ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೋರ್ ವೆಲ್ ಲಾರಿಗೆ ಸಂಬಂಧಿಸಿದ ಸಾಮಗ್ರಿಗಳ ದರೋಡೆಗೆ ಬಂದಿದ್ದ ಕಳ್ಳರು ಪರ್ಸ್ ಕದ್ದಿರುವ ವಿಫಲ ದರೋಡೆ ಯತ್ನವೊಂದು ನಗರದ ಬೊಮ್ಮನಕಟ್ಟೆಯ ಸಾನ್ವಿ ಲೇಔಟ್’ನಲ್ಲಿ ನಿನ್ನೆ ರಾತ್ರಿ ನಡೆದಿದೆ.
ಇಲ್ಲಿನ ದೊಡ್ಡ ನೀರಿನ ಟ್ಯಾಂಕ್ ಬಳಿಯಲ್ಲಿ ಘಟನೆ ನಡೆದಿದ್ದು, ಬೋರ್ ವೆಲ್ ಕಂಪೆನಿಯೊಂದರ ಗೋಡೌನ್ ಬಳಿಯಲ್ಲಿ ನಡೆದಿದೆ.
ನಿನ್ನೆ ರಾತ್ರಿ 12.30ರ ಸುಮಾರಿಗೆ ಇಬ್ಬರು ಕಪ್ಪು ಪ್ಯಾಂಟ್, ಕಪ್ಪು ಫುಲ್ ಟೀ ಶರ್ಟ್ ಧಾರಿಗಳು ಮುಖಕ್ಕೆ ಹಳದಿ ಬಟ್ಟೆ ಕಟ್ಟಿಕೊಂಡು ಪಲ್ಸರ್ ಬೈಕಲ್ಲಿ ಬಂದು, ಬೈಕನ್ನು ಬೋರ್ ವೆಲ್ ಲಾರಿಗೆ ಐವತ್ತು ಮಾರು ದೂರದಲ್ಲಿ ನಿಲ್ಲಿಸಿ ಬಂದಿದ್ದಾರೆ. ಸಿಸಿ ಕ್ಯಾಮರಾ ಇರುವುದು ತಿಳಿದ ತಕ್ಷಣ ಅದನ್ನು ಒಡೆದು ಹಾಕಿದ್ದಾರೆ.
ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಲಾರಿ ಹತ್ತಿರ ಬಂದು ಕ್ಯಾಬಿನ್ ಬಾಗಿಲು ತೆಗೆದು ಓರ್ವ ಒಳ ಹೊಕ್ಕಿದ್ದಾನೆ. ಇನ್ನೋರ್ವ ಕೆಳಗೇ ನಿಂತು ಆಕಡೆ ಈ ಕಡೆ ಗಮನಿಸಿದ್ದಾನೆ. ಸ್ವಲ್ಪ ಸಮಯದ ಬಳಿಕೆ ಧರೋಡೆ ಕೋರ ಕ್ಯಾಬಿನ್’ನಿಂದ ಹೊರ ಬಂದಿದ್ದಾನೆ. ಸಾನ್ವಿ ಲೇಔಟ್ ಕಡೆಯಿಂದ ಒಂದು ಬೈಕ್ ಬರುತ್ತಿರುವುದನ್ನು ಕಂಡು ಇವರು ಅಲ್ಲಿದ ಕಾಲ್ಕಿತ್ತಿದ್ದಾರೆ.
ಕೆಲವು ಸಮಯದ ನಂತರ ಮಲಗಿದ್ದ ಡ್ರೆÊವರ್ ಹಾಗೂ ಇನ್ನೋರ್ವ ಎಚ್ಚರಗೊಂಡಿದ್ದು, ಪ್ಯಾಂಟ್ ಜೇಬಿನಲ್ಲಿಟ್ಟಿದ್ದ ಪರ್ಸ್ ಕಳುವಾಗಿರುವುದು ಗೊತ್ತಾಗಿದೆ.
ಪರ್ಸ್’ನಲ್ಲಿದ್ದ 4 ಸಾವಿರ ರೂ.ನಗದು, ಡಿಎಲ್, ಎಟಿಎಂ, ಆಧಾರ್ ಕಾರ್ಡ್ ಮತ್ತಿತರ ಕಾಗದ ಪತ್ರಗಳು ಇದ್ದವು ಎಂದು ವರದಿಯಾಗಿದೆ.
ಗೋಡೌನ್ ಬೀಗ ಒಡೆಯಲು ತಂದಿದ್ದ ಆಳೆತ್ತರದ ಕಬ್ಬಿಣದ ಹಾರೆಯೊಂದನ್ನೂ ದರೋಡೆಕೋರರು ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿದ್ದಾರೆ.
ಲಾರಿ ಸಮೀಪ ಇಟ್ಟಿದ್ದ ಪಲ್ಸರ್ ಬೈಕನ್ನು ಅಲ್ಲಯೇ ಬಿಟ್ಟು ಪರಾರಿಯಾಗಿದ್ದಾರೆ. ಅಷ್ಟರಲ್ಲಿ ಬೋರ್ ವೆಲ್ ಮಾಲೀಕ ಕಾರ್ತಿಕ ಪೋಲಿಸ್ 112ಕ್ಕೆ ಕರೆ ಮಾಡಿದ್ದು, ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post