ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಚೆಕ್ ಬೌನ್ಸ್ ಪ್ರಕರಣಕ್ಕೆ #Cheque Bounce Case ಸಂಬಂಧಪಟ್ಟಂತೆ ನಿರ್ಮಾಪಕ ಎಂ.ಎನ್. ಕುಮಾರ್ #M N Kumar ಅವರನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿರುವ ಘಟನೆ ನಡೆದಿದೆ.
ನಟರೊಬ್ಬರಿಂದ ಸಾಲ ಪಡೆದುಕೊಂಡಿದ್ದ ಕುಮಾರ್ ಅವರು ಹಣವನ್ನು ವಾಪಸ್ ನೀಡದೆ, ಕುಮಾರ್ ಅವರು ಕೊಟ್ಟಿದ್ದ ಚೆಕ್ ಸಹ ಬೌನ್ಸ್ ಆಗಿತ್ತು. ಕುಮಾರ್ ಅವರ ವಿರುದ್ಧ 4ನೇ ಎಸಿಎಂಎಂ ಕೋರ್ಟ್‌ನಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಕುಮಾರ್‌ಗೆ ಶಿಕ್ಷೆ ವಿಧಿಸಿ ಬಂಧನದ ವಾರಂಟ್ ಹೊರಡಿಸಿತ್ತು. ಕುಮಾರ್ ಅವರ ಕಚೇರಿ ಗಾಂಧಿನಗರದಲ್ಲಿ ಇದ್ದ ಕಾರಣ ಉಪ್ಪಾರಪೇಟೆ ಠಾಣೆ ಪೊಲೀಸರಿಗೆ ಕೋರ್ಟ್‌ನಿಂದ ವಾರೆಂಟ್ ಜಾರಿ ಮಾಡಲು ನ್ಯಾಯಾಲಯ ಆದೇಶಿಸಿತ್ತು.
ಇದೀಗ ಕುಮಾರ್ ಅವರನ್ನು ಬಂಧಿಸಿರುವ ಪೊಲೀಸರು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಬಂಧನಕ್ಕೊಳಗಾಗಿರುವ ಕುಮಾರ್ ಅವರು, ‘ರನ್ನ’, #Ranna ‘ಮಾಣಿಕ್ಯ’, #Manikya ‘ಮುಕುಂದ ಮುರಾರಿ’, #MukundaMurari ‘ಅಂಜನಿಪುತ್ರ’ #Anjaniputra ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post