ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಲ್ಬುರ್ಗಿಯಲ್ಲಿ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿಯವರನ್ನು 5 ಗಂಟೆಗಳ ಕಾಲ ಕೂಡಿ ಹಾಕಿದ ಕಾಂಗ್ರೇಸ್ ಕಾರ್ಯಕರ್ತರ ಕ್ರಮ ಖಂಡನೀಯ. ಗೂಂಡಾ ಸಂಸ್ಕೃತಿಯ ಸಚಿವ ಪ್ರಿಯಾಂಕ್ ಖರ್ಗೆ #Minister Priyanka Kharge ರಾಜೀನಾಮೆ ನೀಡಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೆಲ ಸಚಿವರ ಕೈಯಲ್ಲಿದೆ. ಅದರಂತೆ ಕಲ್ಬುರ್ಗಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಅಲ್ಲಿ ಖರ್ಗೆ ವಿರುದ್ದ ಮಾತನಾಡುವವರು ಯಾರೇ ಆಗಲಿ ಹತ್ತಿಕ್ಕುವ ಕೆಲಸ ಆಗುತ್ತಿದೆ. ಪೋಲಿಸರು ಕೂಡ ಕಾಂಗ್ರೆಸ್ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ವಿಪಕ್ಷ ನಾಯಕರಿಗೆ ದಿಗ್ಭಂಧನ ಹಾಕುವ ಕೆಲಸ ಆಗಲು ಖರ್ಗೆ ಕುಟುಂಬದ ಆಸ್ತಿ ವಿವರ ಜನತೆಗೆ ತಿಳಿಸಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಈ ರೀತಿ ಮಾಡುತ್ತಿದ್ದಾರೆ ಎಂದರು.

ಗೋಷ್ಠಿಯಲ್ಲಿ ಶಾಸಕರಾದ ಚನ್ನಬಸಪ್ಪ. ಡಿ.ಎಸ್.ಅರುಣ್. ನಗರಾಧ್ಯಕ್ಷ ಮೋಹನ್ ರೆಡ್ಡಿ. ಕೆ.ವಿ. ಅಣ್ಣಪ್ಪ. ಮಂಜುನಾಥ್ ನವಿಲೆ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post