ಕಲ್ಪ ಮೀಡಿಯಾ ಹೌಸ್ | ಮೈಸೂರು/ಬೆಳಗಾವಿ |
ಮೈಸೂರಿನಿಂದ ಬೆಳಗಾವಿ ಹಾಗೂ ಮೈಸೂರು ಬಾಗಲಕೋಟೆ ಮೈಸೂರು ಬಸವ ಎಕ್ಸ್’ಪ್ರೆಸ್ ಕುರಿತಾಗಿ ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ಇಲಾಖೆ ಮಹತ್ವದ ಅಪ್ಡೇಟ್ ನೀಡಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ಎರಡು ಪ್ರಮುಖ ಎಕ್ಸ್’ಪ್ರೆಸ್ ರೈಲುಗಳ ಕೋಚ್ ಸಂಯೋಜನೆಯನ್ನು ಪರಿಷ್ಕರಿಸಲು ನಿರ್ಧರಿಸಿದೆ.
ಈ ಪರಿಷ್ಕೃತ ಸಂಯೋಜನೆಯು ಒಟ್ಟು 21 ಬೋಗಿಗಳನ್ನು ಒಳಗೊಂಡಿರುತ್ತದೆ.
ಇವುಗಳಲ್ಲಿ 2 ಎಸಿ ಟು ಟೈರ್, 4 ಎಸಿ ತ್ರಿ ಟೈರ್, 9 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್, 1 ಲಗೇಜ್-ಕಮ್-ಬ್ರೇಕ್ ವ್ಯಾನ್ (ಜನರೇಟರ್ ಕಾರ್ ಸಹಿತ) ಮತ್ತು 1 ಎಸ್’ಎಲ್‌ಆರ್’ಡಿ ಬೋಗಿಗಳು ಸೇರಿವೆ. ಪರಿಷ್ಕೃತ ಸಂಯೋಜನೆಯೊಂದಿಗೆ ಸಂಚರಿಸುವ ರೈಲುಗಳ ವಿವರ ಹೀಗಿದೆ:
1. ರೈಲು ಸಂಖ್ಯೆ 17301/17302 ಮೈಸೂರು-ಬೆಳಗಾವಿ-ಮೈಸೂರು ಡೈಲಿ ಎಕ್ಸ್’ಪ್ರೆಸ್ ಜುಲೈ 15 ರಿಂದ ಬೆಳಗಾವಿಯಿಂದ ಮತ್ತು ಜುಲೈ 18, 2025 ರಿಂದ ಮೈಸೂರಿನಿಂದ ಪರಿಷ್ಕೃತ ಸಂಯೋಜನೆಯೊಂದಿಗೆ ಚಲಿಸಲಿದೆ.
2. ರೈಲು ಸಂಖ್ಯೆ 17307/17308 ಮೈಸೂರು-ಬಾಗಲಕೋಟೆ-ಮೈಸೂರು ಬಸವ ಡೈಲಿ ಎಕ್ಸ್’ಪ್ರೆಸ್ ಜುಲೈ 16 ರಿಂದ ಮೈಸೂರಿನಿಂದ ಮತ್ತು ಜುಲೈ 17, 2025 ರಿಂದ ಬಾಗಲಕೋಟೆಯಿಂದ ಪರಿಷ್ಕೃತ ಸಂಯೋಜನೆಯೊಂದಿಗೆ ಸಂಚರಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post