ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ರಾಜ್ಯ ಪೊಲೀಸ್ #Karnataka State Police ಓಟ 2024ರ ಯಶಸ್ಸಿನ ಹಿನ್ನೆಲೆಯಲ್ಲಿ 2ನೇ ಆವೃತ್ತಿಯ ಕರ್ನಾಟಕ ರಾಜ್ಯ ಪೊಲೀಸ್ ಓಟವನ್ನು “ನಮ್ಮ ಪೊಲೀಸ್ ನಮ್ಮ ಹೆಮ್ಮೆ,” “ಎಲ್ಲರಿಗಾಗಿ ಫಿಟ್ ನೆಸ್” ಮತ್ತು “ಮಾದಕ ದ್ರವ್ಯ ಮುಕ್ತ ಕರ್ನಾಟಕ” ಧ್ಯೇಯ ವಾಕ್ಯದೊಂದಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಮಾ.9 ರಂದು ಬೆಳಗ್ಗೆ 6 ಗಂಟೆಗೆ ಶಿವಮೊಗ್ಗ ನಗರದಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ 5ಕೆ ಮತ್ತು ಪುರುಷರಿಗಾಗಿ 10ಕೆ ಮ್ಯಾರಥಾನ್ ಓಟವನ್ನು #Marathon ಹಮ್ಮಿಕೊಳ್ಳಲಾಗಿದೆ.
5ಕೆ ಮ್ಯಾರಥಾನ್ ಓಟವನ್ನು ಡಿಎಆರ್ ಪೊಲೀಸ್ ಕವಾಯತು ಮೈದಾನದಿಂದ ಪ್ರಾರಂಭಿಸಿ, ಅಶೋಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ಶಿವಪ್ಪ ನಾಯಕ ವೃತ್ತ, ಕರ್ನಾಟಕ ಸಂಘ ವೃತ್ತ, ಡಿವಿಎಸ್ ವೃತ್ತ, ಮಹಾವೀರ ವೃತ್ತ, ಶಿವಮೂರ್ತಿ ವೃತ್ತ, ಜೈಲ್ ವೃತ್ತ, ಐಬಿ ವೃತ್ತದ ಮುಖಾಂತರ ಡಿಎಆರ್ ಪೆÇಲೀಸ್ ಕವಾಯತು ಮೈದಾನಕ್ಕೆ ಬಂದು ಮುಕ್ತಾಯ ಮಾಡಲಾಗುದು. 10ಕೆ ಮ್ಯಾರಥಾನ್ ಓಟವನ್ನು ಇದೇ ಮಾರ್ಗದಲ್ಲಿ 2 ಸುತ್ತುಗಳು ಓಡಿ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಮುಕ್ತಾಯವಾಗಲಿದೆ.
ಈ ಮ್ಯಾರಥಾನ್ ಓಟದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ನ ಅಧಿಕಾರಿ ಮತ್ತು ಸಿಬ್ಬಂದಿಗಳು, ಕೆ.ಎಸ್.ಆರ್.ಪಿ 8ನೇ ಪಡೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು, ಕೆ.ಎಸ್.ಐ.ಎಸ್.ಎಫ್ ಶಿವಮೊಗ್ಗದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು, ರೈಲ್ವೇ ಪೊಲೀಸ್ ಹಾಗೂ ಯುವಜನ ಮತ್ತು ಕ್ರೀಡಾ ಇಲಾಖೆ, ಎನ್.ಎಸ್.ಎಸ್ / ಎನ್.ಸಿ.ಸಿ, ಶಿವಮೊಗ್ಗ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳು ವಿಧ್ಯಾರ್ಥಿಗಳು ಮತ್ತು ಶಿವಮೊಗ್ಗ ಜಿಲ್ಲೆಯ ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಭಾಗವಹಿಸಲಿದ್ದು, ಇವರೊಂದಿಗೆ ಮ್ಯಾರಥಾನ್ ಓಟದಲ್ಲಿ ಭಾಗವಹಿಸಲು ಇಚ್ಚೆಯುಳ್ಳ ಸಾರ್ವಜನಿಕರು ಸಹ ಭಾಗವಹಿಸಬಹುದಾಗಿದೆ.
Also read: ಶ್ರೀ ಪ್ರಸನ್ನ ಗಣಪತಿ ಸ್ಥಿರಮೂರ್ತಿ ಪ್ರತಿಷ್ಠಾಪನೆಯ 31ನೇ ವರ್ಧಂತ್ಯೋತ್ಸವ
ಮ್ಯಾರಥಾನ್ ಓಟದಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುವ ಪುರುಷ ಮತ್ತು ಮಹಿಳಾ ಓಟಗಾರರಿಗೆ, ನಗದು ಬಹುಮಾನ, ಪ್ರಶಂಸನಾ ಪತ್ರ ಮತ್ತು ಪದಕಗಳನ್ನು ನೀಡಲಾಗುವುದು.
ಮ್ಯಾರಥಾನ್ ಓಟದಲ್ಲಿ ಭಾಗವಹಿಸಲು ಇಚ್ಚೆಯುಳ್ಳವರು ಈ ಕೆಳಕಂಡ ಕ್ಯೂ.ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ, ಮಾ. 8 ರಂದು ಮಧ್ಯಾಹ್ನ 2 ಗಂಟೆಯ ಒಳಗಾಗಿ ನೋಂದಣಿ ಮಾಡಿಕೊಳ್ಳುವುದು. ಹೆಚ್ಚಿನ ಮಾಹಿತಿಗಾಗಿ ಸಂತೋಷ್ ಕುಮಾರ್, ಸಿಪಿಐ ಶಿವಮೊಗ್ಗ ಸಂಚಾರ ವೃತ್ತ, ಮೊಬೈಲ್ ನಂಬರ್ 9480803309 ಮತ್ತು ಸತ್ಯನಾರಾಯಣ್, ಪಿಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಮೊಬೈಲ್ ನಂಬರ್ 9480803332 ಮತ್ತು ಶಿವಮೊಗ್ಗ ಜಿಲ್ಲಾ ಪೆÇಲೀಸ್ ಕಂಟ್ರೋಲ್ ರೂಂ ಮೊಬೈಲ್ ನಂಬರ್ 9480803300 ಗೆ ಸಂಪರ್ಕಿಸಬಹುದಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post