ಕಲ್ಪ ಮೀಡಿಯಾ ಹೌಸ್ | ಮೈಸೂರು |
ಕಲಾ ಸಾಧನೆಗೆ ಬದ್ಧತೆ ಬಹಳ ಮುಖ್ಯ ಎಂದು ಹಿರಿಯ ಕಲಾವಿದ, ವಿಮರ್ಶಕ ಪ್ರೊ. ಪ್ರೊ. ಕೆ. ರಾಮಮೂರ್ತಿರಾವ್ ಹೇಳಿದರು.
ಮೈಸೂರಿನ ರಮಾಗೋವಿಂದ ರಂಗವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಉಮಾಮಹೇಶ್ವರ ನೃತ್ಯ ಕಲಾಕ್ಷೇತ್ರದ 74ನೇ ವಾರ್ಷಿಕೋತ್ಸವ ಮತ್ತು ಚಿಗುರು ಸಂಜೆ ಗುರುವಂದನಾ ಭರತನಾಟ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರ ಕೊಡುಗೆ ಅನನ್ಯ:
ಲೇಖಕ ಎ.ಆರ್ ರಘುರಾಮ ಮಾತನಾಡಿ, ಕಲಾವಿದರಿಗೆ ಕಲಾರಾಧನೆ ಎಷ್ಟು ಮುಖ್ಯವೋ ವೈಯಕ್ತಿಯ ಬದುಕಿನ ಶೈಲಿಯೂ ಅಷ್ಟೇ ಮುಖ್ಯ ಎಂದರು.
Also read: ಬೆಂಗಳೂರು | ಪ್ರತಿಭಾವಂತ ವಿದ್ಯಾರ್ಥಿ, ಹಿರಿಯರ ಚಿಕಿತ್ಸೆಗೆ ನೆರವಿನ ಮೂಲಕ ಮಾದರಿಯಾದ ಶಾಸ್ತ್ರಿ ಟ್ರಸ್ಟ್
ಭಾರತೀಯ ಪರಂಪರೆಯಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನ ನೀಡಲಾಗಿದೆ. ಕಲೆಗಳು ಅವರಿಗೆ ಬಹುಬೇಗ ಒಲಿಯುತ್ತವೆ. ತಲೆಮಾರಿನಿಂದ ತಲೆಮಾರಿಗೆ ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯಗಳು ಬಳುವಳಿಯಾಗಿ ಬರುವಲ್ಲಿ ವನಿತೆಯರ ಪಾತ್ರ ವಿಶೇಷವಾಗಿದೆ. ಈ ನಿಟ್ಟಿನಲ್ಲಿ ವಿದುಷಿ ಶ್ರೀಲಕ್ಷ್ಮೀ ಕುಮಾರ್ ಅವರ ಸಾಧನೆ ಮಾದರಿಯಾಗಿದೆ ಎಂದರು.
74 ವಸಂತಗಳನ್ನು ಕಂಡ ಸಂಸ್ಥೆ ಮುಂದಿನ ವರ್ಷ 75ವರ್ಷೋತ್ಸವವನ್ನೂ ವಿಜೃಂಭಣೆಯಿಂದ ಆಚರಿಸಲಿ ಎಂದವರು ಆಶಿಸಿದರು.
ಪ್ರಶಸ್ತಿ ಪ್ರದಾನ
ಕಲಾ ರಂಗದಲ್ಲಿ 4ದಶಕಗಳಿಂದ ವಿಭಿನ್ನ ಸಾಧನೆ ಮಾಡಿರುವ ಬೆಂಗಳೂರಿನ ಅನನ್ಯ ಸ್ಕೂಲ್ ಆಫ್ ಡ್ಯಾನ್ಸ್‌ನ ಹಿರಿಯ ನಿರ್ದೇಶಕಿ, ಭರತನಾಟ್ಯ ವಿದುಷಿ ಕೆ. ಬೃಂದಾ ಅವರಿಗೆ ಸೋಮಶ್ರೀ ಪ್ರಶಸ್ತಿಯನ್ನು (ಮೈಸೂರಿನ ನಾಟ್ಯಾಚಾರ್ಯ ಟಿ.ಎಸ್. ಸೋಮಶೇಖರ್ ಸ್ಮರಣಾರ್ಥ) ಪ್ರದಾನ ಮಾಡಿ ಗೌರವಿಸಲಾಯಿತು.ಸನ್ಮಾನಕ್ಕೆ ಪ್ರತಿಕ್ರಿಯಿಸಿದ ವಿದುಷಿ ಬೃಂದಾ, ಪ್ರತಿ ಮನೆಯಲ್ಲ್ಲಿಯೂ ಒಬ್ಬ ಕಲಾವಿದರು ಇರಬೇಕು. ಕಲೆಗೆ ಸಮಾಜ ಉತ್ತೇಜನ ನೀಡಬೇಕು ಎಂದು ಆಶಿಸಿದರು. ನಂತರ ಯುವ ಕಲಾವಿದೆ ಶಾರಿಕಾ ಕೌಶಿಕ್ ಸೇರಿದಂತೆ ಮಕ್ಕಳು ನೃತ್ಯ ಪ್ರದರ್ಶನ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post