ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಂಭ್ರಮ ಸಂಸ್ಥೆಯು ಪ್ರಕೃತಿ ಮಾತೆ ಚಾರಿಟೇಬಲ್ ಟ್ರಸ್ಟ್ ಸಹಕಾರದೊಂದಿಗೆ ಕೆಂಗೇರಿ ಉಪನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ Shri Raghavendraswamy Mutt ಇತ್ತೀಚೆಗೆ ಆಯೋಜನೆ ಮಾಡಿದ “ಭಜನೆಯಿಂದ ಭಾವೈಕ್ಯತೆಗೆ” ಎಂದ ಕಾರ್ಯಕ್ರಮದಲ್ಲಿ ಬೆಂಗಳೂರು ಭಜನ ಕ್ಲಬ್ಬಿಂಗ್ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಾಡಿನ ಸುಪ್ರಸಿದ್ಧ ಗಾಯಕಿ ವಿದುಷಿ ಗೀತಾ ಭತ್ತದವರ ತಂಡ ಬಹಳ ಅದ್ಭುತವಾಗಿ ಭಜನೆ ಗೀತೆಗಳು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಪ್ರೇಕ್ಷಕರು ಕೂಡ ಭಜನೆಯನ್ನು ಹಾಡುತ್ತಾ ನಮ್ಮ ನಾಡಿನ ಸಂಸ್ಕೃತಿಯಾದ ಭಜನ ಗೀತೆಗಳಿಗೆ ನರ್ತನ ಮಾಡುತ್ತಾ ಭಕ್ತಿ ಭಾವದಲ್ಲಿ ತಲ್ಲಿನರಾಗಿ ಭಾವೈಕ್ಯತೆಗೆ ಸಾಕ್ಷಿಯಾದರು.
Also read: ಸಾಮೂಹಿಕ ಶ್ರೀ ವೆಂಕಟೇಶ್ವರ ಕರಾವಲಂಬ ಸ್ತೋತ್ರ ಪಾರಾಯಣ ಸಂಪನ್ನ
ಈ ಕಾರ್ಯಕ್ರಮದಲ್ಲಿ ಕೆಂಗೇರಿ ಶ್ರೀ ರಾಘವೇಂದ್ರಸ್ವಾಮಿ ಮಠದ ಅಧ್ಯಕ್ಷರಾದ ಸುಧೀಂದ್ರ ಕುಮಾರ್, ಪ್ರಕೃತಿ ಮಾತಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಪರಮೇಶ್ವರ್, ಬೆಂಗಳೂರು ಭಜನ ಕ್ಲಬ್ ನ ಧನಂಜಯ್ ರವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾದ ವಿದುಷಿ ಉಷಾ ಬಸಪ್ಪ ಭಾಗವಹಿಸಿದ್ದರು.
ಖ್ಯಾತ ಜಾನಪದ ಗಾಯಕರಾದ ಡಾ. ಜೋಗಿಲ ಸಿದ್ದರಾಜುರವರು ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















