ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ #Subbaiah Medical College ಹಾಗೂ ಭಾರತೀಯ ವೈದ್ಯಕೀಯ ಸಂಘದ #IndianMedicalAssociation ಸಹಯೋಗದಲ್ಲಿ `ಥಟ್ ಅಂತ ಹೇಳಿ’ ಖ್ಯಾತಿಯ ಡಾ.ನಾ.ಸೋಮೇಶ್ವರ ಅವರಿಂದ ನಗರದಲ್ಲಿ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಜನವರಿ 18ರಂದು ಬೆಳಗ್ಗೆ 10 ಗಂಟೆಗೆ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ.
`ಥಟ್ ಅಂತ ಹೇಳಿ’ #That Antha Heli ಕಾರ್ಯಕ್ರಮ ಖ್ಯಾತಿ ಡಾ.ನಾ. ಸೋಮೇಶ್ವರ ಅವರು `ಕನ್ನಡ, ಕನ್ನಡಿಗ, ಕರ್ನಾಟಕ’ ವಿಷಯದ ಕುರಿತಾಗಿ ವಿಶೇಷ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
Also read: 20 ವರ್ಷದಿಂದ ಪಾಳು ಬಿದ್ದ ಮನೆ | ಅದರಲ್ಲೊಂದು ಫ್ರಿಡ್ಜ್ | ಒಳಗೊಂದು ಅಸ್ಥಿಪಂಜರ | ಕೊಲೆಯೇ?
ವೈದ್ಯಕೀಯ, ವೈದ್ಯಕೀಯೇತರ ವಿದ್ಯಾರ್ಥಿಗಳು ಮತ್ತು ಆಸಕ್ತ ಸಾರ್ವಜನಿಕರೂ ಸಹ ಭಾಗವಹಿಸಲು ಅವಕಾಶವಿದೆ.
ನೋಂದಣಿಗಾಗಿ ಮೊ: 98440 83284, 90089 79196 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post