ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ಸರಿಗಮ ವಿಜಯ್(76) #SaregamaVijay ಇಂದು ವಿಧಿವಶರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ #ManipalHospital ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.
Also Read>> ವಿವಿಧ ಸಂಸ್ಕೃತ ಸ್ಪರ್ಧೆ ವಿಜೇತರಿಗೆ ಬಹುಮಾನ | ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್ ಆಯೋಜನೆ
ಇಂದು ಮಧ್ಯಾಹ್ನದಿಂದ 1.30ರಿಂದ ನಾಳೆ 10 ಗಂಟೆಯ ವಿಜಯ್ ಅವರ ಮಹಾಲಕ್ಷ್ಮಿ ಲೇಔಟ್’ನ ಶಂಕರಮಠ ಬಳಿಯಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ನಾಳೆ ಚಾಮರಾಜಪೇಟೆಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

269 ಚಿತ್ರಗಳಲ್ಲಿ ನಟಿಸಿರುವ ವಿಜಯ್ ಅವರು ಅತಿ ಹೆಚ್ಚು ಟೈಗರ್ ಪ್ರಭಾಕರ್ #TigerPrabhakar ಅವರ ಸಿನಿಮಾಗಳಲ್ಲೇ ಅಭಿನಯ ಮಾಡಿದ್ದಾರೆ. ಅಲ್ಲದೇ, 80 ಚಿತ್ರಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ.
Also Read>> 4 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ 5-8ನೇ ತರಗತಿ ಇಬ್ಬರು ವಿದ್ಯಾರ್ಥಿಗಳು
ಅವರೇ ನಿರ್ದೇಶಿಸಿದ್ದ ಸಂಸಾರದಲ್ಲಿ ಸರಿಗಮ ನಾಟಕ #Drama 1397 ಪ್ರದರ್ಶನ ಕಂಡಿದ್ದು, ಇದರಿಂದಲೇ ಅವರ ಹೆಸರಿನೊಂದಿಗೆ ಸರಿಗಮ ಎಂದು ಸೇರಿಕೊಂಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post