Friday, November 21, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Small Bytes

ಕಾಲವನ್ನೇ ಮೀರಿಸುವ ಚಿತ್ರಕಲೆ ಎಂಬ ಶಾಶ್ವತ ಜಗತ್ತು | ವಿಕ್ರಮ್ ಆರ್ಟ್ಸ್‌ನ ವಾಸುವಿನ ಕಲೆ ಅನಾವರಣ

July 11, 2025
in Small Bytes
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ: ಆದಿತ್ಯ ಪ್ರಸಾದ್ ಎಂ.  |

ಚಿತ್ರಕಲೆ ಎಂದಾಗ ಅದು ಬರೇ ಬಣ್ಣಗಳಿಂದ ತುಂಬಿದ ಚೌಕಟ್ಟು ಎಂದಲ್ಲ. ಅದು ಒಬ್ಬ ಕಲಾವಿದನ ಕಲ್ಪನೆಯ ಹೃದಯಯದ ಭಾವನೆಗಳ ದೃಶ್ಯಗಳಾಗಿರುತ್ತದೆ. ಹಾಗೆಯೇ ಮಾನವ ಕಲ್ಪನೆಯ ಅಭಿವ್ಯಕ್ತಿಯ ಕಲಾತ್ಮಕ ಸಾಧನವೂ ಹೌದು. ಮಾನವ ಸಂಸ್ಕೃತಿಯ ಪುರಾತನ ಭಾಗವಾಗಿ ರೂಪಾಂತರಗೊಂಡು ಇಂದಿಗೂ ತನ್ನ ಇರುವಿಕೆಯನ್ನ ಉಳಿಸಿಕೊಂಡು ಬಂದ ಒಂದು ಸಾಂಪ್ರದಾಯಿಕ ಕಲೆ ಎನ್ನಬಹುದು. ಬಣ್ಣಗಳ ಮೂಲಕ ಲೋಕವನ್ನು ಹಾಗೆಯೇ ಸಮಾಜದ ಅನೇಕ ಮುಖಗಳನ್ನು ವಿವರವಾಗಿ ತಿಳಿಸಲು ಮತ್ತು ಆಂತರ್ಯದ ಭಾವನೆಗಳನ್ನ ವ್ಯಕ್ತಪಡಿಸಲು ಇರುವ ಮಹೋನ್ನತ ಕಲೆಯಾಗಿದೆ.

ಇಂದು ಚಿತ್ರಕಲೆಯು ಹಲವು ಪ್ರಕಾರಗಳನ್ನು ಹೊಂದಿದೆ. ಪೈಂಟಿಂಗ್, ಡಿಜಿಟಲ್ ಆರ್ಟ್, ಸ್ಕೆಚ್, ಕ್ಯಾನ್ವಾಸ್ ಪೇಂಟಿಂಗ್, ವಾಟರ್ ಕಲರ್, ಅಕ್ರಿಲಿಕ್, ಓಯಿಲ್ ಪೇಂಟಿಂಗ್ ಹೀಗೆ ಅನೇಕ ಶೈಲಿಗಳು ಇವೆ. ಅಷ್ಟೆ ಅಲ್ಲದೆ, ಕಾಮಿಕ್ ಬುಕ್ ಇಲೆಸ್ಟ್ರೇಷನ್, ಅನಿಮೇಶನ್, ಗೇಮ್ ಡಿಸೈನ್, ಫ್ಯಾಷನ್ ಡಿಸೈನ್, ವೃತ್ತಿಪರ ಪ್ರಚಾರಚಿತ್ರಗಳು ಇವೆಲ್ಲವೂ ಚಿತ್ರಕಲೆಯ ಅಸ್ತಿತ್ವವನ್ನೇ ಮುಂದುವರೆಸಿದಂತವು ಎನ್ನಬಹುದು.
ಚಿತ್ರಕಲೆ ಒಂದು ಶಾಶ್ವತ ಜಗತ್ತು. ಅದು ಕಾಲವನ್ನು ಮೀರಿ ಜೀವಿಸುತ್ತದೆ. ನಾವು ಅದನ್ನು ನೋಡಬಹುದು, ಭಾವಿಸಬಹುದು, ಅನುಭವಿಸಬಹುದು. ನಾವು ಕಲಾವಿದರ ದೃಷ್ಟಿಕೋನದಿಂದ ಲೋಕವನ್ನು ನೋಡಲು ಕಲಿತರೆ, ಈ ಜಗತ್ತೇ ಬಣ್ಣದಿಂದ ತುಂಬಿರುವ ಕ್ಯಾನ್ವಾಸ್ ಎನ್ನುವ ಭಾವನೆ ಮೂಡುತ್ತದೆ.
ಇಂತಹ ಚಿತ್ರಗಳು ನಿನ್ನೆಯ ದಿನ ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಸಂಘ ಗಾಯತ್ರಿ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ವಿಪ್ರ ಯುವ ಮಹೋತ್ಸವದ ಅಂಗವಾಗಿ ನಡೆದ ಚಿತ್ರಕಲಾ ಪ್ರದರ್ಶನದಲ್ಲಿ ನೋಡುಗನ ಮನಸೂರೆಗೊಂಡವು. ಈ ಪ್ರದರ್ಶನದಲ್ಲಿ ಶಿವಮೊಗ್ಗದವರೇ ಆದ ವಿಕ್ರಮ್ ಆರ್ಟ್ಸ್‌ನ ವಾಸು ಅವರ ಹಲವು ಚಿತ್ರಗಳು ಪ್ರದರ್ಶನಗೊಂಡಿದ್ದವು.

ಕಲಾಲೋಕದಲ್ಲಿ ತನ್ನದೇ ಶೈಲಿಯಲ್ಲಿ ಚಿತ್ರಗಳನ್ನು ಮೂಡಿಸುವ ವಾಸು ಅವರು ಉಡುಪಿಯ ವೈದಿಕ ಮನೆತನದಿಂದ ಬಂದ ಯು. ನಾರಾಯಣಮೂರ್ತಿ ಹಾಗೂ ಯು. ಶಾರದಾಂಬಾ ದಂಪತಿಗಳಿಗೆ ಜನಿಸಿದ ಮೂವರು ಮಕ್ಕಳಲ್ಲಿ 1962ರ ಏಪ್ರಿಲ್ 3ರಂದು, ಎರಡನೇ ಮಗನಾಗಿ ಜನಿಸಿದರು. ಹಳೇ ಅಂಚೆಕಛೇರಿ ರಸ್ತೆಯಲ್ಲಿದ್ದ ಇವರು ಪ್ರಾಥಮಿಕ ಶಿಕ್ಷಣವನ್ನು ಮೇರಿ ಮ್ಯಾಕ್ಯುಲೇಟ್ ಶಾಲೆಯಲ್ಲಿ ಹಾಗೂ ಬಿ.ಕಾಮ್ ಪದವಿ ಶಿಕ್ಷಣವನ್ನು ಎನ್‌ಇಎಸ್ ಸಂಸ್ಥೆಯ ಸಂಜೆ ಕಾಲೇಜಿನಲ್ಲಿ ಪಡೆದರು.
ಕಲಾವಿದರಾದ ಅವರ ತಂದೆ ಯು. ನಾರಾಯಣಮೂರ್ತಿ ಅವರು 1952ರಲ್ಲೇ ವಿಕ್ರಮ್ ಆರ್ಟ್ಸ್ ಮತ್ತು ಕ್ರಾಫ್ಟ್ ಆರಂಭಿಸಿದರು. ಕಾಲಾನಂತರ 1990ರಲ್ಲಿ ವಾಸು ಅವರು ಅದನ್ನು ಮಾರಿಗದ್ದಿಗೆ ಸಮೀಪ ಸ್ಥಳಾಂತರಿಸಿ ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ.

ಅಂದಿನ ದಿನಮಾನಗಳಲ್ಲಿ ತಮ್ಮ ಬದುಕು ನಡೆಸಿಕೊಂಡು ಬರಲು ಆಸರೆಯಾಗಿದ್ದ ಕಲಾವಿದನಿಗೆ ವಾಣಿಜ್ಯ ಉದ್ಯಮವಾಗಿ ಬೆಳೆಯಲಾರಂಭಿಸಿದ ಚಿತ್ರಕಲೆಯನ್ನು ಸಾಂಪ್ರದಾಯಿಕ ಶೈಲಿಯಲ್ಲೂ ಕೂಡ ಉಳಿಸಿಕೊಂಡು ಬರುವ ಕಾರ್ಯ ಜತಜತೆಗೇ ನಡೆಸಿಕೊಂಡು ಬಂದಿರುವುದು ಕಲೆಯ ಮೇಲಿನ ಅವರ ಅದಮ್ಯ ಆಸಕ್ತಿ, ಶ್ರದ್ಧೆ ಹಾಗೂ ಗೌರವ ಎನ್ನಬಹುದು.
ಇವರ ಕುಂಚದಲ್ಲಿ ಮೂಡಿಬಂದ ಚಿತ್ರಗಳು ನಗರವಲ್ಲದೇ ದೇಶದ ನಾನಾ ಕಡೆಯೂ ರಾರಾಜಿಸುತ್ತಿರುವುದು ವಿಶೇಷ. ಕಂಚಿ ಕಾಮಕೋಟಿ ಪೀಠ ಹಾಗೂ ಮೇಲುಕೋಟೆಗಳಲ್ಲಿಯು ಕೂಡ ಇವರ ಕುಂಚದ ಕಲೆಯನ್ನ ಕಾಣಬಹುದು. ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಏರ್ಪಡಿಸುವ ಪ್ರದರ್ಶನ ಹಾಗೂ ಶಿವಮೊಗ್ಗ ದಸರಾಗಳಲ್ಲಿ ಇವರ ಹಲವು ಕೃತಿಗಳು ಪ್ರದರ್ಶನಗೊಂಡು ಜನಮನ ಗೆದ್ದಿದೆ.

ಮುಂದುವರಿಯುತ್ತಿರುವ ಡಿಜಿಟಲ್ ಯುಗದಲ್ಲಿ ಸಾಂಪ್ರದಾಯಿಕವಾದ ಕಲಾಶೈಲಿ ಹಿಂದೆ ಸರಿಯುತ್ತಿರುವುದನ್ನ ಮನಗಂಡು ಇಂದಿನ ಜನತೆಗೆ ಕಲಾಸಕ್ತಿ ಮೂಡಿಸುವ ನಿಟ್ಟಿನಲ್ಲಿ ಏರ್ಪಡಿಸಿದ್ದ ಚಿತ್ರಕಲಾ ಪ್ರದರ್ಶನ ಯುವಕರನ್ನ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2024/04/VID-20240426-WA0008.mp4

Tags: Kannada News WebsiteLatest News KannadaLocal NewsMalnad NewsShimogaShivamoggaShivamogga Newsಆದಿತ್ಯ ಪ್ರಸಾದ್ ಎಂ.ಕಲ್ಪನೆಕ್ಯಾನ್ವಾಸ್ ಪೇಂಟಿಂಗ್ಗೇಮ್ ಡಿಸೈನ್ಚಿತ್ರಕಲೆಡಿಜಿಟಲ್ ಆರ್ಟ್ಪೈಂಟಿಂಗ್ಫ್ಯಾಷನ್ ಡಿಸೈನ್ಶಿವಮೊಗ್ಗ
Previous Post

ಶಿವಮೊಗ್ಗ | ಸ್ನೇಹಿತರ ಎಣ್ಣೆ ಪಾರ್ಟಿ ಕೊಲೆಯಲ್ಲಿ ಅಂತ್ಯ | ಇಷ್ಟಕ್ಕೂ ನಡೆದಿದ್ಧೇನು?

Next Post

Medicover Hospitals Crosses 100 Robotic Surgeries in Just 5 Months | A New Milestone in Technological Excellence!

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

Medicover Hospitals Crosses 100 Robotic Surgeries in Just 5 Months | A New Milestone in Technological Excellence!

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ನ.24 | ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆ

November 21, 2025

ಕನ್ನಡ ನಾಡ ಹಬ್ಬ | ನಟ ಪ್ರೇಮ್‌ರಿಂದ ಕಿದ್ವಾಯಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಣೆ

November 21, 2025

ಬಾಳೆಗೊನೆ, ಒಳ ಉಡುಪಿನಲ್ಲಿ ಜೈಲಿಗೆ ಗಾಂಜಾ ಪೂರೈಕೆ | ಒಂದೇ ದಿನ ಎರಡು ಪ್ರಕರಣ ಪತ್ತೆ

November 21, 2025

ಸಿಎಸ್-ಇಇಟಿ ಪರೀಕ್ಷೆ | ಕ್ರೈಸ್ಟ್‌ಕಿಂಗ್ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ

November 21, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ನ.24 | ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆ

November 21, 2025

ಕನ್ನಡ ನಾಡ ಹಬ್ಬ | ನಟ ಪ್ರೇಮ್‌ರಿಂದ ಕಿದ್ವಾಯಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಣೆ

November 21, 2025

ಬಾಳೆಗೊನೆ, ಒಳ ಉಡುಪಿನಲ್ಲಿ ಜೈಲಿಗೆ ಗಾಂಜಾ ಪೂರೈಕೆ | ಒಂದೇ ದಿನ ಎರಡು ಪ್ರಕರಣ ಪತ್ತೆ

November 21, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!