ಕಲ್ಪ ಮೀಡಿಯಾ ಹೌಸ್ | ಮಲಪ್ಪುರಂ (ಕೇರಳ) |
ತನ್ನ ಅಪ್ರಾಪ್ತ ಮಲ ಮಗಳ #Minor Girl ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದ ವ್ಯಕ್ತಿಯೊಬ್ಬನಿಗೆ ಕೇರಳದ ನ್ಯಾಯಾಲಯ #Kerala Court 141 ವರ್ಷಗಳ #141Years ಜೈಲು ಶಿಕ್ಷೆ ವಿಧಿಸಿದೆ.
ಮಂಜೇರಿ ಫಾಸ್ಟ್ ಟ್ರಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಶ್ರಫ್ ಎ ಎಂ ಅವರು ಪುರುಷನಿಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, ಐಪಿಸಿ ಮತ್ತು ಬಾಲಾಪರಾಧ ನ್ಯಾಯ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಒಟ್ಟು 141 ವರ್ಷಗಳವರೆಗೆ ವಿವಿಧ ಅವಧಿಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ.
Also read: ಶಿವಮೊಗ್ಗ | ಹಾಡಹಗಲೇ ರೌಡಿ ಶೀಟರ್ ಬರ್ಬರ ಹತ್ಯೆ

ಅಪರಾಧಿ ಮತ್ತು ಸಂತ್ರಸ್ತೆ ತಮಿಳುನಾಡು ಮೂಲದವರಾಗಿದ್ದು, ತಾಯಿ ಮನೆಯಲ್ಲಿ ಇಲ್ಲದಿದ್ದಾಗ ತನ್ನ ಅಪ್ರಾಪ್ತ ಮಲ ಮಗಳ ಮೇಲೆ ಮಲತಂದೆಯು 2017 ರಿಂದ ಲೈಂಗಿಕ ದೌರ್ಜನ್ಯ #Sexual assault ನಡೆಸುತ್ತಿದ್ದರು ಎಂದು ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post