ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಉಣಕಲ್ನ ಅಚ್ಚವ್ವನ ಕಾಲೋನಿಯಲ್ಲಿ ನಡೆದ ಸಿಲಿಂಡರ್ ಸೋರಿಕೆ ಪ್ರಕರಣದ #Cylinder Leakage Case ಮೃತರ ಸಂಖ್ಯೆ 5ಕ್ಕೆ ಏರಿಕೆಯಾಗಿದ್ದು, ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ಮಾಲಾಧಾರಿ ಸಾವಿಗೀಡಾಗಿದ್ದಾನೆ ಎಂದು ವರದಿಯಾಗಿದೆ.
ಧಾರವಾಡ ತಾಲೂಕಿನ ಸತ್ತೂರ ಗ್ರಾಮದ ಶಂಕರ ಚವ್ಹಾಣ ( 29) ಸಾವಿಗೀಡಾಗಿದ್ದಾನೆ. ಘಟನೆಯಲ್ಲಿ ಗಂಭೀತವಾಗಿ ಗಾಯಗೊಂಡಿದ್ದ ಈತ ಕಳೆದ 13 ವರ್ಷದಿಂದ ಕಿಮ್ಸನಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದು, ಮೊದಲ ಬಾರಿಗೆ ಅಯ್ಯಪ್ಪಸ್ವಾಮಿ ಮಾಲಾಧಾರಿಯಾಗಿದ್ದ.
ಈಗಾಗಲೇ ನಿಜಲಿಂಗಪ್ಪ ಬೇಪುರಿ ( 58), ಸಂಜಯ್ ಸವದತ್ತಿ ( 20), ರಾಜು ಮೂಗೇರಿ (21), ಲಿಂಗರಾಜು ಬೀರನೂರ (24) ಸಾವಿಗೀಡಾಗಿದ್ದರು. ಇನ್ನು ಘಟನೆಯಲ್ಲಿ ಗಾಯಗೊಂಡಿರುವ ಮಂಜುನಾಥ್ ವಾಗ್ಮೋಡೆ (22), ಪ್ರಕಾಶ್ ಬಾರರ್ಕೇ ( 42) ಹಾಗೂ ತೇಜರ್ಸ್ವ ಸಾತರೆ ( 26)ಚಿಂತಾಜನಕ ಸ್ಥಿತಿಯಲ್ಲಿದ್ದು, ವಿನಾಯಕ್ ಬಾರಕೇರ ( 12) ಬದುಕುಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post