ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಯೋತ್ಪಾದಕತೆಯನ್ನು #Terrorism ತಡೆಯಲು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಉಳಿಸಲು ಪಾಕಿಸ್ತಾನದೊಂದಿಗೆ ಯುದ್ಧ ಅನಿವಾರ್ಯ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ (ಚೆನ್ನಿ) #MLA Channabaappa ತಮ್ಮ ಆಕ್ರೋಶವನ್ನು ಅಭಿಪ್ರಾಯದ ಮೂಲಕ ಹೊರಹಾಕಿದರು.
ಇಂದು ಶಾಸಕರ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊನ್ನೆಯ ಭಯೋತ್ಪಾದಕ ಘಟನೆಯಿಂದ ಇಡೀ ಭಾರತೀಯರ ಮನ ಮಿಡಿದಿದೆ. ಭಯೋತ್ಪಾದಕತೆಯ ಅಟ್ಟಹಾಸ ಇನ್ನೂ ಎಷ್ಟುದಿನ ಎನ್ನುವ ಆತಂಕವೂ ಮನೆ ಮಾಡಿದೆ. ಶಿವಮೊಗ್ಗ ಮಂಜುನಾಥ್ ರಾವ್ ಸೇರಿದಂತೆ ಸುಮಾರು 28 ಅಮಾಯಕರು ಈ ದಾಳಿಗೆ ಬಲಿಯಾಗಿದ್ದಾರೆ. ಇಡೀ ದೇಶ ಒಟ್ಟಾಗಿ ಇದನ್ನು ಖಂಡಿಸುತ್ತಿದೆ ಎಂದರು.

ಕಾಂಗ್ರೆಸ್ ಪಕ್ಷದವರು ಓಲೈಕೆಯ ಮಾನಸಿಕತೆಯಿಂದ ಇನ್ನೂ ಹೊರಬಂದಿಲ್ಲ. ಒಂದು ಕಡೆ ಕೇಂದ್ರ ಸರ್ಕಾರದ ಜೊತೆಗೆ ನಾವು ಇದ್ದೇವೆ ಎಂದು ಹೇಳುವು ನಾಯಕರು, ಮತ್ತೊಂಡು ಕಡೆ ಭದ್ರತೆಯ ಬಗ್ಗೆ ಅಪಸ್ವರ ಎತ್ತುತ್ತಾರೆ. ರಾಬರ್ಟ ವಾದ್ರಾನಂತವರು ಉಗ್ರಗಾಮಿಗಳಿಗೆ ಶಕ್ತಿ ನೀಡುವಂತಹ ಹೇಳಿಕೆ ಕೊಡುತ್ತಿದ್ದಾರೆ. ಇಡೀ ದೇಶ ಭಯೋತ್ಪಾದನೆಯ ವಿರುದ್ಧ ಮಾತನಾಡುತ್ತಿದ್ದರೆ, ಈತ ಮಾತ್ರ ಭಯೋತ್ಪಾದಕರನ್ನು ಸಮರ್ಥಿಸಿಕೊಳ್ಳುವಂತಹ ಹೇಳಿಕೆ ನೀಡುತ್ತಾನೆ. ರಾಬರ್ಟ ವಾದ್ರಾನನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಆಕ್ರೋಶ ಮತ್ತು ಆವೇಶವನ್ನು ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಅವರು ಜಗತ್ತು ಮೆಚ್ಚುವ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಪಾಕಿಸ್ತಾನಿಯರ ಎಲ್ಲಾ ವೀಸಾಗಳನ್ನು ರದ್ದು ಮಾಡಲಾಗಿದೆ. ಸಿಂಧೂ ನದಿಯ ನೀರು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಭಾರತದಲ್ಲಿರುವ ಪಾಕಿಸ್ತಾನಿಗಳನ್ನು ಜಾಗ ಬಿಡುವಂತೆ ತಿಳಿಸಿದ್ದಾರೆ. ವಾಯು ಮಾರ್ಗ ಬಂದ್ ಆಗಿದೆ. ಒಟ್ಟಾರೆ ಪಾಕಿಸ್ತಾನದ ವಿರುದ್ಧ ಭಾರತ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದೆ ಎಂದರು.
ಭಯೋತ್ಪಾದಕರು ಜಿಹಾದ್ ಯುದ್ಧ ಸಾರಿದ್ದಾರೆ. ತಮ್ಮ ಪ್ರಾಣ ಬಲಿ ಕೊಡಲೂ ತಯಾರಾಗಿದ್ದಾರೆ. ತಾವು ಸತ್ತರೆ ಸ್ವರ್ಗಕ್ಕೆ ಹೋಗುವುದಾಗಿ ನಂಬಿದ್ದಾರೆ. ಆದರೆ, ಖಂಡಿತ ಅವರು ನರಕಕ್ಕೆ ಹೋಗುತ್ತಾರೆ. ಭಯೋತ್ಪಾದಕರನ್ನು ಮುಗಿಸಿದರೆ ಸಾಲದು, ಭಯೋತ್ಪಾದನೆಗೆ ಕುಮ್ಮಕ್ಕು ಕೊಡುವವರನ್ನು ಮುಗಿಸಬೇಕಾಗಿದೆ. ಪಾಕಿಸ್ತಾನ ಎಂಬುದು ನಾವು ಕೊಟ್ಟ ಭಿಕ್ಷೆಯ ದೇಶ. ಅದಕ್ಕೆ ಎಷ್ಟು ಸೊಕ್ಕು ಇರಬೇಕು. ನೆಹರೂ ಮಾಡಿದ ತಪ್ಪಿನಿಂದ ಪಾಕಿಸ್ತಾನ ಉದಯವಾಯಿತು. ಅದು ಸರ್ವನಾಶ ಆಗಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎನ್.ಜೆ. ನಾಗರಾಜ್, ಜಗದೀಶ್, ಜ್ಞಾನೇಶ್ವರ್, ಮೋಹನ್ ರೆಡ್ಡಿ, ಮಂಜುನಾಥ್ ನವಿಲೆ, ದೀನದಯಾಳ್, ಶ್ರೀನಾಗ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post