ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಹುತೇಕ ಪಟ್ಟಣದ ಮನೆಗಳ ಎದುರು ಸಂಪ್ ನೀರು ತುಂಬಿ ಪೋಲಾಗುತ್ತಿರುವ ದೃಶ್ಯ ಸರ್ವೆ ಸಮಾನ್ಯವಾಗಿದೆ. ಸಂಪ್ ನೀರು ಉಕ್ಕದಂತೆ ತಡೆದು, ತುಂಬಿದ ತಕ್ಷಣ ನೀರಿನ ಹರಿವು ನಿಲ್ಲುವಂತಾದರೆ. ಅಂತಹ ಸ್ಮಾರ್ಟ್ ಯೋಜನೆಯೊಂದನ್ನು ಜೆಎನ್ಎನ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ರೂಪಿಸಿದ್ದಾರೆ.
ಶನಿವಾರ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ #JNNCE ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ವಿದ್ಯಾರ್ಥಿಗಳು ರೂಪಿಸಿದ ಯೋಜನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ನಾವೀನ್ಯ ಯೋಚನೆಗಳನ್ನು ಅನಾವರಣಗೊಳಿಸಿದರು.

Also read: ದೆಹಲಿ ವಿಧಾನಸಭಾ ಚುನಾವಣೆ | ಸುದೀರ್ಘ 27 ವರ್ಷಗಳ ಬಳಿಕ ಬಿಜೆಪಿಗೆ ಜಯಭೇರಿ
ಇದರೊಂದಿಗೆ ವಿವಿಧ ವಿದ್ಯಾರ್ಥಿಗಳು ರೂಪಿಸಿದ ಡೀಪ್ ಲರ್ನಿಂಗ್ ಮತ್ತು ನ್ಯೂರಲ್ ನೆಟ್‌ವರ್ಕ್ ಮೂಲಕ ರಸ್ತೆಯಲ್ಲಿ ಸುರಕ್ಷಿತವಾಗಿ ಸ್ವಯಂ ವಾಹನೆ ಚಾಲನೆ ಮಾಡಬಲ್ಲ ಸೆಲ್ಫ್ ಡ್ರೈವಿಂಗ್ ಬೊಟ್ ಸಿಸ್ಟಂ, ಮಿಲಿಟರಿ ಯುದ್ಧಭೂಮಿ ಹಾಗೂ ಗಡಿಗಳಲ್ಲಿ ಶತ್ರು ರಾಷ್ಟ್ರದಿಂದ ಬರುವ ಮಿಸೈಲ್, ಡ್ರೋನ್ ಗಳ ಮೇಲೆ ನಿಗಾ ವಹಿಸುವ ಹಾಗೂ ಓಪನ್ ಸಿವಿ ಮೂಲಕ ಲೆಸರ್ ಗನ್ ಬಳಸಿ ಹೊಡೆದುರುಳಿಸುವ ಯೋಜನೆಯನ್ನು ವಿದ್ಯಾರ್ಥಿಗಳು ರೂಪಿಸಿದ್ದಾರೆ. ಮನೆಯಲ್ಲಿಯೇ ಕೊಕೊಪಿತ್, ಕೃತಕ ಬೆಳಕನ್ನು ಬಳಸಿ ಗಿಡಗಳನ್ನು ಬೆಳೆಸಿ ಪೋಷಿಸುವ ಐಓಟಿ ಆಧಾರಿತ ಹೈಡ್ರೊಫೊನಿಕ್ಸ್ ಮಾನಿಟರಿಂಗ್ ಸಿಸ್ಟಮ್ ಸೇರಿದಂತೆ ವಿವಿಧ ಪ್ರಾತ್ಯಕ್ಷಿಕೆಗಳು ನೋಡುಗರನ್ನು ಸೆಳೆಯಿತು.

ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್, ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಸಹಾಯಕ ಪ್ರಾಧ್ಯಾಪಕಿ ಉಜ್ವಲ ರವಿಕುಮಾರ್, ಡಾ.ಶೀಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post