ಕಲ್ಪ ಮೀಡಿಯಾ ಹೌಸ್ | ಮೈಸೂರು |
ಗ್ರಾಹಕರಿಗೆ ಬ್ಯಾಂಕಿಂಗ್ಅನ್ನು ಸುಲಭ, ಸರಳ ಮತ್ತು ಅನುಕೂಲಕರವಾಗಿಸಿರುವ ಫಿನೋ ಪೇಮೆಂಟ್ಸ್ ಬ್ಯಾಂಕ್, ಈಗ ಗ್ರಾಹಕರು ಉಳಿತಾಯವನ್ನು ಹೆಚ್ಚಿಸುವತ್ತ ಗಮನ ಹರಿಸುತ್ತಿದೆ. ಗ್ರಾಹಕರಿಗೆ ಮೌಲ್ಯಯುತ ಸೇವೆಯನ್ನು ಸೃಷ್ಟಿಸುವ ನಿಟ್ಟಿನಲ್ಲಿ ತನ್ನ ಪ್ರಯತ್ನಗಳನ್ನು ಮುಂದುವರೆಸಿರುವ ಫಿನೋ ಬ್ಯಾಂಕ್, ಹಲವಾರು ಪ್ರಯೋಜನಗಳನ್ನು ಒದಗಿಸುವ ಮೂಲಕ ಗ್ರಾಹಕರ ಅನನ್ಯ ಅಗತ್ಯಗಳನ್ನು ಪೂರೈಸಲು, ಅವರ ಉಳಿತಾಯವನ್ನು ಸುಧಾರಿಸುವ ಉದ್ದೇಶದಿಂದ ಹೊಸ ಉಳಿತಾಯ ಖಾತೆ “ಗುಲ್ಲಕ್” ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.
ಕರ್ನಾಟಕ ರಾಜ್ಯದಾದ್ಯಂತ ಹರಡಿರುವ ಸುಮಾರು 22,000 ಫಿನೋ ಬ್ಯಾಂಕ್ನ ಮರ್ಚೆಂಟ್ ಪಾಯಿಂಟ್ಗಳಲ್ಲಿ ಗುಲ್ಲಕ್ ಖಾತೆಯನ್ನು ತೆರೆಯಬಹುದು ಮತ್ತು ಬ್ಯಾಂಕಿಂಗ್ ಪ್ರಯೋಜನಗಳನ್ನು ಆನಂದಿಸಬಹುದು. 1000 ರೂ.ಗಳ ಕನಿಷ್ಠ ಖಾತೆಯ ಬ್ಯಾಲೆನ್ಸ್ನೊಂದಿಗೆ, ಗುಲ್ಲಕ್ ಖಾತೆದಾರರು ಯಾವುದೇ ವಾರ್ಷಿಕ ಯೋಜನಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ, ಯಾವುದೇ ಶುಲ್ಕವಿಲ್ಲದೆ ನಗದು ಠೇವಣಿಗಳನ್ನು ಮಾಡಬಹುದು, ನಾನ್-ಮೆಟ್ರೋ ನಗರಗಳಲ್ಲಿ 7 ಉಚಿತ ಎಟಿಎಂ ವಹಿವಾಟುಗಳನ್ನು ಮಾಡಬಹುದು ಮತ್ತು ರುಪೇ ಡೆಬಿಟ್ ಕಾರ್ಡ್ನಲ್ಲಿ ವಿವಿಧ ಕೊಡುಗೆಗಳನ್ನು ಪಡೆಯಬಹುದು.ಕೆಲವು ಮಾನದಂಡಗಳನ್ನು ಪೂರೈಸಿದ ಮೇಲೆ ಕನಿಷ್ಠ ಖಾತೆಯ ಬ್ಯಾಲೆನ್ಸ್ ಅನ್ನು ಕೂಡ ಮನ್ನಾ ಮಾಡುವುದು ಒಂದು ಉತ್ತೇಜಕ ಪ್ರತಿಪಾದನೆಯಾಗಿದೆ.
Also read: ನಿಮಗೆ ನಾಚಿಕೆ ಆಗಲ್ವ? ಮೈಸೂರಿನ ಎಲ್ಲಾ ತಹಶೀಲ್ದಾರರಿಗೂ ಸಚಿವ ಕೃಷ್ಣ ಬೈರೇಗೌಡ ಛೀಮಾರಿ
ಬಹುಪಾಲು ಜನರು ತಮ್ಮ ಬ್ಯಾಂಕ್ ಖಾತೆಗಳಿಂದ ಎಲ್ಲಾ ಅಥವಾ ಹೆಚ್ಚಿನ ಹಣವನ್ನು ಹಿಂತೆಗೆದುಕೊಂಡು, ಉಳಿತಾಯ ಮತ್ತು ಹೂಡಿಕೆ ಮಾಡುವ ಅವಕಾಶವನ್ನು ಕಳೆದುಕೊಳ್ಳುವ ಇಂದಿನ ಸಂದರ್ಭಗಳಲ್ಲಿ, ಗುಲ್ಲಕ್ (ಪಿಗ್ಗಿ ಬ್ಯಾಂಕ್) ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ.
ಗುಲ್ಲಕ್ ಉಳಿತಾಯ ಖಾತೆಯನ್ನುಘೋಷಿಸುವ ಸಂದರ್ಭದಲ್ಲಿ ಫಿನೋ ಪೇಮೆಂಟ್ಸ್ ಬ್ಯಾಂಕ್ನ ಹಿರಿಯ ವಿಭಾಗೀಯ ಮುಖ್ಯಸ್ಥ ರಾಹುಲ್ ಸಿಂಗ್ “ಗ್ರಾಹಕರು ಭವಿಷ್ಯದ ವೆಚ್ಚಗಳಿಗೆ ಮತ್ತು ಯಾವುದೇ ತುರ್ತು ಅಗತ್ಯಗಳಿಗಾಗಿ ಸಾಲವನ್ನು ತೆಗೆದುಕೊಳ್ಳುದೇ ತಮ್ಮದೇ ಒಂದು ನಿಧಿಯನ್ನು ಸೃಷ್ಟಿಸಲು ಹೆಚ್ಚಿನ ಉಳಿತಾಯದ ಗುರಿಯನ್ನು ಹೊಂದಿರಬೇಕು. ಸುರಕ್ಷತೆ ಮತ್ತು ಬೆಳವಣಿಗೆಯ ಮೇಲೆ ಕೇಂದ್ರೀಕರಿಸುವ ಮೂಲಕ, ಗುಲ್ಲಕ್ ಮೂಲಕ ‘ಮೊದಲು ಉಳಿತಾಯ’ ಎಂಬ ಮನಸ್ಥಿತಿಯನ್ನು ಅಭಿವೃದ್ಧಿಪಡಿಸಲು ಖಾತೆದಾರರಿಗೆ ಸಹಾಯ ಮಾಡುವುದು ನಮ್ಮ ಉದ್ದೇಶವಾಗಿದೆ. ಹೆಚ್ಚಿನ ಠೇವಣಿಗಳು ಗ್ರಾಹಕರಿಗೆ ವಾರ್ಷಿಕವಾಗಿ 7.75% ವರೆಗೆ ಆಕರ್ಷಕ ಬಡ್ಡಿ ದರಗಳನ್ನು ಗಳಿಸಲು ಅನುವು ಮಾಡಿಕೊಡುತ್ತವೆ. ಖಾತೆಯಲ್ಲಿ ಕನಿಷ್ಠ ರೂ 1000 ಬ್ಯಾಲೆನ್ಸ್ ಹೊಂದಿರುವ ಗ್ರಾಹಕರು ತತ್ಕ್ಷಣ ರೂ 2 ಲಕ್ಷದವರೆಗಿನ ವಿಮಾ ರಕ್ಷಣೆಯ ಸೌಲಭ್ಯವಿರುವ ಡೆಬಿಟ್ ಕಾರ್ಡ್ಅನ್ನು ಪಡೆಯುತ್ತಾರೆ, ಮತ್ತು ಮಾಸಿಕ ಬಡ್ಡಿ ಪಾವತಿ ಸೇರಿದಂತೆ ಹಲವು ಪ್ರಯೋಜನಗಳನ್ನು ಪಡೆಯುತ್ತಾರೆ” ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post