ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ನವದೆಹಲಿ |
ಬಜೆಟ್ ಉನ್ನತ ಶಿಕ್ಷಣದ ಅಗತ್ಯಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂಬದನ್ನು ಆರಂಭದಲ್ಲೇ ಹೇಳ ಬಯಸುತ್ತೇನೆ.
2025 ರ ಬಜೆಟ್ ಉನ್ನತ ಶಿಕ್ಷಣದ ನಿರ್ಣಾಯಕ ಕ್ಷೇತ್ರಗಳನ್ನು ಸಮರ್ಪಕವಾಗಿ ಪರಿಹರಿಸಲು ವಿಫಲವಾಗಿದೆ. ವಿಮರ್ಶಾತ್ಮಕ ಚಿಂತನೆ ಮತ್ತು ಸಾಮಾಜಿಕ ತಿಳುವಳಿಕೆಯ ಮೂಲಾಧಾರವಾದ ಮಾನವಿಕ ವಿಷಯಗಳಿಗೆ ಒತ್ತನ್ನು ನೀಡಲಾಗಿಲ್ಲ.
Also Read>> ಭದ್ರಾವತಿಯಿಂದ ಈ ಊರಿಗೆ ನೂತನ ರೈಲ್ವೆ ಮಾರ್ಗ | ಕೇಂದ್ರ ಬಜೆಟ್’ನಲ್ಲಿ ಮಂಜೂರಾತಿ
ನಮ್ಮ ಭವಿಷ್ಯಕ್ಕೆ ಅತ್ಯಗತ್ಯವಾದ ಸುಸ್ಥಿರ ಅಭಿವೃದ್ಧಿ ಮತ್ತು ಸುಸ್ಥಿರತೆಯ ಉಪಕ್ರಮಗಳನ್ನು ನಿರಾಶಾದಾಯಕವಾಗಿ ಕಡೆಗಣಿಸಲಾಗಿದೆ. ವೈದ್ಯಕೀಯ ಶಿಕ್ಷಣ #MedicalEducation ಕ್ಷೇತ್ರಕ್ಕೆ ಪ್ರಾಶಸ್ತ್ಯ ನೀಡಲಾಗಿದೆ.ಕೌಶಲ್ಯ ಉತ್ಕೃಷ್ಟತೆಯ ರಾಷ್ಟ್ರೀಯ ಕೇಂದ್ರಗಳು, ಪಿಎಂ ಸಂಶೋಧನಾ ಫೆಲೋಶಿಪ್, ಭಾರತೀಯ ಭಾಷಾ ಪುಸ್ತಕ ಯೋಜನೆ ಮತ್ತು ಬ್ರಾಡ್ ಬ್ಯಾಂಡ್ ಸಂಪರ್ಕವನ್ನು ಸೇರಿಸಲಾಗಿದ್ದರೂ ಮತ್ತು ಪ್ರಾಮುಖ್ಯತೆ ನೀಡಲಾಗಿದೆ. ಆದರೂ ಅವು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂಪೂರ್ಣ ನಿರ್ಲಕ್ಷ್ಯವನ್ನು, ಸಾಂಸ್ಕೃತಿಕ ಪುಷ್ಟೀಕರಣ ಮತ್ತು ಸೃಜನಶೀಲ ಅಭಿವ್ಯಕ್ತಿಗೆ ಅತ್ಯಗತ್ಯವಾದ ಕಲೆ, ಸಂಸ್ಕೃತಿ, ಭಾಷಾ ವಿಭಾಗ, ಅರ್ಥಶಾಸ್ತ್ರ ಮತ್ತು ಲಲಿತಕಲೆಗಳ ಕುರಿತು ಸಹ ನಿರ್ಲಕ್ಷ್ಯವನ್ನು ತೋರಿದೆ.
ಈ ಬಜೆಟ್ ಒಂದು ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಕೋನವನ್ನು ಬಿಂಬಿಸುವಲ್ಲಿ ವಿಫಲವಾಗಿದೆ. ಮುಖ್ಯವಾಗಿ ಉನ್ನತ ಶಿಕ್ಷಣ ಮತ್ತು ಅಭಿವೃದ್ಧಿ ಹೊಂದುತ್ತಿರುವ ಸಮಾಜಕ್ಕೆ ಅತ್ಯಗತ್ಯವಾದ ಕ್ಷೇತ್ರಗಳನ್ನು ನಿರ್ಲಕ್ಷಿಸಿದೆ.
ಡಾ. ನವ್ಯಾ ಗುಬ್ಬಿ ಕುರಿತು:
ಡಾ. ನವ್ಯಾ ಗುಬ್ಬಿ ಸತೀಶ್ ಚಂದ್ರ, ಪ್ರಾಧ್ಯಾಪಕರು, ಬರ್ಲಿನ್ ಸ್ಕೂಲ್ ಆಫ್ ಬಿಸಿನೆಸ್ ಅಂಡ್ ಇನ್ನೋವೇಶನ್, ಬರ್ಲಿನ್, ಜರ್ಮನಿ.
ತುಮಕೂರು ಮೂಲದ ಅಪ್ಟಟ ಕನ್ನಡತಿ ಡಾ. ನವ್ಯಾ ಅವರು ಆರ್ಥಿಕ ವಿಷಯಗಳ ಪರಿಣತರು, ವಿಶ್ಲೇಷಣೆ ತಜ್ಞರು, ಹಲವು ಆಂಗ್ಲ ಪತ್ರಿಕೆಗಳಿಗೆ ಅಂಕಣಕಾರರು.
ಜತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಶಿವಮೊಗ್ಗದ ಮೂಲದ ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್ಟರ ಶಿಷ್ಯತ್ವದಲ್ಲಿ ಕಲಿತವರು. ಅಖಂಡ ಭಾರತ ಮತ್ತು ಕನ್ನಡ ನಾಡಿನ ಬಗ್ಗೆ ಅಪಾರ ಅಭಿಮಾನ ಮತ್ತು ತುಡಿತ ಇರುವ ಮಹಿಳೆ.
ಸಾಗರದಾಚೆಯ ಜರ್ಮನಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಜವಾಬ್ದಾರಿ ಯುತ ಸ್ಥಾನದಲ್ಲಿ ಇರುವ ಅವರು ಪ್ರಸ್ತುತ ಕೇಂದ್ರ ಬಜೆಟ್ ಬಗ್ಗೆ ಮುಕ್ತ ಅನಿಸಿಕೆಗಳನ್ನು ಇಲ್ಲಿ ಕಲ್ಪ ನ್ಯೂಸ್ ಓದುಗರ ಜತೆ ಹಂಚಿಕೊಂಡಿರುವುದು ಸಂತೋಷಕರ ವಿಚಾರ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post