ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಿಗಂಧೂರು ಸೇತುವೆ #Sigandhuru Bridge ನಿರ್ಮಾಣದ ಮೂಲಕ ಶರಾವತಿ ಮುಳುಗಡೆ ಸಂತ್ರಸ್ಥರ ಏಳು ದಶಕದ ಕನಸು ನನಸಾಗಿದ್ದು, ಕೆಎಸ್‌ಆರ್‌ಟಿಸಿ #KSRTC ಶಿವಮೊಗ್ಗ ವಿಭಾಗವು ಈಗ ಹೆಚ್ಚುವರಿ ಬಸ್ ಸೇವೆಗಳನ್ನು ಒದಗಿಸಲು ಯೋಜಿಸುತ್ತಿದೆ.
ಸಾಗರದ ಅಂಬರಗೋಡ್ಲು ಮತ್ತು ಕಳಸವಳ್ಳಿ ಗ್ರಾಮ ಸಂಪರ್ಕಿಸುವ ಶರಾವತಿ ಹಿನ್ನೀರಿನಲ್ಲಿ #Sharavathi Backwater ನಿರ್ಮಿಸಿದ ಭಾರತದ ಎರಡನೇ ಅತಿದೊಡ್ಡ ಕೇಬಲ್ ಸೇತುವೆ ಉದ್ಘಾಟನೆಯ ನಂತರ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಸಿಗಂದೂರಿಗೆ ತಲುಪಲು ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಕೆಎಸ್‌ಆರ್‌ಟಿಸಿಯ ಶಿವಮೊಗ್ಗ ವಿಭಾಗವು ಈಗ ಹೆಚ್ಚುವರಿ ಬಸ್ ಸೇವೆಗಳನ್ನು ಯೋಜಿಸುತ್ತಿದೆ.
ಈ ಹಿಂದೆ ಸಿಗಂದೂರಿಗೆ ಕೇವಲ ಮೂರು ಬಸ್‌ಗಳು ಮಾತ್ರ ಇದ್ದವು. ಇದೀಗ ಈ ಭಾಗಗಳಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. ಈ ಹೊಸ ಮಾರ್ಗವು ದಿನವಿಡೀ ಸೇವೆಯೊಂದಿಗೆ ಹೆಚ್ಚುವರಿ ಹಳ್ಳಿಗಳನ್ನು ಸೇರಿಸುತ್ತದೆ.
ಇಷ್ಟು ವರ್ಷಗಳ ಕಾಲ ರಾತ್ರಿಯ ಸಮಯದಲ್ಲಿ ಲಾಂಚ್ ಪ್ರಯಾಣ ಸೇವೆ ಇಲ್ಲದ ಕಾರಣಕ್ಕೆ ಸಂಜೆ 7.30 ರವರೆಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈಗ ಸೇತುವೆಯಾದ ನಂತರ ರಾತ್ರಿ 9 ಗಂಟೆಯವರೆಗೂ ಚೌಡೇಶ್ವರಿ ತಾಯಿ ದರ್ಶನಕ್ಕೆ ದೇವಸ್ಥಾನ ಆಡಳಿತ ಮಂಡಳಿ ಅವಕಾಶ ಕಲ್ಪಿಸಿಕೊಟ್ಚಿದೆ. ಭಕ್ತರು ಇದರ ಉಪಯೋಗ ಪಡೆಯಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post