ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿನೋಬನಗರದ ಚಾಚಾ ನೆಹರು ಪಾರ್ಕ್ ಆವರಣದಲ್ಲಿರುವ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ #Shri Prasanna Ganapathi Temple ಶ್ರೀ ಸ್ವಾಮಿಯ ಸ್ಥಿರಮೂರ್ತಿ ಪ್ರತಿಷ್ಠಾಪನೆಯ 31ನೇ ವರ್ಧಂತ್ಯೋತ್ಸವ ಸಮಾರಂಭವು ಮಾ.7ರಂದು ಜರುಗಲಿದೆ.
ಅಂದು ಬೆಳಿಗ್ಗೆ 8ಗಂಟೆಯಿಂದ ಶ್ರೀ ಸ್ವಾಮಿ ಸನ್ನಿಧಿಯಲ್ಲಿ ಗಣಪತಿ ಪೂಜೆ, ಪುಣ್ಯಾಹ ವಾಚನ, ದೇವನಾಂದಿ, ಋತ್ವಿಕ್ ವರ್ಣನೆ, ಬ್ರಹ್ಮ ಕಳಸ ಸ್ಥಾಪನೆ, ನವಗ್ರಹ ಪೂರ್ವಕ ಅಧಿವಾಸ ಹೋಮ, ಕಲಾತತ್ವ ಹೋಮ, ಪ್ರಕಾರ ಪಲ್ಲಕ್ಕಿ ಉತ್ಸವ, ಬ್ರಹ್ಮ ಕುಂಭಾಭಿಷೆಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಇರುತ್ತದೆ. ಸಂಜೆ 6-30ಕ್ಕೆ ರಾಮನ್ ಸಹೋದರಿಯರಿಂದ ವೀಣಾ ವಾದನ ಕಾರ್ಯಕ್ರಮವಿರುತ್ತದೆ.
Also read: ಮಾ.9ರಂದು ಉಚಿತ ಕಿವಿ ತಪಾಸಣೆ, ಶ್ರವಣ ಸಾಧನಗಳ ವಿತರಣಾ ಕಾರ್ಯಕ್ರಮ
ಈ ದೇವತಾ ಕಾರ್ಯಕ್ಕೆ ಭಕ್ರಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಸ್ಥಾನದ ಚೈತನ್ಯ ಸಮಿತಿ ಅಧ್ಯಕ್ಷ ಕೆ.ಸಿ.ಬಿ.ಪಿಳ್ಳೈ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ಎಚ್.ಚಂದ್ರಪ್ಪ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















