ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀ ಗುರುಗುಹ ವಾಗ್ಗೇಯ ಪ್ರತಿಷ್ಠಾನ ಟ್ರಸ್ಟ್ (ರಿ) ಹಾಗೂ ಶ್ರೀ ಗುರುಗುಹ ಗಾನಸಭಾ ಇವರ ಸಂಯುಕ್ತಾಶ್ರಯದಲ್ಲಿ 19ನೇ ವರ್ಷದ ಮಾರ್ಗಶಿರ ರಾಷ್ಟ್ರೀಯ ವೀಣಾ ಮಹೋತ್ಸವ ಸಪ್ತಾಹ ಕಾರ್ಯಕ್ರಮವು ಡಿ.25 ರಿಂದ 31 ರವರೆಗೆ ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ (ಬಲಮುರಿ) ದೇವಸ್ಥಾನದಲ್ಲಿ ಆಯೋಜಿಸಲಾಗಿದೆ ಎಂದು ಶ್ರೀ ಗುರುಗುಹ ವಾಗ್ಗೇಯ ಪ್ರತಿಷ್ಠಾನ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ನಾಗರಾಜ್ ತಿಳಿಸಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, 7 ದಿನಗಳ ವೀಣಾ ಕಾರ್ಯಕ್ರಮಗಳು ವೀಣಾನಾದ ಯಜ್ಞ ಎಂಬ ಶೀರ್ಷಿಕೆ ಅಡಿಯಲ್ಲಿ ನಡೆಸಲಿದೆ. ಈ ವೀಣಾ ಉತ್ಸವವನ್ನು, ಸಂಗೀತಕ್ಕೆ ಸೇವೆಗೈದ ಶಿವಮೊಗ್ಗೆಯ ಹಿರಿಯ ಸಂಗೀತ ವಿದ್ವಾಂಸರಾದ, ಕೀರ್ತಿಶೇಷ ವಿದ್ವಾನ್ ಗುರು ಹೆಚ್.ಆರ್.ಪ್ರಸನ್ನ ವಂಕಟೇಶ್ ರವರಿಗೆ ಸಮರ್ಪಿಸಲಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ವೀಣಿಯನ್ನು ಕುರಿತು, ಒಂದು ವಾರದ ಸಪ್ತಾಹ ಕಾರ್ಯಕ್ರಮವು ನಡೆದಿರುವುದು ಇತಿಹಾಸದಲ್ಲಿ ಇನ್ನೆಲ್ಲೂ ಕಂಡುಬಂದಿರುವುದಿಲ್ಲ. ಶ್ರೀ ಗರುಗುಹ ಸಂಸ್ಥೆಯು ವೀಣೆಯ ಕಾರ್ಯಕ್ರಮಗಳ ಸಪ್ತಾಹವನ್ನು ನಿರಂತರವಾಗಿ 19 ವರ್ಷಗಳಿಂದ ನಡೆಸಿಕೊಂಡು ಬಂದಿರುವುದು ವಿಶ್ವ ಸಂಗೀತ ಕ್ಷೇತ್ರದಲ್ಲಿಯೇ ಇತಿಹಾಸ ನಿರ್ಮಿಸಿದೆ ಎಂದರು.
ಮಾರ್ಗಶಿರ ರಾಷ್ಟ್ರೀಯ ವೀಣಾ ಮಹೋತ್ಸವ ಸಪ್ತಾಹ ವೀಣಾ ನಾದ ಯಜ್ಞ ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಆರ್ಥಿಕ ಹಾಗೂ ಪರಿಸರ ತಜ್ಞ ಮತ್ತು ಪರಿಯಾವರ್ಣ ಟ್ರಸ್ಟ್‍ನ ಅಧ್ಯಕ್ಷರಾದ ಬಿ.ಎಂ.ಕುಮಾರಸ್ವಾಮಿ ನೆರವೇರಿಸಲಿದ್ದಾರೆ. ಖ್ಯಾತ ವೈದ್ಯರು ಹಾಘೂ ಅಭಿರುಚಿ ಅಧ್ಯಕ್ಷರಾದ ಡಾ. ಎ.ಶಿವರಾಮಕೃಷ್ಣ ರವರ ಅಧ್ಯಕ್ಷತೆ ವಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೇವತಿ ರಘೂರಾಮ್ ಕಾಮತ್ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷೆ ವೀಣಾ ವಿದುಷಿ ರೇವತಿ ಕಾಮತ್, ಕರ್ನಾಟಕ ಸಂಗೀತ ವಿದುಷಿ ಹಾಗೂ ರಂಗಕರ್ಮಿ ವಿಜಯಾ ಕಾಂತೇಶ್, ಕಲಾಪೋಷಕರು ಹಾಗೂ ಕೆನರಾ ಬ್ಯಾಂಕ್ ಉದ್ಯೋಗಿ ಗೀತಾಂಜಲಿ ಪ್ರಸನ್ನಕುಮಾರ್ ಭಾಗವಹಿಸಲಿದ್ದಾರೆ ಎಂದರು.
Also read: ಇದೇನು ಪೊಲೀಸ್ ಗುಂಡಾ ರಾಜ್ಯವೇ? ಅವರ ಹಿಂದೆ ಯಾವ ರಾಜಕಾರಣಿಗಳಿದ್ದಾರೆ | ಈಶ್ವರಪ್ಪ ಕಿಡಿ
ಡಿ.25 ರ ಸಂಜೆ 6.30 ಕ್ಕೆ ಕೀರ್ತಿಶೇಷ ವೀಣಾ ವಿದ್ವಾನ್ ಎನ್.ಕೃಷ್ಣಮೂರ್ತಿ ಇವರ ಸಂಸ್ಮರಣ ಕಾರ್ಯಕ್ರಮ ವೀಣಾ ಸುಪೋಷಿಣಿ, ಡಿ.26 ರಂದು ಕೀರ್ತಿಶೇಷ ವೀಣಾ ವಿದುಷಿ ಡಾ. ಅರುಂಧತಿ ವಿ ರಾವ್ ಇವರ ಸಂಸ್ಮರಣ ಕಾರ್ಯಕ್ರಮ ವೀಣೋಲ್ಲಾಸಿರಿ, ಡಿ.27 ರಂದು ಕೀತಿಶೇಷ ವಿದುಷಿ ಕೆ.ಆರ್.ಭಾಗ್ಯಲಕ್ಷ್ಮೀ ರಾಮಣ್ಣ ಇವರ ಸಂಸ್ಮರಣ ಕಾರ್ಯಕ್ರಮ ವೀಣಾನುರಾಗಿಣಿ, ಡಿ.28 ರಂದು ಕೀರ್ತಿಶೇಷ ವಿದುಷಿ ಕನಕವಲ್ಲಿ ರ್ರಾವನ್ ಇವರ ಸಂಸ್ಮರಣ ಕಾರ್ಯಕ್ರಮ ವೀಣಾ ಸುಲಕ್ಷಿಣಿ, ಡಿ.29 ರಂದು ವೀಣಾ ವಿಹಾರಿಣಿ, ಡಿ.30 ರಂದು ವೀಣಾ ಸುಹಾಸಿರಿ ಹಾಗೂ ಡಿ.31 ರಂದು ಕೀರ್ತಿಶೇಷ ಶಂಕರನಾರಾಯಣ ಕಾಶಿ ಇವರ ಸಂಸ್ಮರಣಾ ವೀಣೋತ್ತುಂಗಿಣಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳು ಒಟ್ಟಿನಲ್ಲಿ ಒಂದು ವಾರದ ವೀಣಾ ನಾದೋಪಾಸನೆಯ ಯಜ್ಞವೇ ಆಗಿರುತ್ತದೆ ಎಂದರು.
ಡಿ.31 ರಂದು ಸಂಜೆ 6.00 ಗಂಟೆಗೆ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಿವಮೊಗ್ಗೆಯ ಕರ್ನಾಟಕ ಸಂಘದ ಅಧ್ಯಕ್ಷ ಡಾ. ಹೆಚ್.ಆರ್.ಶಂಕರನಾರಾಯಣ ಶಾಸ್ತ್ರಿಗಳು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆಯ ಅಧ್ಯಕ್ಷ ಡಾ. ಶ್ರೀಧರ್.ಎಸ್, ಎಸ್.ಎನ್.ಕೆ.ಟ್ರಸ್ಟ್‍ನ ಅಧ್ಯಕ್ಷೆ ನಿರ್ಮಲ ಕಾಶಿ, ನಿವೃತ್ತ ಪ್ರಾಂಶುಪಾಲರಾದ ಡಾ. ನಾಗಮಣಿ.ಎಸ್ ಆಗಮಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಟ್ರಸ್ಟ್‍ನ ಸಂಹಿತ.ಎಸ್.ಎನ್, ಹರಿಕೃಷ್ಣ ಭಟ್, ಸಹನಾರಮೇಶ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post