ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸುಮುಖ ಕಲಾಕೇಂದ್ರದ ಮಕ್ಕಳಿಂದ ಫೆ.8ರಂದು ನಗರದಲ್ಲಿ ಯಕ್ಷಗಾನ #Yakshagana ದುಶ್ಯಾಸನ ವಧೆ ಮತ್ತು ವೃಷಸೇನ ಕಾಳಗ ಎಂಬ ಯಕ್ಷ ಪ್ರದರ್ಶನ ಆಯೋಜಿಸಲಾಗಿದೆ.
ಅಂದು ಸಂಜೆ 6 ಗಂಟೆಗೆ ಸುವರ್ಣ ಸಂಸ್ಕೃತಿ ಭವನದಲ್ಲಿ ಪ್ರದರ್ಶನ ನಡೆಯಲಿದೆ.
Also read: ಸರ್ಕಾರ ನಿಗಧಿಡಿಸಿದ ಸಮಯನುಸಾರ ರೈತರಿಗೆ ವಿದ್ಯುತ್ ಸರಬರಾಜು ಮಾಡಿ
ಭಾಗವತರಾಗಿ ಪರಮೇಶ್ವರ ಹೆಗಡೆ, ಮದ್ದಲೆ ಯಲ್ಲಿ ಮಂಜು ಗುಡ್ಡೆದಿಂಬ, ಚಂಡೆಯಲ್ಲಿ ಭಾರ್ಗವ ಹೆಗ್ಗೋಡು ಅವರುಗಳು ನಿರ್ವಹಿಸಲಿದ್ದಾರೆ.
ಅದೇ ಸಂದರ್ಭದಲ್ಲಿ ಕೆ.ಜಿ. ರಾಮರಾವ್ ಅವರಿಗೆ ದಿ.ಹಳ್ಳಾಡಿ ಸುಬ್ರಾಯ ಮಲ್ಯಸ್ಮಾರಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ದ ಯಶಸ್ಸಿಗೆ ಕಾರಣರಾಗಿ ಎಂದು ಡಾ.ರವಿ ಪೈ ಹಾಗೂ ಕಿರಣ್ ರವಿ ಪೈ ಅವರುಗಳು ವಿನಂತಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post