No Result
View All Result
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ
English Articles

Ramachandrapura Seer Hails PM Narendra Modi’s Leadership

by ಕಲ್ಪ ನ್ಯೂಸ್
June 10, 2026
0

Kalpa Media House  |  Honavar/Sagara  | Jagadguru Shankaracharya Sri Raghaveshwara Bharathi Mahaswamiji of Ramachandrapura Math has extended his congratulations to...

Read moreDetails
ಬ್ರೇಕ್‌ಥ್ರೂ | ದೇಶ ಭದ್ರತೆಯ ಜೋಜಿಲಾ ಸುರಂಗ ಕಾಮಗಾರಿಯಲ್ಲಿ ಐತಿಹಾಸಿಕ ಸಾಧನೆ

MEIL Scripts Himalayan History with Final Breakthrough of Zojila Tunnel

June 9, 2026
ಸಾಗರ | ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವಿಗೆ ಹಾವು ಕಚ್ಚಿ ಸಾವು

18-Month-Old Girl Dies After Falling Into Water Tank in Bagalkot

June 9, 2026
2025–26ನೇ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆ ಗಳಿಸಿದ ಒಟ್ಟು ಆದಾಯವೆಷ್ಟು ಗೊತ್ತಾ?

ILCAD 2026 Observed in Mysuru Division; SWR Promotes Level Crossing Safety

June 9, 2026
ಬೆಂಗಳೂರು–ತುಮಕೂರು ರೈಲು ಮಾರ್ಗದ ವಿದ್ಯುತ್ ವ್ಯವಸ್ಥೆ ಮೇಲ್ದರ್ಜೆಗೆ | ₹162.57 ಕೋಟಿ ಅನುಮೋದನೆ

Indian Railways Sanctions ₹162.57 Crore Upgrade for Bengaluru–Tumakuru Rail Section

June 9, 2026
  • Advertise With Us
  • Grievances
  • About Us
  • Contact Us
Thursday, June 11, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಭಾರತದಲ್ಲೇ ಮೊದಲು | ಕೆಲವೇ ಸೆಕೆಂಡುಗಳಲ್ಲಿ ಹೃದಯ ಸಮಸ್ಯೆ ಪತ್ತೆ ಹಚ್ಚಿದ ನಾರಾಯಣ ಹೆಲ್ತ್‌’ನ AI

ನಿಮ್ಮ ಇಸಿಜಿ ಈಗ ಹೆಚ್ಚು ಸ್ಮಾರ್ಟ್

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
August 6, 2025
in Special Articles
0
ಭಾರತದಲ್ಲೇ ಮೊದಲು | ಕೆಲವೇ ಸೆಕೆಂಡುಗಳಲ್ಲಿ ಹೃದಯ ಸಮಸ್ಯೆ ಪತ್ತೆ ಹಚ್ಚಿದ ನಾರಾಯಣ ಹೆಲ್ತ್‌’ನ AI
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ನಾರಾಯಣ ಹೆಲ್ತ್ ನ #NarayanaHealth ಎಐ ಸೌಲಭ್ಯವು ಕೇವಲ 10 ಸೆಕೆಂಡುಗಳಲ್ಲಿ ಹೃದಯ ಸಮಸ್ಯೆ ಪತ್ತೆ ಹಚ್ಚಿದ್ದು, ರೋಗ ನಿರ್ಣಯ ವಿಭಾಗದಲ್ಲಿ ಮಹತ್ವದ ಬೆಳವಣಿಗೆಗೆ ಮುನ್ನುಡಿ ಬರೆದಿದೆ.

ಬೆಂಗಳೂರು- ಪ್ರತಿಷ್ಠಿತ ನಾರಾಯಣ ಹೆಲ್ತ್ ಆಸ್ಪತ್ರೆಯ ನಾರಾಯಣ ಹೆಲ್ತ್ ಕ್ಲಿನಿಕಲ್ ರಿಸರ್ಚ್ ತಂಡ ಮತ್ತು ನಾರಾಯಣ ಹೆಲ್ತ್‌ ನ ಅನಾಲಿಟಿಕ್ಸ್ ಹಾಗೂ ಎಐ #AI ವಿಭಾಗವಾದ ಮೇಧಾ ಎಐ ಇಂದು ಮಹತ್ವದ ಘೋಷಣೆ ಮಾಡಿದ್ದು, ಈ ಎರಡೂ ತಂಡಗಳು ಸೇರಿ ತಕ್ಷಣವೇ ಹೃದಯ ಸಮಸ್ಯೆಯನ್ನು ಪತ್ತೆಹಚ್ಚಬಲ್ಲ ಎಐ ಮಾಡೆಲ್ ಅನ್ನು ಅಭಿವೃದ್ಧಿಪಡಿಸಿದೆ.

ಈ ಮಾಡೆಲ್ ಸಾಮಾನ್ಯ ಇಸಿಜಿ #ECG ಚಿತ್ರಣದಿಂದ ಹೃದಯದ ಕಾರ್ಯಕ್ಷಮತೆಯನ್ನು ಪತ್ತೆಹಚ್ಚಬಲ್ಲ, ಅದರಲ್ಲೂ ನಿರ್ದಿಷ್ಟವಾಗಿ ಲೆಫ್ಟ್ ವೆಂಟ್ರಿಕ್ಯುಲರ್ ಇಜೆಕ್ಷನ್ ಫ್ರಾಕ್ಷನ್ ಅನ್ನು ತಕ್ಷಣವೇ ಪತ್ತೆ ಹಚ್ಚಬಲ್ಲ ಒಂದು ಅತ್ಯಂತ ಪ್ರಮುಖ ಎಐ ಮಾಡೆಲ್ ಆಗಿದ್ದು, ರೋಗ ನಿರ್ಣಯ ವಿಭಾಗದಲ್ಲಿ ಮಹತ್ವದ ಗೆಲುವಾಗಿದೆ. ಈ ಮಾದರಿಯನ್ನು ವೈದ್ಯಕೀಯ ಕಾರ್ಯನಿರ್ವಹಣೆಯಲ್ಲಿ ಸುಗಮವಾಗಿ ಸಂಯೋಜಿಸುವಂತೆ ವಿನ್ಯಾಸಗೊಳಿಸಲಾಗಿದ್ದು, ಹೃದಯ ವೈಫಲ್ಯವನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಲು ಮತ್ತು ಸೀಮಿತ ಸಂಪನ್ಮೂಲ ಇರುವ ಸ್ಥಳಗಳಲ್ಲಿ ರೋಗನಿರ್ಣಯ ವ್ಯವಸ್ಥೆಯನ್ನು ಸುಧಾರಿಸಲು ಈ ಮಾದರಿ ಬಳಕೆಯಾಗಲಿದೆ.  ಈ ಅದ್ಭುತ ಆವಿಷ್ಕಾರವು ಲಕ್ಷಾಂತರ ರೋಗಿಗಳ ರೋಗನಿರ್ಣಯ ವಿಚಾರದಲ್ಲಿನ ಒಂದು ಪ್ರಮುಖ ಕೊರತೆಯನ್ನು ನೀಗಿಸಲಿದೆ. ಭಾರತದಾದ್ಯಂತ ಸುಮಾರು 10 ಮಿಲಿಯನ್ ಜನರಿಗೆ ಹೃದಯ ವೈಫಲ್ಯ ಸಮಸ್ಯೆ ಕಾಡುತ್ತದೆ. ಅದರಲ್ಲಿ ವಾರ್ಷಿಕವಾಗಿ 1.8 ಮಿಲಿಯನ್ ಮಂದಿ ಆಸ್ಪತ್ರೆಗೆ ಸೇರಿಕೊಳ್ಳುತ್ತಾರೆ. ಆದರೆ ಹೃದಯ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಬಲ್ಲ ಅತ್ಯಂತ ಉನ್ನತ ಸೌಲಭ್ಯವಾಗಿರುವ ಇಕೋಕಾರ್ಡಿಯೋಗ್ರಫಿ (ಇಕೋ) ಬಹಳಷ್ಟು ಕಡೆಗಳಲ್ಲಿ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ದೊರೆಯುವುದು ಕಷ್ಟ. ಈ ಹಿನ್ನೆಲೆಯಲ್ಲಿ ನಾರಾಯಣ ಹೆಲ್ತ್‌ ನ ಎಐ ಮಾದರಿಯು ಎಲ್ಲೆಡೆ ಲಭ್ಯವಿರುವ ಇಸಿಜಿ ಯಂತ್ರಗಳು ಮತ್ತು ಕ್ಲೌಡ್ ಆಧಾರಿತ ವಿಶ್ಲೇಷಣೆಯ ಮೂಲಕ ರೋಗಿಗಳ ಹೃದಯ ಕಾಯಕ್ಷಮತೆಯನ್ನು ಎಲ್ಲಿ ಬೇಕಾದರೂ ಮೌಲ್ಯಮಾಪನ ಮಾಡಬಲ್ಲ ಅತ್ಯುನ್ನತ ವ್ಯವಸ್ಥೆಯನ್ನು ಒದಗಿಸುತ್ತದೆ.

1,00,000ಕ್ಕೂ ಹೆಚ್ಚು ಇಸಿಜಿ ಚಿತ್ರಣಗಳು ಮತ್ತು ಇಕೋಕಾರ್ಡಿಯೋಗ್ರಾಮ್ ವರದಿಗಳ ಜೋಡಣೆಯ ಆಧಾರದ ಮೇಲೆ ಎಐ ಮಾದರಿಯನ್ನು ತರಬೇತಿಗೊಳಿಸಲಾಗಿದ್ದು, ಈ ಮಾದರಿಯು ಅತ್ಯುತ್ತಮ ಫಲಿತಾಂಶವನ್ನು ಒದಗಿಸಿದೆ. 14 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 57,000ಕ್ಕೂ ಹೆಚ್ಚು ರೋಗಿಗಳನ್ನು ಈ ಮೂಲಕ ಪರೀಕ್ಷೆ ಮಾಡಲಿದ್ದು, ಈ ಮಾದರಿಯು ಅದರಲ್ಲಿ ತೀವ್ರ ಕಡಿಮೆ ಇಎಫ್ (≤35%) ಹೊಂದಿರುವ ಶೇ.97ರಷ್ಟು ಮಂದಿಯನ್ನು ಪತ್ತೆ ಹಚ್ಚಿದೆ. ವಿಶೇಷವೆಂದರೆ ಇದರಲ್ಲಿ ಬಹಳಷ್ಟು ರೋಗಿಗಳು ಇಕೋಕಾರ್ಡಿಯೋಗ್ರಫಿ ಹೊಂದುವ ಸರಾಸರಿ 58 ದಿನಗಳ ಮೊದಲೇ ಅವರಲ್ಲಿ ಹೃದಯ ಸಮಸ್ಯೆ ಇರುವುದಾಗಿ ಪತ್ತೆ ಹಚ್ಚಲಾಗಿತ್ತು.ಈ ಸಂದರ್ಭದಲ್ಲಿ ನಾರಾಯಣ್ ಹೆಲ್ತ್ ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಡಾ. ದೇವಿ ಶೆಟ್ಟಿ ಅವರು, ನಾರಾಯಣ ಹೆಲ್ತ್ ನ ಗ್ರೂಪ್ ಸಿಇಓ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ. ಇಮ್ಯಾನುಯೆಲ್ ರೂಪರ್ಟ್ ಅವರು, ನಾರಾಯಣ ಹೆಲ್ತ್ ನ ಚೀಫ್ ಸೈಂಟಿಫಿಕ್ ಆಫೀಸರ್ ಮತ್ತು ಈ ಯೋಜನೆಯ ಪ್ರಮುಖ ಸಂಶೋಧಕರಾದ ಡಾ. ಪ್ರದೀಪ್ ನಾರಾಯಣ್ ಅವರು, ನಾರಾಯಣ ಹೆಲ್ತ್ ನ ಚೀಫ್ ಮೆಡಿಕಲ್ ಆಫೀಸರ್ ಡಾ. ಪಿ. ಎಂ. ಉತಪ್ಪ ಅವರು, ಮತ್ತು ನಾರಾಯಣ ಹೆಲ್ತ್ ನ ಸೀನಿಯರ್ ಕನ್ಸಲ್ಟೆಂಟ್ ಕಾರ್ಡಿಯಾಕ್ ಇಪಿ ಕೊಲೀಜಿಯಂನ ಸ್ಟ್ರಾಟೆಜಿಕ್ ಲೀಡ್ ಆಗಿರುವ ಡಾ. ದೀಪಕ್ ಪದ್ಮನಾಭನ್ ಉಪಸ್ಥಿತರಿದ್ದರು.

ಈ ಕುರಿತು ಮಾತನಾಡಿರುವ ನಾರಾಯಣ್ ಹೆಲ್ತ್ ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಡಾ. ದೇವಿ ಶೆಟ್ಟಿ ಅವರು, “ಈ ಆವಿಷ್ಕಾರವು ಕೇವಲ ಎಐ ಮಾಡೆಲ್ ಅನ್ನು ಮೀರಿದ ಆವಿಷ್ಕಾರವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ವೈದ್ಯಕೀಯ ಪರಿಣತಿಯನ್ನು, ಸಂಶೋಧನೆಯನ್ನು ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಸಂಯೋಜಿಸಿ ನೈಜ ಸಮಸ್ಯೆಗಳನ್ನು ದೊಡ್ಡ ಪ್ರಮಾಣದಲ್ಲಿ ಪರಿಹರಿಸಬೇಕು ಎಂಬ ನಾರಾಯಣ ಹೆಲ್ತ್‌ ಸಂಸ್ಥೆಯ ಧ್ಯೇಯವನ್ನು ಪ್ರತಿಬಿಂಬಿಸುತ್ತದೆ.

ಸರಳ ಇಸಿಜಿಯ ಮೂಲಕ ಹೃದಯ ವೈಫಲ್ಯವನ್ನು ತಕ್ಷಣವೇ ಪತ್ತೆ ಮಾಡು ಈ ವ್ಯವಸ್ಥೆಯು ರೋಗನಿರ್ಣಯವನ್ನು ಉತ್ತಮಗೊಳಿಸುವುದು ಮಾತ್ರವೇ ಅಲ್ಲ ಜನಸಾಮಾನ್ಯರಿಗೆ ಈ ವ್ಯವಸ್ಥೆಯನ್ನು ಸುಲಭವಾಗಿ ಲಭ್ಯವಾಗಿಸುವ ವಿಚಾರದಲ್ಲಿ ಬಹಳ ದೊಡ್ಡ ಮುನ್ನಡೆಯಾಗಿದೆ. ಈ ಎಐ ಮಾಡೆಲ್ ಆಸ್ಪತ್ರೆಯ ಸೀಮಿತ ಆವರಣವನ್ನು ಮೀರಿ ಉತ್ತಮ-ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು, ತ್ವರಿತ ನಿರ್ಧಾರ ಕೈಗೊಳ್ಳಲು, ಆರಂಭಿಕ ಹಂತದಲ್ಲಿ ಸಮಸ್ಯೆ ಪತ್ತೆ ಹಚ್ಚಲು ಮತ್ತು ಉತ್ತಮ ಫಲಿತಾಂಶಗಳನ್ನು ಪಡೆಯಲು ನೆರವಾಗುತ್ತದೆ. ಈ ಆವಿಷ್ಕಾರವು ಜಾಗತಿಕ ವೈದ್ಯಕೀಯ ಕ್ಷೇತ್ರದ ಭವಿಷ್ಯದಲ್ಲಿ ಮುಂಚೂಣಿಯಲ್ಲಿ ನಿಲ್ಲಬಲ್ಲ ಭಾರತದ ಸಾಮರ್ಥ್ಯವನ್ನು ತೋರಿಸಿದೆ” ಎಂದು ಹೇಳಿದರು.
ಇಸಿಜಿಗಳಿಂದ ಎಲ್.ವಿ.ಇ.ಎಫ್ ಅನ್ನು ಊಹಿಸಬಲ್ಲ ಮೇಧಾ ಎಐ ಮಾಡೆಲ್ ಅನ್ನು ನಾರಾಯಣ ಹೆಲ್ತ್‌ ಅಧೀನದ ಎಲೆಕ್ಟ್ರಾನಿಕ್ ಮೆಡಿಕಲ್ ರೆಕಾರ್ಡ್ (ಇಎಂಆರ್) ವ್ಯವಸ್ಥೆಯಾದ ಆತ್ಮದಲ್ಲಿ ಸಂಯೋಜಿಸಲಾಗಿದ್ದು, ಪ್ರಸ್ತುತ ಈ ವ್ಯವಸ್ಥೆಯನ್ನು ನಾರಾಯಣ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್, ನಾರಾಯಣ ಹೆಲ್ತ್ ಸಿಟಿಯಲ್ಲಿನ ಮಜುಮ್ದಾರ್ ಶಾ ಮೆಡಿಕಲ್ ಸೆಂಟರ್, ಬೆಂಗಳೂರಿನ ಕೆಲವು ಕ್ಲಿನಿಕ್‌ಗಳು ಮತ್ತು ಕೋಲ್ಕತ್ತಾದ ರವೀಂದ್ರನಾಥ ಟಾಗೋರ್ ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್‌ ನಲ್ಲಿ ಕಠಿಣ ಮೌಲ್ಯೀಕರಣಕ್ಕೆ ಒಳಗಾಗುತ್ತಿದೆ. ತಕ್ಷಣ ಫಲಿತಾಂಶ ನೀಡಲೆಂದೇ ಈ ಮಾಡೆಲ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಸುಲಭವಾಗಿ ವೈದ್ಯಕೀಯ ಸೇವೆ ಒದಗಿಸಲು ಸಾಧ್ಯವಾಗುವಂತೆ ಕಾರ್ಯ ನಿರ್ವಹಿಸುತ್ತದೆ.

ಈ ಎಐ ಮಾಡೆಲ್ ಅನ್ನು ಹಾರ್ಟ್ ರಿದಮ್ ಸೊಸೈಟಿ ಕಾನ್ಫರೆನ್ಸ್ (ಬೋಸ್ಟನ್), ಎ.ಪಿ.ಎಚ್.ಆರ್.ಎಸ್ (ಸಿಡ್ನಿ), ಐ.ಎಚ್.ಆರ್.ಎಸ್.ಸಿ.ಓ.ಎನ್ (ಕೋಲ್ಕತ್ತಾ) ಮತ್ತು ಎಚ್.ಆರ್.ಎಕ್ಸ್ (ಅಟ್ಲಾಂಟಾ) ಸೇರಿದಂತೆ ಪ್ರಮುಖ ಕಾನ್ಫರೆನ್ಸ್ ಗಳಲ್ಲಿ ಪ್ರಸ್ತುತಪಡಿಸಲಾಗಿದೆ. ಜೊತೆಗೆ ಇಂಡಿಯನ್ ಹಾರ್ಟ್ ಜರ್ನಲ್‌ ನಲ್ಲಿ ಈ ಕುರಿತ ವರದಿ ಪ್ರಕಟವಾಗಿದೆ. ವಿಶೇಷವಾಗಿ ಬಿಎಂಜೆ ಸೌತ್ ಏಷಿಯಾ ಅವಾರ್ಡ್ ಫಾರ್ ಡಿಜಿಟಲ್ ಇನ್ನೋವೇಷನ್ ಅನ್ನು ಪಡೆದುಕೊಂಡಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   

http://kalpa.news/wp-content/uploads/2024/04/VID-20240426-WA0008.mp4

                                               

Tags: AIAI ModelECGHealth NewsKannada News WebsiteLatest News KannadaLeft Ventricular Ejection FractionNarayana Healthಇಸಿಜಿಎಐಎಐ ಮಾಡೆಲ್ನಾರಾಯಣ ಆಸ್ಪತ್ರೆನಾರಾಯಣ ಹೆಲ್ತ್ಬೆಂಗಳೂರುಹೃದಯ ಸಮಸ್ಯೆ
Share197Tweet123Send
Previous Post

ಆಧುನಿಕತೆ ಹದಿಹರೆಯದ ಮನಸ್ಸನ್ನು ಕಲುಷಿತಗೊಳಿಸಿದೆ: ಎನ್‌ಇಎಸ್ ಅಧ್ಯಕ್ಷ ನಾರಾಯಣ ರಾವ್ ಅಭಿಪ್ರಾಯ

Next Post

ಭರವಸೆ ಚಲನಚಿತ್ರ ಆ. 8ರಂದು ರಾಜ್ಯಾದ್ಯಂತ ಬಿಡುಗಡೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಭರವಸೆ ಚಲನಚಿತ್ರ ಆ. 8ರಂದು ರಾಜ್ಯಾದ್ಯಂತ ಬಿಡುಗಡೆ

ಭರವಸೆ ಚಲನಚಿತ್ರ ಆ. 8ರಂದು ರಾಜ್ಯಾದ್ಯಂತ ಬಿಡುಗಡೆ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಗಮನಿಸಿ! ಜ.21-22ರಂದು ಶಿವಮೊಗ್ಗ ನಗರ, ಗ್ರಾಮಾಂತರದ ಈ ಬಡಾವಣೆಗಳಲ್ಲಿ ಕರೆಂಟ್ ಇರಲ್ಲ

ಗಮನಿಸಿ! ಜೂ.12ರಂದು ಶಿವಮೊಗ್ಗದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

June 11, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

ಮೈಸೂರು–ಮದಾರ್ ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್‌ಗೆ ಎರಡು ಹೆಚ್ಚುವರಿ ಟ್ರಿಪ್‌ಗಳ ವಿಸ್ತರಣೆ

June 11, 2026
SWR to run special trains for Good Friday, Easter rush

ಬೆಂಗಳೂರು, ಹುಬ್ಬಳ್ಳಿ, ಚೆನ್ನೈ  ಸೇರಿದಂತೆ ಒಟ್ಟು 25 ರೈಲುಗಳ ಬಿಗ್ ಅಪ್ಡೇಟ್ ಇಲ್ಲಿದೆ

June 11, 2026
ಹೊಸನಗರದಲ್ಲಿ ಎರಡು ಕಳ್ಳತನ ಪ್ರಕರಣ: ಭದ್ರಾವತಿಯ ಯುವಕ ಬಂಧನ

ಹೊಸನಗರದಲ್ಲಿ ಎರಡು ಕಳ್ಳತನ ಪ್ರಕರಣ: ಭದ್ರಾವತಿಯ ಯುವಕ ಬಂಧನ

June 11, 2026
ಎಸ್‌ಎಸ್‌ಎಲ್‌ಸಿ ಉತ್ತರಪತ್ರಿಕೆ ಮೌಲ್ಯಮಾಪನ ಮರುಪರೀಶಿಲನಾ ಅರ್ಜಿ ವಜಾ

ಚೆಕ್ ಬೌನ್ಸ್ ಪ್ರಕರಣ: 2 ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆ ಸಾಧ್ಯವಿಲ್ಲ: ಹೈಕೋರ್ಟ್ ಸ್ಪಷ್ಟನೆ

June 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL