ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಧನುರ್ಮಾಸ #Dhanurmasa ಸಮಾಪ್ತಿಯಾಗಿ ಪೌರ್ಣಮಿ ಆರಂಭವಾದ ಹಿನ್ನೆಲೆಯಲ್ಲಿ ಜಯನಗರ 5ನೇ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ #Shri Raghavendraswamy Mutt ವಿಶೇಷ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ #Shri Sathynarayavratha ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಯಿತು.
ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಪೌರ್ಣಮಿ #Full Moon ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಪೂಜೆಯನ್ನು ಪುರೋಹಿತರಾದ ಶ್ರೀ ನಂದಕಿಶೋರಾಚಾರ್ಯರು ಮತ್ತು ರಾಘವೇಂದ್ರ ಕಟ್ಟಿ ಆಚಾರ್ಯರು ನೆರವೇರಿಸಿದರು.
Also read: ಮಹಾಕುಂಭ 2025 | ಯಾತ್ರಾರ್ಥಿಗಳಿಗಾಗಿ ರೈಲ್ವೆ ಇಲಾಖೆಯಿಂದ ಐತಿಹಾಸಿಕ ನಿರ್ಣಯ | ಏನೆಲ್ಲಾ ವ್ಯವಸ್ಥೆಯಾಗಿದೆ?
ಈ ಸಂದರ್ಭದಲ್ಲಿ ನೂರಾರು ಭಕ್ತರು ಮತ್ತು ಸೇವಾಕತೃಗಳು ಸತ್ಯನಾರಾಯಣವ್ರತ ಪೂಜೆಯಲ್ಲಿ ಪಾಲ್ಗೊಂಡು ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ತೀರ್ಥ ಮಂತ್ರಾಕ್ಷತೆ ಪ್ರಸಾದವನ್ನು ಸ್ವೀಕರಿಸಿ ಹಾಗೂ ಶ್ರೀ ಹರಿವಾಯು ಗುರುಗಳಿಗೆ ಸಮರ್ಪಿಸಿದ ಹುಗ್ಗಿ ಮತ್ತು ಪೊಂಗಲ್ ಪ್ರಸಾದವನ್ನು ಸ್ವೀಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post