ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ #Terrorist Attack in Pahalgam ಸಾವನ್ನಪ್ಪಿದವರ ಮೃತದೇಹಗಳ ರವಾನೆಗೆ ಅಂತಿಮ ಸಿದ್ಧತೆ ಮಾಡಲಾಗಿದೆ. ಶಿವಮೊಗ್ಗದ ಉದ್ಯಮಿ ಮಂಜುನಾಥ ರಾವ್ #Manjunath Rao ಅವರ ಪಾರ್ಥೀವ ಶರೀರದ ಮುಂದೆ ಅವರ ಪತ್ನಿ ಪಲ್ಲವಿ ಕಣ್ಣಿರಾದರು. ಕಾಶ್ಮೀರಕ್ಕೆ ತೆರಳಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ #Minister Santosh Lad ಪಲ್ಲವಿ ಅವರನ್ನು ಸಂತೈಸಿದರು.
ಅನಂತನಾಗ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹಗಳನ್ನು ಇರಿಸಲಾಗಿದೆ. ಬೆಂಗಳೂರಿನ ಭರತ್ ಭೂಷಣ್, ಮಧುಸೂದನ್ ಸೋಮಿಶೆಟ್ಟಿ ಮತ್ತು ಶಿವಮೊಗ್ಗದ ಮಂಜುನಾಥ ರಾವ್ ಅವರ ಮೃತದೇಹಗಳು ಇಲ್ಲಿಯೇ ಇರಿಸಲಾಗಿದೆ.
ಮೃತದೇಹಗಳನ್ನು ಪ್ರತ್ಯೇಕ ಬಾಕ್ಸ್‌ನಲ್ಲಿ ಇರಿಸಲಾಗಿದೆ. ಅವುಗಳ ಮೇಲೆ ಮೃತರ ಹೆಸರು, ವಿಳಾಸ, ಸಂಬಂಧಿಕರ ದೂರವಾಣಿ ಸಂಖ್ಯೆ ಸೇರಿದಂತೆ ವಿವಿಧ ಮಾಹಿತಿ ಬರೆಯಲಾಗಿದೆ. ಕರ್ನಾಟಕಕ್ಕೆ ರವಾನಿಸಬೇಕಿರುವ ಮೂವರ ಮೃತದೇಹಗಳನ್ನು ಒಂದೆಡೆ ಇರಿಸಲಾಗಿದೆ. ಸಚಿವ ಸಂತೋಷ್ ಲಾಡ್ ಅವರು ಮೃತದೇಹಗಳ ಇರಿಸಿದ್ದ ಬಾಕ್ಸ್‌ಗಳನ್ನು ಪರಿಶೀಲಿಸಿದ ಸಂಬಂಧಿಕರಿಗೆ ಸಾಂತ್ವನ ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post