ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಜೈನ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಇನ್ವೆಸ್ಪೀಚರ್ ಸೆರಮನಿ ಕಾರ್ಯಕ್ರಮ ಯಶಸ್ವಿಯಾಯಿತು.
ವಿದ್ಯಾರ್ಥಿ ಸಂಘದ ನಾಯಕ, ನಾಯಕಿ, ಶಾಲಾ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ, ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿ, ಕ್ರೀಡಾ ನಾಯಕ, ಉಪ ನಾಯಕ ಇಂಟರ್ ಹೌಸ್ ಗಳಾದ ಶಕ್ತಿ ಹೌಸ್ ನ ನಾಯಕ, ಉಪನಾಯಕ, ವಿಶ್ವಾಸ್ ಹೌಸ್ ನಾಯಕ ಉಪನಾಯಕ ಸಿದ್ದಂತ್ ನಾಯಕ, ಉಪನಾಯಕ, ನಿಶ್ಚಯ್ ಹೌಸ್ ನಾಯಕ, ಉಪನಾಯಕರಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬ್ಯಾಡ್ಜಿಂಗ್ ನೀಡುವ ಮೂಲಕ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ಮಾಡಿಕೊಡಲಾಯಿತು.
ಹೊಸದಾಗಿ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಹೊಣೆಗಾರಿಕೆ ನೀಡುವುದು, ಅವರಿಗೆ ನಾಯಕತ್ವದ ಗುಣಾಭಿವೃದ್ದಿಗೆ ಅವಕಾಶ ಕಲ್ಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಾಂಶುಪಾಲರಾದ ಎನ್. ಪ್ರಿಯದರ್ಶಿನಿ ಅಭಿನಂದನಾ ಭಾಷಣ ಮಾಡಿ, ನಾಯಕತ್ವ, ಶಿಸ್ತು ಮತ್ತು ಜವಾಬ್ದಾರಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಭಾರತೀಯ ಸೇನೆಯ ಅಧಿಕಾರಿ ಮಧುಸೂಧನ್ ಅವರು ಪಾಲ್ಗೊಂಡು ವಿದ್ಯಾರ್ಥಿ ಪರಿಷತ್ತಿನ ಸದಸ್ಯರಿಗೆ ಪದವಿ ಹಸ್ತಾಂತರ ಮಾಡಿದರು.
ಅಂತಾರಾಷ್ಟ್ರೀಯ ಮಟ್ಟದ ಏರೋಬಿಕ್ ಮತ್ತು ಹಿಪ್ ಹಾಪ್’ನಲ್ಲಿ ಭಾಗವಹಿಸಿ ಪದಕ ವಿಜಯಿಸಿದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















