ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ #D S Arun ವಿವಿಧ ಸಮಾಜಮುಖಿ ಸೇವಾ ಕಾರ್ಯಗಳ ಮುಖಾಂತರ ತಮ್ಮ 52ನೇ ಜನ್ಮದಿನ ಆಚರಿಸಿಕೊಂಡರು.
ಎಂಎಲ್‌ಸಿ ಡಿ.ಎಸ್.ಅರುಣ್ ಜನ್ಮದಿನದ ಪ್ರಯುಕ್ತ ಸ್ನೇಹಿತರ ಜತೆಗೂಡಿ ರಕ್ತದಾನ ಮಾಡಿದರು. ಈವರೆಗೂ ಅರುಣ್ ಅವರು 42 ಬಾರಿ ರಕ್ತದಾನ ಮಾಡಿದ್ದಾರೆ.

Also read: ಪ್ರತಿಭಾ ಕಾರಂಜಿಯಿಂದ ಮಕ್ಕಳ ವಿಭಿನ್ನ ಪ್ರತಿಭೆ ಅನಾವರಣ: ಶಾಸಕ ಚನ್ನಬಸಪ್ಪ
ಬುಧವಾರ ಬೆಳಗ್ಗೆ ಹುಣಸೋಡು ಗೋಶಾಲೆಯಲ್ಲಿ ಗೋಮಾತೆ ಪೂಜೆ ನೆರವೇರಿಸಿದರು. ಹುಲ್ಲು ಹಿಂಡಿ ಹಾಗೂ ಧನಸಹಾಯ ನೀಡಿ ಕುಟುಂಬದ ಸದಸ್ಯರು ಹಾಗೂ ಎಲ್ಲ ಸ್ನೇಹಿತರೊಂದಿಗೆ ಗೋಪೂಜೆ ಮಾಡಿದರು.

ರೋಟರಿ ರಕ್ತ ನಿಧಿ ಟ್ರಸ್ಟ್ ಮಾಜಿ ಚೇರ್ಮನ್ ಜಗನ್ನಾಥ್, ಮನೋಜ್, ಅಮರ್ ಶೆಟ್ಟಿ, ಸುರೇಶ್ ಸಿಂಗ್, ಕಿರಣ್, ನಾಗರಾಜ್, ರಾಘವೇಂದ್ರ ಪೈ, ನಾಗರಾಜ್ ಶೆಟ್ಟರ್, ಮುರುಗನ್, ಸಂತೋಷ್ ಕುಮಾರ್, ರಾಜೇಶ್ ಗೌಡ, ಪ್ರತಿಭಾ ಅರುಣ್, ಸುಕನ್, ಸುಪ್ರೀತಾ ಹಾಗೂ ಸ್ನೇಹಿತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post