ಮೊದಲೇ ಹೇಳಿದಂತೆ Military First ಪಾಲಿಸಿಯ ಉತ್ತರ ಕೊರಿಯಾ ತನ್ನ ದೇಶದ ಅರ್ಧದಷ್ಟು ಜನ ಹಸಿವಿನಿಂದ ಸಾಯತ್ತಿದ್ದರೂ ತನ್ನ ಮಿಲಿಟರಿ ವೆಚ್ಚವನ್ನು ದಿನೇದಿನೇ ಹೆಚ್ಚಿಸುತ್ತಲೇ ಇದೆ. ಬೇರೆ ದೇಶಗಳು ಸಾಮಾನ್ಯವಾಗಿ ಹೊರಗಿನ ವೈರಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸೈನ್ಯವನ್ನು ಕಟ್ಟಿ ಬೆಳೆಸಿದರೆ ಉತ್ತರ ಕೊರಿಯಾ ಮಾತ್ರ ತನ್ನ ನಾಗರಿಕರನ್ನು ಹದ್ದುಬಸ್ತಿನಲ್ಲಿಡಲು ಮತ್ತು 1953 ಕೊನೆಗೊಂಡ ಕೊರಿಯಾ ಯುದ್ಧದ ನಂತರ ಮತ್ತೊಮ್ಮೆ ದಕ್ಷಿಣ ಕೊರಿಯಾ ಮೇಲೆ ದಾಳಿ ನಡೆಸಿ ವಶಪಡಿಸಿಕೊಳ್ಳುವ ಅವಕಾಶಕ್ಕಾಗಿ ಕಾಯುತ್ತ ತನ್ನ ಸೈನ್ಯವನ್ನು ದಿನೇದಿನೇ ಹೆಚ್ಚೆಚ್ಚು ಬೆಳೆಸುತ್ತಿದೆ.
ಪ್ರಪಂಚದಲ್ಲಿ ಕೋಸ್ಟರಿಕಾ, ಹೈಟಿ, ಮಾರಿಷಸ್‌ನಂಥ ಸೈನ್ಯವೇ ಇಲ್ಲದ ದೇಶಗಳಿವೆ. ಚೀನಾ, ಅಮೆರಿಕಾ, ಭಾರತದಂತ ದೊಡ್ಡ ಪ್ರಮಾಣದಲ್ಲಿ ಸೈನ್ಯವನ್ನು ಹೊಂದಿರುವ ದೇಶಗಳಿವೆ. ಆದರೆ ಸೈನ್ಯವೇ ಎಲ್ಲವೂ ಆಗಿರುವಂತಹ ಮತ್ತೊಂದು ದೇಶವಿಲ್ಲ. ಏಕೆಂದರೆ, International Institute of strategic studies ಮಾಹಿತಿಯಂತೆ ಚೀನಾ, ಅಮೆರಿಕಾ ಮತ್ತು ಭಾರತದ ನಂತರ ಅತಿದೊಡ್ಡ ಸೈನ್ಯವನ್ನು ಹೊಂದಿರುವ ದೇಶ ಉತ್ತರ ಕೊರಿಯಾ.
ಹಾಗಾದರೆ ಭಾರತ, ಚೀನಾ ಹಾಗೂ ಅಮೆರಿಕಾ ದೊಡ್ಡ ಸೈನ್ಯ ಹೊಂದಿರುವುದು ಕೂಡ ಪ್ರಶ್ನಾರ್ಹವೇ? ಖಂಡಿತಾ ಅಲ್ಲ, ಏಕೆಂದರೆ ಚೀನಾ, ಅಮೆರಿಕಾ ಮತ್ತು ಭಾರತವು ಭೌಗೋಳಿಕವಾಗಿ ಮತ್ತು ಜನಸಂಖ್ಯೆಯಲ್ಲಿ ಉತ್ತರ ಕೊರಿಯಾದ ಭೂಪ್ರದೇಶ ನಮ್ಮ ನೆರೆಯ ತಮಿಳುನಾಡಿಗಿಂತ ಚಿಕ್ಕದು, ಜನಸಂಖ್ಯೆಯಲ್ಲಿ ಕರ್ನಾಟಕದ ಜನಸಂಖ್ಯೆಯ ಅರ್ಧವೂ ಸಹ ಇಲ್ಲ.
ದೇಶ/ರಾಜ್ಯ ಭೂ ಪ್ರದೇಶ ಜನಸಂಖ್ಯೆ
ಉ.ಕೊರಿಯಾ 1,20,540 sq.Km 2,48,95,000
ಛತ್ತಿಸ್‌ಘಢ 1,35,194 sq.Km 2,55,40,196
ನಮ್ಮ ದೇಶದ ಛತ್ತಿಸ್‌ಗಢ ರಾಜ್ಯದಷ್ಟೇ ಸರಿಸುಮಾರು ಭೂಪ್ರದೇಶ ಮತ್ತು ಜನಸಂಖ್ಯೆ ಹೊಂದಿರುವ ಉತ್ತರ ಕೊರಿಯಾ ಸರಿಸುಮಾರು ಭಾರತದಷ್ಟೇ ದೊಡ್ಡ ಸೈನ್ಯವನ್ನು ಹೊಂದಿದೆ.
(ಮುಂದುವರೆಯುವುದು)
Discussion about this post