ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ನೇಹಿತರು ಸೇರಿಕೊಂಡು ನಡೆಸುತ್ತಿದ್ದ ಎಣ್ಣೆ ಪಾರ್ಟಿಯಲ್ಲಿ ಕಿರಿಕ್ ಉಂಟಾಗಿ, ಕೊನೆಗೆ ಕೊಲೆಯಲ್ಲಿ #Murder ಅಂತ್ಯ ಕಂಡಿರುವ ಘಟನೆ ಬೊಮ್ಮನಿಕಟ್ಟೆಯ ಇ ಬ್ಲಾಕ್’ನಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು ಪವನ್ (28) ಎಂದು ಗುರುತಿಸಲಾಗಿದೆ. ಶಿವಕುಮಾರ್ ಎಂಬುವರ ಮನೆಯಲ್ಲೇ ಈ ಘಟನೆ ನಡೆದಿದೆ.
ಬೊಮ್ಮನಕಟ್ಟೆಯ ಇ-ಬ್ಲಾಕ್ ನಲ್ಲಿರುವ ಶಿವಕುಮಾರ್ ಮನೆಗೆ ಪವನ್ ತೆರಳಿದ್ದನು. ಕುಡಿದ ನಂತರದಲ್ಲಿ ಸ್ನೇಹಿತರ ನಡುವೆ ಗಲಾಟೆ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ಮತ್ತು ಫಾರೆನ್ಸಿಕ್ ತಜ್ಞರ ಭೇಟಿ ನೀಡಿದ್ದಾರೆ. ಕೊಲೆಯಾದ ಸ್ಥಳದಲ್ಲಿ ಮಾಹಿತಿಯನ್ನ ತಂಡ ಕಲೆಹಾಕಿದೆ.
ಇನ್ನು, ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಎಸ್’ಪಿ ಮಿಥುನ್ ಕುಮಾರ್, ಬೊಮ್ಮನಕಟ್ಟೆ ಇ-ಬ್ಲಾಕ್’ನಲ್ಲಿ ತಡರಾತ್ರಿ ಪಾರ್ಟಿ ವೇಳೆ ಪವನ್ ಎಂಬಾತನ ಹತ್ಯೆಯಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.
ಪವನ್ (28) ಮತ್ತು ಶಿವಕುರ್ಮಾ (49) ಕಳೆದ ರಾತ್ರಿ ಪಾರ್ಟಿ ಮುಗಿಸಿ, ಊಟ ಮಾಡಿದ್ದಾರೆ. ರಾತ್ರಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಮನಃಸ್ತಾಪ ಉಂಟಾಗಿದೆ. ಈ ವೇಳೆ ಶಿವಕುಮಾರ್, ಪವನನನ್ನು ಕೊಂದ್ದಾನೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post