ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರೀ ಮಳೆಯ ಪರಿಣಾಮ ರಾಜ್ಯ ಹೆದ್ದಾರಿ 52ರ ತೀರ್ಥಹಳ್ಳಿ – ಕುಂದಾಪುರ ನಡುವಿನ ಬಾಳೆಬರೆ ಘಾಟಿಯಲ್ಲಿ ಧರೆ ಕುಸಿಯುವ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಈ ರಸ್ತೆಯಲ್ಲಿ ಭಾರೀ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ಈ ಕುರಿತಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಂಡಿದ್ದಾರೆ.
ಇತ್ತೀಚೆಗೆ ಹೆರ್ ಪಿನ್ ಟರ್ನ್’ವೊಂದರಲ್ಲಿ ಧರೆ ಕುಸಿಯುವ ಆತಂಕ ಮೂಡಿದ್ದು, ವಿಶೇಷ ಅಧಿಕಾರಿಗಳು ಅದನ್ನು ಟಾರ್ಪಲ್ ಮುಚ್ಚಿ, ಮಣ್ಣಿನ ಚೀಲಗಳನ್ನು ಇಟ್ಟು ಬಂದೋಬಸ್ತ್ ಮಾಡಿದ್ದರು. ಇದರ ಬೆನ್ನಲ್ಲೆ ಮತ್ತೆ ಕೆಲವೆಡೆ ಧರೆ ಕುಸಿಯುವ ಆತಂಕ ಎದುರಾಗಿದೆ.

ಕಳೆದ ಮೇ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬಾಳೆಬರೆ ಘಾಟಿಯ ಹೇರ್ ಪಿನ್ ತಿರುವಿನಲ್ಲಿ ರಸ್ತೆಯ ಕೆಳಭಾಗದಲ್ಲಿ ಮಣ್ಣು ಕುಸಿತ ಉಂಟಾಗಿತ್ತು. ತಾತ್ಕಾಲಿಕ ದುರಸ್ತಿ ಕಾರ್ಯ ಕೈಗೊಂಡಿದ್ದರೂ, ಮಳೆ ಹೆಚ್ಚಾಗಿರುವುದರಿಂದ ಮಣ್ಣು ಮತ್ತಷ್ಟು ಕುಸಿಯುವ ಸಂಭವವಿದೆ ಎಂದು ಲೋಕೋಪಯೋಗಿ ಇಲಾಖೆ ವರದಿ ನೀಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post