ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭದ್ರಾವತಿ #Bhadravathi ಆಕಾಶವಾಣಿ ಕೇಂದ್ರ 60ರ ಸಂಭ್ರಮದಲ್ಲಿರುವ ಬೆನ್ನಲ್ಲೇ ಜಿಲ್ಲೆಯ ಜನರಿಗೆ ಸಂಸದ ಬಿ.ವೈ. ರಾಘವೇಂದ್ರ #BYRaghavendra ಹಾಗೂ ಕೇಂದ್ರ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ.
ಭದ್ರಾವತಿ ಆಕಾಶವಾಣಿ #Akashavani ಕೇಂದ್ರದಲ್ಲಿ ಈಗಿರುವ ಮಧ್ಯಮ ತರಂಗಾಂತರದಿಂದ ಫ್ರೀಕ್ವೆನ್ಸಿ ಮಾಡ್ಯುಲೇಷನ್ಸ್ ಟ್ರಾನ್ಸ್ ಮಿಷನ್’ಗೆ #transmitter ಬದಲಾಗಲಿದೆ. ಇದಕ್ಕಾಗಿ ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವಾಲಯದ ಕೈಗೊಂಡ ಕ್ರಮದಂತೆ 10 ಕೋಟಿ ರೂ. ವೆಚ್ಚದಲ್ಲಿ 10 ಕಿಲೋ ವ್ಯಾಟ್ ಸಾಮರ್ಥ್ಯದ ಟ್ರಾನ್ಸ್ ಮೀಟರ್ ಕೆನಡಾದಿಂದ ಈಗಾಗಲೇ ಶಿವಮೊಗ್ಗಕ್ಕೆ ಬಂದಿದೆ.
Also Read>> ಶಿವಮೊಗ್ಗ-ಬೆಂಗಳೂರು ರಾತ್ರಿ ಎಕ್ಸ್’ಪ್ರೆಸ್ ರೈಲು ಪ್ರಯಾಣಿಕರಿಗೆ ಇಲ್ಲಿದೆ ಹೊಸ ಅಪ್ಡೇಟ್
ಈ ಕುರಿತಂತೆ ಮಾಹಿತಿ ಪ್ರಕಟಿಸಿರುವ ಸಂಸದ ಬಿ.ವೈ. ರಾಘವೇಂದ್ರ ಅವರು, ಈ ಟ್ರಾನ್ಸ್ ಮೀಟರ್ ಪೂಜಾ ಕಾರ್ಯಕ್ರಮವನ್ನು ಕೇಂದ್ರ ರಾಜ್ಯ ಮಾಹಿತಿ ಮತ್ತು ಪ್ರಸರಣ ಸಚಿವ ಡಾ.ಎಲ್. ಮುರುಗನ್ ಅವರು ಜ.23ರಂದು ಶಿವಮೊಗ್ಗಕ್ಕೆ ಆಗಮಿಸಿ ನೆರವೇರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಸದ್ಯ ಭದ್ರಾವತಿಯಲ್ಲಿರುವ #Bhadravathi ಒಂದು ಕಿಲೋವ್ಯಾಟ್ ಸಾಮರ್ಥ್ಯದ ಎಫ್ ಎಂ ಟ್ರಾನ್ಸ್ ಮೀಟರ್ ಎತ್ತರ 100 ಮೀಟರ್ ಇದ್ದು, ಶಿವಮೊಗ್ಗದಲ್ಲಿ ಸ್ಥಾಪಿಸಿರುವ ಟ್ರಾನ್ಸ್ ಮೀಟರ 150 ಮೀಟರ್ ಎತ್ತರದಲ್ಲಿದೆ. ಈಗ 10 ಕಿಲೋ ವ್ಯಾಟ್ ಟ್ರಾನ್ಸ್ ಮೀಟರ್ ಅಳವಡಿಸಿದರೆ ಪ್ರಸಾರ ಸಾಮರ್ಥ್ಯ 10 ಪಟ್ಟು ಹೆಚ್ಚಾಗಲಿದೆ.
ಯಾವೆಲ್ಲಾ ಜಿಲ್ಲೆಗಳಿಗೆ ತಲುಪಲಿದೆ?
ಪ್ರಸ್ತುತ ಇಲ್ಲಿಂದ ಪ್ರಸಾರವಾಗುತ್ತಿರುವ ವ್ಯಾಪ್ತಿ ಶಿವಮೊಗ್ಗ, ದಾವಣಗೆರೆ #Davanagere ಹಾಗೂ ಚಿಕ್ಕಮಗಳೂರಿಗೆ ಮಾತ್ರ ಇದೆ. ಹೊಸ ಟ್ರಾನ್ಸ್ ಮೀಟರ್ ಸ್ಥಾಪನೆಯಾದ ನಂತರ ಶಿವಮೊಗ್ಗ, ಚಿಕ್ಕಮಗಳೂರು, #Chikkamagaluru ದಾವಣಗೆರೆ, ಹಾವೇರಿ, ಗದಗ, ಚಿತ್ರದುರ್ಗ ಜಿಲ್ಲಾ ವ್ಯಾಪ್ತಿ ಹಾಗೂ ಹಾಸನ, ಉಡುಪಿ, ಉತ್ತರ ಕನ್ನಡ ಹಾಗೂ ತುಮಕೂರು ಜಿಲ್ಲೆಗಳ ಕೆಲವು ತಾಲೂಕುಗಳ ವ್ಯಾಪ್ತಿಯಲ್ಲಿ ಆಕಾಶವಾಣಿ ಪ್ರಸಾರ ಕಾರ್ಯಕ್ರಮಗಳನ್ನು ಕೇಳಬಹುದಾಗಿದೆ.

ಈ ಕ್ರಮಕ್ಕೆ ಸಹಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ #PMNarendraModi ಹಾಗೂ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಸಂಸದರು ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post