ಕಲ್ಪ ಮೀಡಿಯಾ ಹೌಸ್ | ಮೈಸೂರು |
ಪ್ರಯಾಣಿಕರ ಅನುಕೂಲಕ್ಕಾಗಿ 2025ರ ಜನವರಿಯಿಂದ ತಾತ್ಕಾಲಿಕವಾಗಿ ನಾಲ್ಕು ಎಕ್ಸ್’ಪ್ರೆಸ್ #ExpressTrain ರೈಲುಗಳಿಗೆ ಎಸಿ ಬೋಗಿಯನ್ನು ಜೋಡಣೆ ಮಾಡಲಾಗುತ್ತಿದೆ.
ಈ ಕುರಿತಂತೆ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾಹಿತಿ ನೀಡಿದ್ದು, ನಾಲ್ಕು ರೈಲುಗಳಿಗೆ ತಲಾ ಒಂದು ಫಸ್ಟ್ ಕಮ್ ಸೆಕೆಂಡ್ ಎಸಿ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಯಾವೆಲ್ಲಾ ರೈಲುಗಳಿಗೆ ಜೋಡಣೆ?
1. ಜನವರಿ 4 ರಿಂದ ಮೇ 3, 2025 ರವರೆಗೆ ರೈಲು ಸಂಖ್ಯೆ 17301 ಮೈಸೂರು-ಬೆಳಗಾವಿ #Belgaum ಡೈಲಿ ಎಕ್ಸ್’ಪ್ರೆಸ್.
2. ಜನವರಿ 1 ರಿಂದ ಏಪ್ರಿಲ್ 30, 2025 ರವರೆಗೆ ರೈಲು ಸಂಖ್ಯೆ 17302 ಬೆಳಗಾವಿ-ಮೈಸೂರು ಡೈಲಿ ಎಕ್ಸ್’ಪ್ರೆಸ್.
3. ಜನವರಿ 2 ರಿಂದ ಮೇ 1, 2025 ರವರೆಗೆ ರೈಲು ಸಂಖ್ಯೆ 17307 ಮೈಸೂರು-ಬಾಗಲಕೋಟೆ ಬಸವ ಡೈಲಿ ಎಕ್ಸ್’ಪ್ರೆಸ್.
4. ಜನವರಿ 3 ರಿಂದ ಮೇ 2, 2025 ರವರೆಗೆ ರೈಲು ಸಂಖ್ಯೆ 17308 ಬಾಗಲಕೋಟೆ-ಮೈಸೂರು #Mysore ಬಸವ ಡೈಲಿ ಎಕ್ಸ್’ಪ್ರೆಸ್.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post