ್ಯ ಸಾಫ್ಟ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ವತಿಯಿಂದ ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ (ಕೆಎಸ್‍ಪಿಎಲ್) #KSPL 2024 ರ ಕ್ರಿಕೆಟ್ ಟೂರ್ನಿ ನ.01 ರಿಂದ ಡಿ.01 ರವರೆಗೆ ಒಂದು ತಿಂಗಳ ಕಾಲ ಬೆಂಗಳೂರು ಸೋಲದೇವನಹಳ್ಳಿಯಲ್ಲಿರುವ ಆಚಾರ್ಯ ಗ್ರೌಂಡ್‍ನಲ್ಲಿ ನಡೆಯಲಿದೆ ಎಂದು ಶಿವಮೊಗ್ಗ ಟೈಗರ್ಸ್ ಮಾಲೀಕರಾದ ಚೇತನ್ ದಾಸರಹಳ್ಳಿ ತಿಳಿಸಿದರು.
ಮಂಗಳವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಸ್‍ಪಿಎಲ್-2024 ಇದರ ಉದ್ಘಾಟನಾ ಕಾರ್ಯಕ್ರಮವು ನ.01 ರಂದು ಸಂಜೆ 4ಗಂಟೆಗೆ ಆಚಾರ್ಯ ಗ್ರೌಂಡ್‍ನಲ್ಲಿ ನಡೆಯಲಿದ್ದು, ಯಾರೆಲ್ಲಾ ಗಲ್ಲಿ ಕ್ರಿಕೆಟ್ ಆಟಗಾರರು ಹಾಗೂ ಗ್ರಾಮೀಣ ಮಟ್ಟದ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಒಂದು ಅದ್ಭುತವಾದ ಅವಕಾಶವನ್ನು ಕಲ್ಪಿಸುವ ಪ್ರಯತ್ನವೇ ಕೆಎಸ್‍ಪಿಎಲ್-2024 ರ ಉದ್ದೇಶವಾಗಿದೆ ಎಂದರು.

Also read: ನಾವು ಸರಿಯಾಗಿದ್ದರೆ ಕಲಾ ರಂಗವೂ ಚೆನ್ನಾಗಿರುತ್ತದೆ | ಖ್ಯಾತ ಸಂಗೀತ ವಿದ್ವಾಂಸ ಎಚ್.ಎಸ್. ಸುಧೀಂದ್ರ ಅಭಿಮತ
ಶಿವಮೊಗ್ಗ ಟೈಗರ್ಸ್ ತಂಡದ ಪಂದ್ಯಾವಳಿಯ ಮೊದಲ ಮ್ಯಾಚ್ ನ.24 ರಂದು ಸಂಜೆ 5ಗಂಟೆಯಿಂದ 7.30 ರವರೆಗೆ ಶಿವಮೊಗ್ಗ ಟೈಗರ್ಸ್ ವರ್ಸಸ್ ಸಿಎಂಎಂ ಹಾವೇರಿ, ಎರಡನೇ ಮ್ಯಾಚ್ ನ.25 ರಂದು ಸಂಜೆ 7 ಗಂಟೆಯಿಂದ ರಾತ್ರಿ 9.30 ರವರೆಗೆ ಶಿವಮೊಗ್ಗ ಟೈಗರ್ಸ್ ವರ್ಸಸ್ ಬೆಂಗಳೂರು ರೂರಲ್ ಕೆಂಪೇಗೌಡ ಮತ್ತು ಮೂರನೇ ಮ್ಯಾಚ್ ನ.27 ರಂದು ಸಂಜೆ 7ಗಂಟೆಯಿಂದ ರಾತ್ರಿ 9.30 ರವರೆಗೆ ಶಿವಮೊಗ್ಗ ಟೈಗರ್ಸ್ ವರ್ಸಸ್ ಗದಗ್ ಪವರ್ಸ್ ನಡುವೆ ನಡೆಯಲಿದೆ. ಎಂದು ಶಿವಮೊಗ್ಗದ ಜನತೆ ಆಗಮಿಸಿ ತಂಡಕ್ಕೆ ಪ್ರೋತ್ಸಾಹ ನೀಡಬೇಕು.
– ಚೇತನ್ ದಾಸರಹಳ್ಳಿ, ಶಿವಮೊಗ್ಗ ಟೈಗರ್ಸ್ ಮಾಲೀಕರು

ಪತ್ರಿಕಾಗೋಷ್ಠಿಯಲ್ಲಿ, ವಿಕ್ರಂ, ಚೇತನ್, ಸುಧಾಕರ್, ರಾಘವೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post