ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಹರಿದಾಸಸಾಹಿತ್ಯ ಪರಂಪರೆಯು ಸಾಮಾನ್ಯರಿಗೂ ತಾತ್ವಿಕ ವಿಚಾರಗಳನ್ನು ಸರಳ ಮಾತುಗಳಲ್ಲಿ ತಲುಪಿಸುವ ಮೂಲಕ ಸನಾತನ ಸಂಸ್ಕೃತಿಯ ಬೆಳವಣಿಗೆಗಾಗಿ ರೂಪುಗೊಂಡದ್ದಾಗಿದೆ. ಶ್ರೀಪಾದರಾಜರು, ಶ್ರೀವ್ಯಾಸರಾಜರು, ಶ್ರೀವಾದಿರಾಜರು, ಪುರಂದರದಾಸರು ಹಾಗು ಮಹಿಳಾ ಹರಿದಾಸಿಯರ ಹೀಗೆ ಅನೇಕ ದಾಸರ ಕೊಡುಗೆಯು ಅಪೂರ್ವವಾದುದು. ಇಂತಹ ದಾಸಸಾಹಿತ್ಯವು ಇಂದಿಗೂ ಉಳಿದು ಬರುವಲ್ಲಿ ಮಹಿಳೆಯರ ಪಾತ್ರ ದೊಡ್ಡದು. ತಾವು ದಿನವೂ ಹಾಡುವುದು ಮತ್ತು ಪಾರಾಯಣ ಮಾಡುವುದಲ್ಲದೆ ಮುಂದಿನ ಪೀಳಿಗೆಗೂ ಅದನ್ನು ತಲುಪಿಸುತ್ತಾ ಬಹುದೊಡ್ಡ ಸಾಧನೆಯನ್ನು ಸ್ತ್ರೀಸಮಾಜವು ಮಾಡಿದೆ.
ಮಹಿಳಾ ಹರಿದಾಸರ ಸಾಹಿತ್ಯದ ಸಂಗ್ರಹ, ಸಂಘಟನೆ, ಸಂವಾದ, ಸಮಾವೇಶ, ಪ್ರಕಟಣೆ, ಗೌರವ ಪ್ರಶಸ್ತಿ ಮುಂತಾದ ಕಾರ್ಯಕ್ರಮಗಳ ಚಾಲನೆ ಹಾಗೂ ಜಾಗೃತಿ ಮೂಡಿಸುವ ದಿಶೆಯಲ್ಲಿ ಕಾಲಕ್ಕೆ ತಕ್ಕಂತೆ ಒದಗುವ ಎಲ್ಲ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಎಲ್ಲ ದಿಕ್ಕುಗಳಲ್ಲಿ ಅದರ ರಕ್ಷಣೆ, ಅನುಷ್ಠಾನ ಮತ್ತು ಅಭಿವೃದ್ಧಿಯನ್ನು ಮಾಡುವ ಉದ್ದೇಶ್ಯದಿಂದ ರೂಪುಗೊಳ್ಳುತ್ತಿರುವ “ಮೈತ್ರೇಯೀ ಮಹಿಳಾ ಹರಿದಾಸ ಟ್ರಸ್ಟ್” ನ ಸಂಸ್ಥಾಪನಾ ಸಮಾರಂಭವನ್ನು ಮೇ 17 ಶನಿವಾರ ಸಂಜೆ 5ಗಂಟೆಗೆ ನಗರದ ಬಸವನಗುಡಿ ನ್ಯಾಷನಲ್ ಕಾಲೇಜು ಎದುರಿನ ಶ್ರೀಉತ್ತರಾದಿ ಮಠದ ದಿಗ್ವಿಜಯ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.
ಕೇವಲ ಕೈವಲ್ಯ ಜ್ಞಾನದಭಿಲಾಷೆಯಿಂದ ಯಾಜ್ಞವಲ್ಕ್ಯರನ್ನು ಮದುವೆಯಾಗಿ, ತನ್ನ ಜ್ಞಾನದ ಪ್ರಭೆಯ ಮೂಲಕವೇ ಋಗ್ವೇದದಲ್ಲಿ ಹಾಗೂ ಬೃಹದಾರಣ್ಯಕ ಉಪನಿಷತ್‌ನ ಬ್ರಾಹ್ಮಣಗಳಲ್ಲಿ ದಾಖಲಾಗಿರುವ ಮೈತ್ರೇಯಿಯ ಮಾರ್ಗದಲ್ಲಿ ಡಾ. ಜಯಲಕ್ಷ್ಮಿ ಮಂಗಳಮೂರ್ತಿ ಡಾ. ಸುಧಾ ನರಸಿಂಗರಾವ್ ದೇಶಪಾಂಡೆ, ಡಾ, ಶಾಂತಾ ರಘೋತ್ತಮಾಚಾರ್, ಡಾ, ವೃಂದಾ ಸಂಗಮ್, ಡಾ. ವಿದ್ಯಾ ಕಸಬೆ, ಡಾ. ಶೀಲಾ ದಾಸ್, ಡಾ, ವಿದ್ಯಾಶ್ರೀ ಮಾನ್ವಿ , ದಾಸವಾಣಿ ಕರ್ನಾಟಕದ ಮಾನಸ ಜಯರಾಜ್ ಕುಲಕರ್ಣಿ ,ಪ್ರಿಯಾ ಪ್ರಾಣೇಶ ಹಾಗೂ ಅನೇಕ ಪ್ರತಿಭಾ ಮಹಿಳಾ ಮಣಿಗಳು ಇದರ ಸಂಚಲನ ಚೇತನಗಳಾಗಿದ್ದಾರೆ.
ಭುವನಗಿರಿ ಮಠದ ಪೂಜ್ಯ ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದರು ದಿವ್ಯ ಸಾನ್ನಿಧ್ಯ ವಹಿಸಿ “ಮೈತ್ರೇಯೀ ಮಹಿಳಾ ಹರಿದಾಸ ಟ್ರಸ್ಟ್”ಅನ್ನು ಉಧ್ಘಾಟಿಸುವರು. ವಿಜಯಪುರದ ನಿವೃತ್ತ ನ್ಯಾಯಾಧೀಶೆ ಮೀನಾಕ್ಷಿ ಸಾವಳಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಅಂತಾರಾಷ್ಟ್ರೀಯ ಖ್ಯಾತಿಯ ಹಿರಿಯ ಹರಿದಾಸಸಾಹಿತ್ಯ ಸಂಶೋಧಕ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ದಂಪತಿಗಳು ಹಾಗೂ ಸಂಸದ ತೇಜಸ್ವಿ ಸೂರ್ಯ ದಂಪತಿಗಳ ಉಪಸ್ಥಿತಿಯಲ್ಲಿ ಅದಮ್ಯ ಫೌಂಡೇಷನ್ ಸಂಸ್ಥಾಪಕಿ ತೇಜಸ್ವಿನಿ ಅನಂತಕುಮಾರ್ , ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲ ಡಾ.ಸತ್ಯಧ್ಯಾನಾಚಾರ್ಯ ಕಟ್ಟಿ, ಎಕೆಬಿಎಂಎಸ್ ಅಧ್ಯಕ್ಷ ಎಸ್ ರಘುನಾಥ್, ದಾಸಸಾಹಿತ್ಯ ಚಿಂತಕರಾದ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ,ಡಾ.ಅನಂತಪದ್ಮನಾಭರಾವ್, ನಿವೇದಿತಾ ಹೊನ್ನತ್ತಿ, ರವೀಂದ್ರ ಕುಷ್ಟಗಿ,ವಾಸುದೇವ ಅಗ್ನಿಹೋತ್ರಿ, ಪರಶುರಾಮ ಬೆಟಗೇರಿ ದಂಪತಿಗಳು, ಶಾಂತಾಬಾಯಿ, ಮುಕುಂದ್ ಗಂಗೂರ, ಎ.ಬಿ.ಶ್ಯಾಮಾಚಾರ್ಯ, ಡಾ.ಗುರುರಾಜ ಪೋಶೆಟ್ಟಿಹಳ್ಳಿ, ವಾದಿರಾಜ ಅಗ್ನಿಹೋತ್ರಿ , ಶ್ರೀನಿವಾಸ ಉತ್ಸವ ಬಳಗದ ವಾದಿರಾಜ ಟಿ, ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆಯ ಎಚ್.ಬಿ.ಲಕ್ಷ್ಮಿನಾರಾಯಣಾಚಾರ್ಯ, ಡಾ.ಸುರೇಶ ಪಾಟೀಲ, ಡಾ.ವಾಣಿಶ್ರೀ ಗಿರೀಶ್, ಗಾಯಕ ರಾಯಚೂರು ಶೇಷಗಿರಿದಾಸ, ವಕೀಲೇ ಗೌರಿ ಜಡೆ ಮೊದಲಾದವರು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು,
ಮೈತ್ರೇಯಿ ಪ್ರಕಾಶನದಿಂದ ಡಾ.ವಿದ್ಯಾ ಕಸ್ಬೆ ಸಂಪಾದಕತ್ವದ “ಪ್ರಮುಖ ಮಹಿಳಾ ಹರಿದಾಸರು” ಗ್ರಂಥ ಲೋಕಾರ್ಪಣೆ , ಸಾಧಕ ಮಹಿಳಾ ಹರಿದಾಸಿಯರಾದ ಡಾ. ಎನ್ ಜಿ ವಿಜಯಲಕ್ಷ್ಮಿ, ಕಮಲಾಕ್ಷಿಬಾಯಿ ,ಡಾ. ಸುಮನಾ ಬದರೀನಾಥ್, ಶ್ರೀಮತಿ ರಾವ್, ಶೋಭಾ ಮೂರ್ತಿ ವಿಜಯಲಕ್ಷ್ಮಿ ರಾಘವೇಂದ್ರರಾವ್ ರವರುಗಳಿಗೆ – ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿದವರಿಗೆ ಹಾಗೂ ವಿಶೇಷ ಸಾಧನೆಗೈದ ಮಾಡಿದವರಿಗೆ ಪ್ರತಿಭಾ ಪುರಸ್ಕಾರದಿಂದ ಗೌರವಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post