ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುವೆಂಪು ವಿಶ್ವವಿದ್ಯಾಲಯದ 2024ರ ಸಾಲಿನ ಬಿಎ ಪದವಿಯಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ #KateelAshokPaiCollege ವಿದ್ಯಾರ್ಥಿನಿ ಆಲಿಯಾ ಅವರು ಪ್ರಥಮ ರ‍್ಯಾಂಕ್ ಪಡೆದಿದ್ದು, ಇಂದಿನ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಯಿತು.
ಇದರೊಂದಿಗೆ ಇಂಗ್ಲೀಷ್ ಐಚ್ಛಿಕ ವಿಷಯದಲ್ಲಿ ಪ್ರಥಮ ಸ್ಥಾನ, ಅತಿ ಹೆಚ್ಚು ಅಂಕಗಳಿಕೆಯ ಸಾಧನೆಯನ್ನು ಮಾಡಿದ್ದಾಳೆ.
Also Read>> ಶಿವಮೊಗ್ಗ-ಬೆಂಗಳೂರು ರಾತ್ರಿ ಎಕ್ಸ್’ಪ್ರೆಸ್ ರೈಲು ಪ್ರಯಾಣಿಕರಿಗೆ ಇಲ್ಲಿದೆ ಹೊಸ ಅಪ್ಡೇಟ್
ಶಂಕರಘಟ್ಟದಲ್ಲಿ ಇಂದು ನಡೆದ ಕುವೆಂಪು ವಿಶ್ವವಿದ್ಯಾಲಯದ #KuvempuUniversity 34ನೇ ಘಟಿಕೋತ್ಸವದಲ್ಲಿ ಈ ಸಾಧನೆಗಾಗಿ ಚಿನ್ನದ ಪದಕ #GoldMedal ಹಾಗೂ ಬಹುಮಾನವನ್ನು ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರು ವಿದ್ಯಾರ್ಥಿನಿ ಆಲಿಯಾಗೆ ಪ್ರದಾನ ಮಾಡಿದ್ದಾರೆ.
ಹಾಗೆಯೇ ಇದೇ ಕಾಲೇಜಿನ ಪತ್ರಿಕೋದ್ಯಮ #Journalism ವಿದ್ಯಾರ್ಥಿಯು ಬಿಎ ಪದವಿಯ ಪತ್ರಿಕೋದ್ಯಮ ವಿಷಯದಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಅತಿ ಹೆಚ್ಚು ಅಂಕಗಳಿಸಿ ಪ್ರಶಸ್ತಿ ಪಡೆದಿದ್ದಾನೆ.
ಈ ಸಾಧನೆಗಳಿಗಾಗಿ ಮಾನಸ ಟ್ರಸ್ಟ್’ನ ಡಾ ರಜನಿ ಎ. ಪೈ, ಡಾ. ಪ್ರೀತಿ ಶಾನಭಾಗ್ ಮತ್ತುಡಾ ವಾಮನ್ ಶಾನಭಾಗ್, ಕಾಲೇಜಿನ ಪ್ರಾಚಾರ್ಯರಾದ ಡಾ. ಸಂಧ್ಯಾ ಕಾವೇರಿ ಕೆ, ಕಾಲೇಜಿನ ಶಿಕ್ಷಕರು, ಸಿಬ್ಬಂದಿ ವರ್ಗದವರು ಈ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post