ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಮ್ಮ ಪಕ್ಷದವರಿಂದಲೇ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು #Sexual Harassment Cases ನಡೆಯುತ್ತಿದ್ದರೂ ಕೂಡ ಬಿಜೆಪಿಯ ಭೀಷ್ಮನಂತಹ ಹಿರಿಯರು ಮೌನಕ್ಕೆ ಶರಣಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಟೀಕಿಸಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿಯವರು #C T Ravi ಸಚಿವೆ ಲಕ್ಷ್ಮೀಹೆಬ್ಬಾಳಕರ್‍ರವರ #Minister Lakshmi Hebbalkar ಕುರಿತು ಮಾಡಿದ ಅವಮಾನಕರ ಅವಾಚ್ಯ ಶಬ್ದ ಬಳಸಿದ್ದರೂ ಬಿಜೆಪಿಯ ಹಿರಿಯರು ಏನೂ ಮಾತನಾಡದೇ ಸುಮ್ಮನಿದ್ದಾರೆ. ಸಿ.ಟಿ.ರವಿಯ ಬಾಯಲ್ಲಿ ಇಂತಹ ಮಾತು ಬರಬಹುದು ಎಂಬ ನಿರೀಕ್ಷೆ ಇತ್ತು ಅವರು ಈ ಹಿಂದೆ ಹಲವು ಬಾರಿ ಈ ರೀತಿಯ ಮಾತನಾಡಿದ್ದಾರೆ. ಈ ಹಿಂದೆಯೂ ಕೂಡ ನಿತ್ಯಾ ಸುಮಂಗಲಿ ಎಂಬ ಪದವನ್ನು ಅವರು ಪ್ರಯೋಗಿಸಿದ್ದರು ಎಂದರು.
ಸಿ.ಟಿ.ರವಿ ಸಚಿವೆಯವರ ವಿರುದ್ಧ ಮಾತನಾಡಿರುವುದು ನಿಜ. ಈಗಾಗಲೇ ಇದು ಮೊಬೈಲ್‍ಗಳಲ್ಲಿ ದಾಖಲೆಯಾಗಿದೆ. ಆದರೆ ಈ ಬಗ್ಗೆ ಬಿಜೆಪಿಯವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಮಾತನಾಡಿದ್ದನ್ನು ಖಂಡಿಸುವುದನ್ನು ಬಿಟ್ಟು ಸಮರ್ಥಿಸಿಕೊಳ್ಳುತ್ತಿದ್ದಾರೆ. ಕೌರವರ ಆಸ್ಥಾನದಲ್ಲಿ ಭೀಷ್ಮ ಮುಂತಾದ ಹಿರಿಯರು ಮೌನವಾಗಿದಂತ್ತೆ ಇವರು ಕೂಡ ಮೌನವಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಈ ಹಿಂದೆ ಬಿಜೆಪಿಯಲ್ಲಿ ನಡೆದಿರಬಹುದಾಗ ಪೋಕ್ಸ್ ಪ್ರಕರಣ, ಹಾಸನದ ಪ್ರಕರಣ, ಪುರುಷರ ಮೇಲೂ ಅತ್ಯಾಚಾರ, ಮಹಿಳೆಯರ ಮೇಲೂ ಅತ್ಯಾಚಾರ, ಮುನಿರತ್ನರವರ ಹನಿಟ್ರ್ಯಾಪ್ ಪ್ರಕರಣ, ಈಗ ಸಿ.ಟಿ.ರವಿ ಪ್ರಕರಣ, ಹೀಗೆ ಸಾಲುಸಾಲು ಪ್ರಕರಣಗಳು ನಡೆಯುತ್ತಿದ್ದರೂ ಕೂಡ ಖಂಡನೆ ಮಾಡುವುದನ್ನು ಬಿಟ್ಟು ಸುಮರ್ಥಿಸಿಕೊಳ್ಳುತ್ತ ಬಂದಿದ್ದಾರೆ ಎಂದರು.
Also read: ಸಿ.ಟಿ.ರವಿ ವಿರುದ್ಧ ಕಾನೂನು ಸಮರ | ಪ್ರಧಾನಿ, ರಾಷ್ಟ್ರಪತಿಗೂ ದೂರು | ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಸಿ.ಟಿ.ರವಿಯನ್ನು ಒಬ್ಬ ಮಹಾನ್ ವ್ಯಕ್ತಿಯಂತೆ ಚಿತ್ರಿಸುತ್ತಿರುವುದು ತೀರ ವ್ಯಂಗ್ಯವಾಗಿದೆ. ಅದರಲ್ಲೂ ಆತ ಚಿಕ್ಕಮಗಳೂರಿಗೆ ಹೋದಾಗ ಅವರಿಗೆ ಭವ್ಯ ಸ್ವಾಗತ ಕೋರಿತು. ಅಂಬ್ಯುಲೆನ್ಸ್ ಸೈರೆನ್ಸ್ ಮೂಲಕ ಅವರನ್ನು ಸ್ವಾಗತಿಸಲಾಯಿತು. ಇದು ಸರಿಯಾಗಿಯೇ ಇದೆ. ಅಂಬ್ಯುಲೆನ್ಸ್‍ನಲ್ಲಿ ಒಬ್ಬ ರೋಗಗ್ರಸ್ಥ ವ್ಯಕ್ತಿಯನ್ನು ಕರೆತರಲು ಸಾಧ್ಯ. ಯಾವ ಸಂಕೋಚವು ಇಲ್ಲದೆ, ಲಜ್ಜೆಯೂ ಇಲ್ಲದೆ, ಆತನನ್ನು ಅಂಬ್ಯುಲೆನ್ಸ್ ಸೈಲೆನ್ಸ್ ಮೂಲಕ ಕರೆತಂದಿರುವುದು ಸರಿಯಾಗಿಯೇ ಇದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿಯ ಕೆಲವು ನಾಯಕರು ಇಂತಹ ಪ್ರಸಂಗಗಳು ಬಂದಾಗ, ಇವರ ತಾಯಿಗೆ ಹೇಳಿದರೆ, ತಂಗಿಗೆ ಹೇಳಿದರೆ ಎಂದು ಕೇಳುತ್ತಿದ್ದರು. ಈಗ ಸಿ.ಟಿ.ರವಿಗೆ ಅಥವಾ ಬಿಜೆಪಿ ನಾಯಕರಿಗೆ ನಾವು ಈ ಮಾತು ಹೇಳಬೇಕಾಗಿದೆ. ಆಕಸ್ಮಾತ್ ಸಿ.ಟಿ.ರವಿ ನಿಮ್ಮ ಕುಟುಂಬದವರಿಗೆ ಹೇಳಿದರೆ ನಿಮಗೆ ಏನು ಅನಿಸುತ್ತಿತ್ತು, ನೀವು ಏನು ಮಾಡುತ್ತಿದ್ದಿರಿ, ಇಂತಹ ಘಟನೆಗಳಿಂದ ಬಿಜೆಪಿಯವರು ತಲೆತಗ್ಗಿಸಬೇಕು. ಅದರ ಬದಲು ಹೂವು ಮಳೆ ಸುರಿಸಿ ಮೆರವಣಿಗೆ ಮಾಡುತ್ತಾರೆ. ಇದು ಯಾವ ಸಂಸ್ಕøತಿ ಎಂದು ಪ್ರಶ್ನೆ ಮಾಡಿದರು.
ಸಿ.ಟಿ.ರವಿಯವರನ್ನು ಎಳೆದು ರಾತ್ರಿಯೆಲ್ಲಾ ವಿವಿಧ ಕಡೆಗಳಲ್ಲಿ ಸುತ್ತಾಡಿಸಿದ್ದರೆ. ಪೊಲೀಸರು ಗೂಂಡಾತನದಲ್ಲಿ ವರ್ತಿಸಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ. ಆದರೆ ನನ್ನ ದೃಷ್ಟಿಯಲ್ಲಿ ಪೋಲೀಸರು ಸಿ.ಟಿ.ರವಿಯವರನ್ನು ರಕ್ಷಣೆ ಮಾಡಿದ್ದಾರೆ ಎಂದೇ ಹೇಳಬಹುದು. ಬೆಳಗಾವಿಯಂತಹ ಊರಲ್ಲಿ ಸಚಿವೆ ಪರ ಇರುವವರು ಇದ್ದೇ ಇರುತ್ತಾರೆ. ಅವರನ್ನು ಯಾವುದೇ ಪೊಲೀಸ್ ಠಾಣೆಯಲ್ಲಿ ಇಟ್ಟರೂ ಕೂಡ ಎರಡು ಕಡೆಯವರ ನಡುವೆ ಗಲಾಟೆಯಾಗಬಹುದು ಎಂದು ನಿರೀಕ್ಷಿಸಿ ಈ ರೀತಿ ಮಾಡಿದ್ದಾರೆ ಅಷ್ಟೇ ಎಂದರು.
ಸಿ.ಟಿ.ರವಿ ಈಗಲಾದರು ಸಚಿವೆ ಲಕ್ಷ್ಮೀಹೆಬ್ಬಾಳ್ಕರ್‍ರವರ ಕ್ಷಮೆ ಕೇಳಿ ಈ ಪ್ರಕರಣಕ್ಕೆ ಅಂತ್ಯ ಹಾಡಬೇಕು. ಬಿಜೆಪಿ ನಾಯಕರು ಕೂಡ ಮೌನ ಮುರಿದು ಈ ಘಟನೆಯನ್ನು ಖಂಡಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಕೆಪಿಸಿಸಿ ಸದಸ್ಯ ವೈ.ಹೆಚ್.ನಾಗರಾಜ್, ಪ್ರಮುಖರಾದ ಶಿವಣ್ಣ, ಯು. ಶಿವಾನಂದ್, ಕೃಷ್ಣಪ್ಪ, ಆಪ್ರೀಧಿ, ಅರ್ಚನ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post