ಕಲ್ಪ ಮೀಡಿಯಾ ಹೌಸ್ | ಭದ್ರಾವತಿ/ನವದೆಹಲಿ |
ಈಗಾಗಲೇ ಜಿಲ್ಲೆಯ ರೈಲ್ವೆ ಇಲಾಖೆ #IndianRailway ಅಭಿವೃದ್ಧಿಯಲ್ಲಿ ಕ್ರಾಂತಿಯನ್ನೇ ಸೃಷ್ಠಿಸಿರುವ ಸಂಸದ ಬಿ.ವೈ. ರಾಘವೇಂದ್ರ ಅವರ ತಮ್ಮ ಶ್ರಮದಿಂದ ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ಈಗ ಇನ್ನೊಂದು ಗುಡ್ ನ್ಯೂಸ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು… ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರ ಭದ್ರಾವತಿಯಿಂದ #Bhadravathi ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು ಪಟ್ಟಣಕ್ಕೆ ನೂತನ ರೈಲ್ವೆ ಮಾರ್ಗಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
Also Read>> ಕೇಂದ್ರ ಬಜೆಟ್ ಎಂಎಸ್‍ಎಂಇ ಕ್ಷೇತ್ರದ ಬೆಳವಣಿಗೆಗೆ ಆಶಾದಾಯಕ | ಗೋಪಿನಾಥ್
2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರೈಲ್ವೆ ಇಲಾಖೆಗೆ ಸಂಬಂಧಿಸಿದ ವಿವರದಲ್ಲಿ ಇದನ್ನು ಘೋಷಣೆ ಮಾಡಿದ್ದಾರೆ.
ಶಿವಮೊಗ್ಗ #Shivamogga ಜಿಲ್ಲೆಯ ಭದ್ರಾವತಿ ಹಾಗೂ ಚಿತ್ರದುರ್ಗ #Chitradurga ಜಿಲ್ಲೆಯ ಚಿಕ್ಕಜಾಜೂರಿಗೆ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಆಯವ್ಯಯದಲ್ಲಿ ಘೋಷಣೆ ಮಾಡಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು ಜಂಕ್ಷನ್ ಮಧ್ಯ ಕರ್ನಾಟಕ ಪ್ರಮುಖ ರೈಲ್ವೆ ನಿಲ್ದಾಣವಾಗಿದ್ದು, ಬೆಂಗಳೂರು-ಹುಬ್ಬಳ್ಳಿ #Hubli ನಡುವಿನ ರೈಲು ಮಾರ್ಗದಲ್ಲಿದೆ. ರೈಲ್ವೆ ಜಂಕ್ಷನ್ ಆಗಿರುವ ಈ ನಿಲ್ದಾಣ, ಬೆಂಗಳೂರಿನಿಂದ #Bengaluru ಒಂದು ಮಾರ್ಗ ಹುಬ್ಬಳ್ಳಿ, ಇನ್ನೊಂದು ಮಾರ್ಗ ಚಿತ್ರದುರ್ಗ, ಬಳ್ಳಾರಿ ಜಿಲ್ಲಾ ಕೇಂದ್ರಗಳಿಗೆ ಸಂಪರ್ಕಿಸುತ್ತದೆ.
ಸದ್ಯ ಶಿವಮೊಗ್ಗದಿಂದ ಚಿಕ್ಕಜಾಜೂರು ಮೂಲಕ ಸಂಪರ್ಕಿಸುವ ಚಿತ್ರದುರ್ಗ, ಹುಬ್ಬಳ್ಳಿ ಜಿಲ್ಲೆಗಳಿಗೆ ನೇರ ರೈಲು ಮಾರ್ಗ ಇಲ್ಲ. ಶಿವಮೊಗ್ಗ, ಭದ್ರಾವತಿಯಿಂದ ಬೀರೂರಿಗೆ ತೆರಳಿ, ಅಲ್ಲಿಂದ ರೈಲು ಬದಲಾವಣೆ ಮಾಡಿಯೇ ಪ್ರಯಾಣಿಕರು ತೆರಳಬೇಕು. ಆದರೆ, ಈಗ ಭದ್ರಾವತಿಯಿಂದ ಚಿಕ್ಕಜಾಜೂರಿಗೆ ನೇರ ರೈಲು ಮಾರ್ಗ ನಿರ್ಮಾಣವಾದರೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಿಂದ ಬಯಲುಸೀಮೆ ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳಿಗೆ ನೇರ ಸಂಪರ್ಕ ಸಾಧ್ಯವಾಗುತ್ತದೆ.
ಇನ್ನು ಇದೇ ಬಜೆಟ್’ನಲ್ಲಿ ಶಿವಮೊಗ್ಗ-ರಾಣೆಬೆನ್ನೂರು ರೈಲ್ವೆ ಮಾರ್ಗದ ಕಾಮಗಾರಿಗೆ 68 ಕೋಟಿ ರೂ. ಅನುದಾನವನ್ನೂ ಸಹ ಕೇಂದ್ರ ಸರ್ಕಾರ ಒದಗಿಸಿದೆ.
ಈ ಎರಡೂ ಕ್ರಮಕ್ಕಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಅವರುಗಳಿಗೆ ಸಂಸದ ಬಿ.ವೈ. ರಾಘವೇಂದ್ರ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post