ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತೀರ್ಥಹಳ್ಳಿ ತಾಲೂಕು ಶ್ರೀ ಕ್ಷೇತ್ರ ಹೆಗಲತ್ತಿಯಲ್ಲಿ ಶ್ರೀ ನಾಗಲಕ್ಷ್ಮಿ ಸೇವಾ ಸಮಿತಿ ವತಿಯಿಂದ ಫೆಬ್ರವರಿ ಐದರಿಂದ ಒಂಬತ್ತರವರೆಗೆ ಶ್ರೀ ನಾಗಲಕ್ಷ್ಮಿ ದೇವಿ ನವಗ್ರಹ ಮತ್ತು ನಾಗದೇವರ 11ನೇ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮ ಹಾಗೂ ಶತಚಂಡಿಕಾ ಹೋಮ ನಡೆಯಲಿದೆ ಎಂದು ಶ್ರೀ ನಾಗಲಕ್ಷ್ಮಿ ದೇವಿಯ ಭಕ್ತ ಗಜೇಂದ್ರ ನಾಥ್ ಮಾಳೋದೆ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಶ್ರೀ ನಾಗಲಕ್ಷ್ಮಿಯ ಶ್ರೀ ಕ್ಷೇತ್ರ ಈಗ ಅಪಾರ ಜನ ಮನ್ನಣೆ ಗಳಿಸುತ್ತಿದೆ ,ಪ್ರತಿ ಹುಣ್ಣಿಮೆಯಂದು ಹೇಳಿಕೆ, ದರ್ಶನ , ಹರಕೆ ಸೇವೆ, ನಡೆಯುತ್ತದೆ ಭಕ್ತರ ಕಷ್ಟಗಳು ಇಲ್ಲಿ ಪರಿಹಾರವಾಗುತ್ತದೆ ಎಂದರು.
ಪ್ರತಿವರ್ಷದಂತೆ ಈ ವರ್ಷವೂ ಕೂಡ 11ನೇ ವರ್ಷದ ವಾರ್ಷಿಕ ಪೂಜಾ ಕಾರ್ಯಕ್ರಮಗಳು ಇಂದಿನಿಂದ ಆರಂಭಗೊಂಡಿದ್ದು ಬರುವ ಒಂಬತ್ತನೇ ತಾರೀಖಿನವರೆಗೂ ನಡೆಯುತ್ತವೆ ನಾಳೆ ಮತ್ತು ನಾಡಿದ್ದು ವಿಶೇಷ ಪೂಜೆಗಳನ್ನು ಆಯೋಜಿಸಲಾಗಿದೆ, ಪ್ರತಿದಿನವೂ ಅನ್ನಸಂತರ್ಪಣೆ ಇರುತ್ತದೆ ಎಂದರು.
Also read: ಪ್ರಸಿದ್ದ ನಾಟಿ ವೈದ್ಯ ಮಂಗಳದ ಶಿವಣ್ಣಗೌಡ ನಿಧನ
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಬಂಗಾರ ಮಕ್ಕಿ ಧರ್ಮದರ್ಶಿ ಶ್ರೀ ಮಾರುತಿ ಗುರೂಜಿ ಹಾಗೂ ಮೂಲ ಪಾತ್ರಿಗಳಾದ ಶ್ರೀ ಶಾರದಮ್ಮ ಹಾಗೂ ಕಲ್ಪನಮ್ಮ ಸಂತೋಷ್ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದರು ಮುಖ್ಯವಾಗಿ ಫೆಬ್ರವರಿ 8ರಂದು ಬೆಳಗ್ಗೆ 9 ಗಂಟೆಗೆ 11 ಪಲ್ಲಕ್ಕಿಗಳ ದೇವರುಗಳ ಆರಾಧನೆ ಇರುತ್ತದೆ ಪ್ರಮುಖವಾಗಿ 11 ಪಲ್ಲಕ್ಕಿ ದೇವರುಗಳು ಇಲ್ಲಿಗೆ ಆಗಮಿಸುತ್ತವೆಎಂದರು.
ಮಾಜಿ ಉಪ ಮುಖ್ಯ ಮಂತ್ರಿ ಕೆ ಎಸ್ ಈಶ್ವರಪ್ಪ, ಜಿಪಂ ಮಾಜಿ ಸದಸ್ಯ ಕಾಂತೇಶ್ ಕಾಂಗ್ರೆಸ್ ಮುಖಂಡರಾದ ಎಂ ಶ್ರೀಕಾಂತ್, ಆಯನೂರು ಮಂಜುನಾಥ್ ಕಿಮ್ಮನೆ ರತ್ನಾಕರ್ ಸೇರಿದಂತೆ ಅನೇಕ ಮುಖಂಡರು ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿರುತ್ತಾರೆ. ಶ್ರೀ ಮಾರುತಿ ಗುರೂಜಿ ಸಾನಿಧ್ಯದಲ್ಲಿ ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಫೆಬ್ರವರಿ 8ರಂದು ರಾತ್ರಿ ಎಂಟಕ್ಕೆ ನಾಗನಂದನ ಎಂಬ ಯಕ್ಷಗಾನ ನಡೆಯಲಿದೆ ಫೆಬ್ರವರಿ 9ರಂದು ಬೆಳಗ್ಗೆ ೧೧ಕ್ಕೆ ಮಹಾಮಂಗಳಾರತಿ ಅನ್ನಸಂತರ್ಪಣೆ ನಡೆಯಲಿದೆ ಈ ಎಲ್ಲಾ ಕಾರ್ಯಕ್ರಮಗಳಿ ಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಈ ವಿಶ್ವಾಸ್, ಶ್ರೀಕಾಂತ್, ಕೆಹೆಚ್ ಮಹೇಶ್, ವಿನಯ್ ತಾಂದಳೆ, ಶಬರೀಶ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post