ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಲ್ಲಿ ಕಬ್ಬು, ಎಳ್ಳು, ಬೆಲ್ಲ #Sugarcane, Ellu-Bella ಬೀರುತ್ತಿದ್ದ ವಿದ್ಯಾರ್ಥಿಗಳು ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ಹಿಗ್ಗಿ ಬರುತ್ತಿರುವ ಸುಗ್ಗಿ ಕಾಲವನ್ನು ಸಂಭ್ರಮದಿ ಸ್ವಾಗತಿಸಿದರು.
ಮಂಗಳವಾರ ನಗರದ ಎಸ್.ಆರ್. ನಾಗಪ್ಪ ಶೆಟ್ಟಿ ಸ್ಮಾರಕ ರಾಷ್ಟಿçÃಯ ಅನ್ವಯಿಕ ವಿಜ್ಞಾನ ಕಾಲೇಜಿನ ವತಿಯಿಂದ ಸಂಕ್ರಾAತಿ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ `ಸುಗ್ಗಿ ಸಂಭ್ರಮ’ ಕಾರ್ಯಕ್ರಮವು ಜನಪದ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು.
ತಳಿರು ತೋರಣ ಚಪ್ಪರದಿಂದ ಸಿಂಗಾರಗೊAಡಿದ್ದ ಕಾಲೇಜಿನ ಆವರಣದಲ್ಲಿ, ಕಬ್ಬುಗಳನ್ನು ಜೋಡಿಸಿ ಭತ್ತದ ರಾಶಿಯನ್ನು ಮಾಡಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರು.
Also read: ಜನಸಾಮಾನ್ಯರಿಗೆ ಬಿಗ್ ಶಾಕ್ | ಸಕ್ಕರೆ ಬೆಲೆಯಲ್ಲಿ ಏರಿಕೆ | ಕಾರಣವೇನು?
ನಡು ಅಕಾಡದ ಚಕ್ರವರ್ತಿ ಶಿವಮೊಗ್ಗದ ಶ್ರೀ ನಂದಿ ಹೋರಿ ಮತ್ತು ಗೊಂದಿ ಚಟ್ನಳ್ಳಿಯ ಭೈರವ ಹೋರಿಗಳು ನೋಡುಗರನ್ನು ಆಕರ್ಷಿಸಿತು. ವಿವಿಧ ಬಗೆಯ ರಂಗೋಲಿ ವಿನ್ಯಾಸಗಳು, ಹಳ್ಳಿ ಹೈದರಂತೆ ಬಂದಿದ್ದ ವಿದ್ಯಾರ್ಥಿಗಳು ಧೋತಿ, ಪಂಚೆಯಲ್ಲಿ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಸೀರೆಯಲ್ಲಿ ಕಂಗೊಳಿಸಿದರು. ವಿದ್ಯಾರ್ಥಿಗಳು ಸೆಲ್ಪಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವಿದ್ಯಾರ್ಥಿಗಳು ವಿವಿಧ ಗೀತೆಗಳಿಗೆ ಹೆಜ್ಜೆ ಹಾಕಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ, ಪ್ರಾಂಶುಪಾಲರಾದ ಡಾ.ಕೆ.ಎಲ್. ಅರವಿಂದ, ಸಂಯೋಜಕರಾದ ರೇಖಾ, ಲಕ್ಷö್ಮಣ್ ಉಪನ್ಯಾಸಕರಾದ ದತ್ತಾತ್ರಿ, ಡಾ.ಮುಕುಂದ, ಪ್ರಶೀತ್ ಕೇಕುಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post