ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈಗಾಗಲೇ ಜಿಲ್ಲೆಯ ರೈಲ್ವೆ ಸಂಪರ್ಕದಲ್ಲಿ ಬಹಳಷ್ಟು ಕೊಡುಗೆ ನೀಡಿರುವ ಸಂಸದ ಬಿ.ವೈ. ರಾಘವೇಂದ್ರ #MP Raghavendra ಅವರು ಈಗ ಮತ್ತೊಂದು ಕ್ರಾಂತಿಯನ್ನೇ ಮಾಡಲು ಹೊರಟಿದ್ದಾರೆ.
ಹೌದು… ಜಿಲ್ಲಾ ಕೇಂದ್ರ ಶಿವಮೊಗ್ಗದಿಂದ ಈಗಾಗಲೇ ಹಲವು ನಗರಗಳಿಗೆ ರೈಲುಗಳ ಸಂಚಾರವನ್ನು ಆರಂಭಿಸಲಾಗಿದ್ದು, ಈಗ ಮತ್ತೆ ಏಳು ಹೊಸ ರೈಲುಗಳ ಸಂಚಾರ ಆರಂಭಿಸುವುದಾಗಿ ಸಂಸದರ ಘೋಷಣೆ ಮಾಡಿದ್ದಾರೆ.
ಎಲ್ಲೆಲ್ಲಿಗೆ ರೈಲು ಆರಂಭ?
ಶಿವಮೊಗ್ಗದಿಂದ ತಿರುಪತಿ, ಶಿವಮೊಗ್ಗದಿಂದ ಬೆಂಗಳೂರು ನಡುವೆ ನೂತನ ಒಂದೇ ಭಾರತ್ ರೈಲು ಆರಂಭವಾಗುವುದು ಬಹುತೇಕ ನಿಶ್ಚಿತವಾಗಿವೆ.
ಇನ್ನು, ಶಿವಮೊಗ್ಗದಿಂದ ಕೇರಳದ ಎರ್ನಾಕುಲಂ, ಶಿವಮೊಗ್ಗದಿಂದ ಬಿಹಾರದ ಬಗಲ್ ಪುರ, ಶಿವಮೊಗ್ಗದಿಂದ ಜಾರ್ಖಂಡ್’ನ ಜೆಮ್ ಶಡ್ ಪುರ, ಶಿವಮೊಗ್ಗದಿಂದ ಪಂಜಾಬ್’ಗೆ ಚಂಢೀಗಡ, ಶಿವಮೊಗ್ಗದಿಂದ ಅಸ್ಸಾಂನ ಗೌಹಾಟಿ ನಿಲ್ದಾಣಗಳಿಗೆ ನೂತನ ರೈಲು ಸಂಚಾರ ಆರಂಭವಾಗಲಿದ್ದು, ಇವೆಲ್ಲವೂ ಬಹುತೇಕ ವಂದೇ ಭಾರತ್ ರೈಲುಗಳೇ ಆಗಿರಲಿವೆ ಎಂದು ಹೇಳಲಾಗಿದೆ.
ಯಾವಾಗ ಆರಂಭ?
ಶಿವಮೊಗ್ಗದ ಕೋಟೆ ಗಂಗೂರಿನಲ್ಲಿ ನಿರ್ಮಾಣವಾಗುತ್ತಿರುವ ಕೋಚಿಂಗ್ ಡಿಪೋ ಜನವರಿ ವೇಳೆಗೆ ಆರಂಭವಾಗಲಿದ್ದು, ಇದೇ ವೇಳೆ ಈ ಹೊಸ ರೈಲು ಸಂಚಾರಗಳೂ ಸಹ ಆರಂಭವಾಗಲಿವೆ ಎಂದು ಹೇಳಲಾಗಿದೆ.
ಶಿವಮೊಗ್ಗಕ್ಕೆ ಒಂದೇ ಭಾರತ್ ಸಂಚಾರಕ್ಕೆ ರೈಲ್ವೆ ಇಲಾಖೆ ಅದಕ್ಕೆ ವೇಳಾ ಪಟ್ಟಿಯನ್ನು ಸಹ ಸಿದ್ದಮಾಡಿ ಜೊತೆಯಲ್ಲಿ ರೈಲಿನ ಸಂಖ್ಯೆಯನ್ನೂ ನೀಡಿ ಸಿದ್ದ ಮಾಡಿಟ್ಟುಕೊಂಡಿದೆ ಎಂದು ಸಂಸದ ರಾಘವೇಂದ್ರ ಕೆಲವು ದಿನಗಳ ಹಿಂದೆ ಹೇಳಿದ್ದರು.
ಕೊಂಕಣ ರೈಲ್ವೆ ಸಂಪರ್ಕ?
ಇನ್ನು, ತಾಳಗುಪ್ಪದಿಂದ ಹುಬ್ಬಳ್ಳಿಗೆ 150 ಕಿಮಿ ದೂರಕ್ಕೆ ರೈಲು ವ್ಯವಸ್ಥೆಗೆ ಸರ್ವೆ ನಡೆದಿದೆ ಎಂದು ಸಂಸದರು ತಿಳಿಸಿದ್ದಾರೆ.
ಈ ಮಾರ್ಗಕ್ಕೆ ಸಂಬಂಧಿಸಿದಂತೆ ಬದಲೀ ಜಮೀನು ಆಗಬೇಕಿದ್ದು, ತಾಳಗುಪ್ಪದಿಂದ ಹೊನ್ನಾವರ ಮಾರ್ಗದಲ್ಲಿ ಶೇ.73ರಷ್ಟು ಅರಣ್ಯ ಬರುತ್ತಿದೆ. ಇದರ ಬಗ್ಗೆ ಕೇಂದ್ರ ಸರ್ಕಾರ ಅನುಮತಿ ಪಡೆಯಬೇಕಿದೆ ಎಂದರು,
ಬೀರೂರು-ಶಿವಮೊಗ್ಗದ ನಡುವೆ ಡಬ್ಬಲ್ ಟ್ರಾö್ಯಕ್ ಕಾಮಗಾರಿ ನಡೆಯಬೇಕಿದೆ. ಭದ್ರಾವತಿ ಚಿಕ್ಕಜಾಜೂರು ನಡುವೆ ನೂತನ ಸಂಪರ್ಕ ಆಗಲಿದೆ ಎಂದರು.
ಈ ಕ್ರಾಂತಿಕಾರಕ ಅಭಿವೃದ್ಧಿ ಇಲ್ಲಿ ಮಾತ್ರವಲ್ಲ, ದೇಶದ ಎಲ್ಲಡೆ ಆಗುತ್ತಿದ್ದು, ಇಚ್ಚಾಶಕ್ತಿಯಿದ್ದಲ್ಲಿ ದೇಶ ಕಟ್ಟುವ ಬಗ್ಗೆ ಪ್ರಧಾನಿ ಮೋದಿಯಿಂದಲೇ ಸಾಧ್ಯ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post