ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಲ್ಲಿ ಉತ್ತರ ಕರ್ನಾಟಕ ಭಾಗದಿಂದ ಆರಂಭಗೊಂಡ ವಕ್ಫ್ #Wakf ಭೂದಾಹದ ಹಾವಳಿ ಈಗ ರಾಜ್ಯ ರಾಜಧಾನಿಗೂ ಸಹ ಕಾಲಿಟ್ಟಿದ್ದು, ಮಹಾನಗರದ ಹೃದಯಭಾಗದ ಹಲವು ಪ್ರದೇಶಗಳನ್ನು ತನ್ನದು ಎಂದು ಹೇಳಿಕೊಂಡಿದೆ.
ಕೆಲವು ವ್ಯಾಪಾರಿಗಳು ಖಾಸಗಿ ವಿವಾದವೊಂದಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.

Also read: ಗಮನಿಸಿ! ನ.12-15ರವರೆಗೆ 4 ದಿನ ಈ ಕೆಳಗಿನ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ
ಅವೆನ್ಯೂ ರಸ್ತೆಯಲ್ಲಿನ ಸರ್ವೆ ನಂ.22 ಒಂದರಲ್ಲೇ 138 ಎಕರೆ ತನ್ನದು ಎಂದು ಹೇಳಿಕೊಂಡಿರುವ ವಕ್ಫ್ ಬೋರ್ಡ್ ಒಟ್ಟು 172 ಎಕರೆ ತನಗೆ ಸೇರಿದ್ದು ಎಂದಿದೆ.
ಪ್ರಮುಖವಾಗಿ ಮೆಜೆಸ್ಟಿಕ್ ಸೇರಿದಂತೆ ಬಳೆ ಪೇಟೆ, ಚಿಕ್ಕ ಪೇಟೆ, ಬಿವಿಕೆ ಅಯ್ಯಂಗಾರ್ ರಸ್ತೆ, ಕೆ.ಆರ್. ಮಾರುಕಟ್ಟೆ, ಕಾಟನ್ ಪೇಟೆ ಸೇರಿದಂತೆ ಒಟ್ಟಾರೆಯಾಗಿ ಈ ಭಾಗದ 172 ಎಕರೆ ಆಸ್ತಿ ತನ್ನದು ಎಂದು ಹೇಳಿಕೊಂಡಿದೆ.

ಅವೆನ್ಯೂ ರಸ್ತೆಯಲ್ಲಿ ಸಣ್ಣದೊಂದು ಖಾಸಗಿ ಪ್ರದೇಶದಲ್ಲಿ ದರ್ಗಾ ಅಥವಾ ಮಸೀದಿ ರೂಪದಲ್ಲಿ ಸ್ಥಾಪಿಸಿಕೊಂಡು ಆನಂತರ ಇಡೀ ಪ್ರದೇಶವೇ ತನ್ನದು ಎಂದು ವಕ್ಫ್ ಬೋರ್ಡ್ ಹೇಳಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post