ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಉಂಬ್ಳೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಡಿಕೆಗಳ್ಳರ ಹಾವಳಿ ಹೆಚ್ಚಾಗಿದೆ. ರಾತ್ರೋರಾತ್ರಿ ಅಡಿಕೆ ತೋಟಕ್ಕೆ ನುಗ್ಗಿ ಮರದಿಂದಲೇ ಅಡಿಕೆಗೊಂಚಲು ಗಳನ್ನು ಕ್ವಿಂಟಾಲ್ ಗಟ್ಟಲೆ ಕಳುವು ಮಾಡುತ್ತಿರುವ ಬಗ್ಗೆ ವರದಿಯಾಗಿದೆ.
ಒಂದು ವಾರದ ಹಿಂದೆ ಭದ್ರಾವತಿಯ ಕಾಕನಹೊಸೂಡಿ ಯಲ್ಲಿ ಈಶಣ್ಣ ಎನ್ನುವವರ ತೋಟ ಸೇರಿದಂತೆ ಇನ್ನಿಬ್ಬರ ತೋಟದಲ್ಲಿ ಅಡಿಕೆಗಳ್ಳರು ಅಡಿಕೆ ಕಳ್ಳತನ ನಡೆದಿದೆ. ತಲಾ ತೋಟದಿಂದ 10-12 ಕ್ವಿಂಟಾಲ್ ಹಸಿ ಅಡಿಕೆ ಕಳ್ಳತನವಾಗಿದೆ. ಈ ಬಗ್ಗೆ ಈಶಣ್ಣ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Also read: ರಾಜ್ಯ ಸಿವಿಲ್ ಸೇವೆ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಅನ್ಯಾಯ | MLC ಡಿ.ಎಸ್. ಅರುಣ್ ಕಿಡಿ

ಈ ಬಗ್ಗೆ ಕೃಷ್ಣಗೌಡರು ಮತ್ತು ರಾಮೇಗೌಡರು ಭದ್ರಾವತಿಯ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಉಂಬ್ಳೆಬೈಲಿನ ಗ್ರಾಮಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಈಗ ಸೀಸನ್ ಇದೆ. ಬಾಳೆಹೊನ್ನೂರಿಗೆ ವಾಹನಗಳು ಇಲ್ಲಿಂದ ಲೋಡ್ ಮಾಡಿಕೊಂಡು ಹೋಗುತ್ತಾರೆ. ರಾತ್ರಿ ಹೊತ್ತು ಕಾವಲು ಇಲ್ಲದ ಕಾರಣ ಕಳುವು ಹೆಚ್ಚಾಗಿದೆ. ಪೊಲೀಸರು ಅಡಿಕೆಕಳ್ಳರಿಂದ ರೈತರಿಗೆ ಮುಕ್ತಿದೊರಕಿಸಿಕೊಡಬೇಕು ಎಂದು ಮನವಿ ಮಾಡಿಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post