ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಬಲಗೊಳಿಸಲು ಶಾಲಾ ಕಾಲೇಜುಗಳಲ್ಲಿ ಪಠ್ಯ ಚಟುವಟಿಕೆಗಳ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಕಡ್ಡಾಯ ಮಾಡುವುದು ಸೂಕ್ತ ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ #MLC Dr. Dhananjaya Sarji ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ಅತ್ಯಂತ ಮೌಲ್ಯಯುತವಾಗಿ ಮಾತನಾಡಿದ ಅವರು, ನಾವೆಲ್ಲ ನಮ್ಮ ಹಿರಿಯರು ಹೇಳಿದ ಮಾತನ್ನು ಕೇಳಿದ್ದೇವೆ ಓದು ಒಕ್ಕಾಲು-ಬುದ್ದಿ ಮುಕ್ಕಾಲು, ಓದು ಕೆಲಸ ಮಾಡ್ತು-ಬುದ್ದಿ ದೇಶ ಆಳ್ತು ಅಂತ. ಜೀವನದಲ್ಲಿ ಓದು ಕೇವಲ 25% ಮಾತ್ರ ಆದರೆ ಬುದ್ದಿ 75%. ಎರಡು ಮೆದಳು ಸಮತೋಲನದಲ್ಲಿ ಕಾರ್ಯ ಮಾಡಿದಾಗ ಮಾತ್ರ ಮಕ್ಕಳ ದೈಹಿಕ ಮಾನಸಿಕ ಆರೋಗ್ಯ ಕೂಡ ಬಲಗೊಳ್ಳುತ್ತೆ. ಈ ನಿಟ್ಟಿನಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಆಗಬೇಕು ಅಂದರೆ ಮಕ್ಕಳಿಗೆ ಕ್ರೀಡೆ ಮತ್ತು ಯೋಗ ತುಂಬಾ ಅವಶ್ಯಕ. ಶಾಲಾ ಕಾಲೇಜುಗಳಲ್ಲಿ ಪಠ್ಯ ಚಟುವಟಿಕೆಗಳ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಕಡ್ಡಾಯ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು.
ಈ ಜಗತ್ತಿನ ಸೃಷ್ಟಿಯಲ್ಲಿ ಮನುಷ್ಯರಿಗೆ ಭಗವಂತ ಎರಡು ಕೈ ಕೊಟ್ಟಿದ್ದಾನೆ. ಎರಡು ಕಾಲು, ಎರಡು ಕಿವಿ, ಎರಡು ಕಿಡ್ನಿ, ಎರಡು ಶ್ವಾಸಕೋಶ, ಇವುಗಳ ರೀತಿಯಲ್ಲಿ ಎಡ ಮೆದುಳು ಮತ್ತು ಬಲ ಮೆದುಳು ಎಂಬ ಎರಡು ಮೆದುಳನ್ನು ಕೊಟ್ಟಿದ್ದಾನೆ. ಹಾಗಾಗಿ ಬಲಗಡೆ ಕೈ ಅಲ್ಲಿ ಬರೆಯುವಂತಹ ಮಕ್ಕಳಲ್ಲಿ ಒತ್ತಡ ಎಡಗಡೆ ಮೆದುಳಿನ ಮೇಲೆ ಬೀಳುತ್ತದೆ ಎಂದರು.
Also read: ಮಾ.8, 9ರಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ರಂಗೋತ್ಸವ ಕಾರ್ಯಕ್ರಮ
ಇವತ್ತಿನ ಕಾಲದಲ್ಲಿ ನಾವು ಕೇವಲ ಅಂಕಪಟ್ಟಿಯಲ್ಲಿ ಬರುವ ಅಂಕಗಳಿಗೋಸ್ಕರ ಮಕ್ಕಳನ್ನು ಪಠ್ಯಗಳಲ್ಲಿ ಇರುವ ಪಾಠಗಳನ್ನು ಮಾತ್ರ ಅಭ್ಯಾಸ ಮಾಡಿಸುತ್ತಿರುವುದರಿಂದ ಕೆಳಗಡೆ ಮೆದುಳು ಚಟುವಟಿಕೆ ಇಲ್ಲದೆ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾ ಬರುತ್ತಿದೆ. ಈಗಿನ ಮಕ್ಕಳಲ್ಲಿ ಎಡಗಡೆ ಮೆದುಳು ಒತ್ತಡವನ್ನು ಹೆಚ್ಚು ಅನುಭವಿಸುತ್ತಿರುವದರಿಂದ ಅವರಲ್ಲಿ ಖಿನ್ನತೆ ಜಾಸ್ತಿ ಆಗ್ತಿದೆ. ಆತ್ಮಹತ್ಯೆಗಳು ಜಾಸ್ತಿ ಆಗ್ತಿದೆ. ಆತ್ಮಸ್ಥೆÊರ್ಯ, ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಬಲಗಡೆ ಮೆದುಳು ಸುಧಾರಣೆ ಆಗಬೇಕು ಅಂದರೆ ಕ್ರೀಡೆ, ಯೋಗಗಳಂತಹ ಪಠ್ಯೇತರ ಚಟುವಟಿಕೆಗಳು ಕೂಡ ಮಕ್ಕಳಿಗೆ ಅವಶ್ಯಕ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post