ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಕ್ಷೇತ್ರ ಜಿಲ್ಲೆ ನಗರ ವಾರ್ಡ್ ಮಟ್ಟದಲ್ಲಿ ನೂತನ ಮುಖ್ಯಮಂತ್ರಿಗಳ ಅಧಿಕಾರ ಸ್ವೀಕಾರ ಸಮಾರಂಭವನ್ನು ನೇರ ಪ್ರಸಾರದ ಮುಖಾಂತರವೇ ವೀಕ್ಷಿಸಬೇಕಾಗಿ ಡಿ.ಕೆ. ಶಿವಕುಮಾರ್ D K Shivakumar ತಿಳಿಸಿದ್ದಾರೆ.
ಬೆಂಗಳೂರು ನಗರದ ಪ್ರವೇಶಕ್ಕೆ ಸಹ ಬಹಳಷ್ಟು ನಿರ್ಬಂಧನೆಗಳಿದ್ದು ವಾಹನ ದಟ್ಟಣೆ ಹಾಗೂ ಗ್ಲಾಸ್ ಹೌಸ್ ನಲ್ಲಿ ಅಧಿಕ ಭದ್ರತಾ ವ್ಯವಸ್ಥೆ ಇರುವುದರಿಂದ ಬೆಂಗಳೂರು ನಗರಕ್ಕೆ ಬರಬಾರದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದರ ಸಂಬಂಧ ಶಿವಮೊಗ್ಗ ನಗರದ ಶಿವಪ್ಪ ನಾಯಕ ವೃತ್ತದ ಬಳಿ ಮಧ್ಯಾಹ್ನ 3:30 ರಿಂದ ಅಧಿಕಾರ ಸ್ವೀಕಾರ ಸಮಾರಂಭ ಮುಗಿಯುವ ತನಕ ಬೃಹತ್ ಎಲ್ಇಡಿ ವ್ಯವಸ್ಥೆಯನ್ನು ಮಾಡಿ ಕಾರ್ಯಕ್ರಮದ ನೇರ ವೀಕ್ಷಣೆಯನ್ನು ಏರ್ಪಡಿಸಿದ್ದು, ಈ ಕಾರ್ಯಕ್ರಮದ ನೇತೃತ್ವವನ್ನು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಂತಹ ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಹೆಚ್ ಸಿ ಯೋಗೇಶ್ ರವರು ವಹಿಸಿದ್ದಾರೆ.
Also read: ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿ ಕಾರ್ಮಿಕರ ವಯೋನಿವೃತ್ತಿ ಸಮಾರಂಭ
ಶಿವಮೊಗ್ಗ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಎಸ್ ಶಿವಕುಮಾರ್ ರವರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಮ್ ಪಾಷರವರು ಕಾರ್ಯಕರ್ತರು ವಾರ್ಡ್ ಅಧ್ಯಕ್ಷರುಗಳ ಜೊತೆಯಾಗಿ ಸಿದ್ಧತೆ ನಡೆಸಿದ್ದು. ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಸಾರ್ವಜನಿಕರು ಡಿ.ಕೆ. ಶಿವಕುಮಾರ್ ರವರ ನೂತನ ಮುಖ್ಯಮಂತ್ರಿಗಳಾಗಿ ಪದಗ್ರಹಣ ಸ್ವೀಕಾರ ಕಾರ್ಯಕ್ರಮದ ವೀಕ್ಷಣೆಗೆ ಬರಬೇಕೆಂದು ತಿಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















