ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ #Shri Raghavendra Swamy Aradhana Mahothsava ಅಂಗವಾಗಿ ಈ ದಿನ ರಾಯರ ಬೃಂದಾವನಕ್ಕೆ ವಿಶೇಷವಾಗಿ ಪಂಚಾಮೃತ ಅಭಿಷೇಕ ಹಾಗೂ ಐದು ತರದ ಹಣ್ಣುಗಳಿಂದ ಅಭಿಷೇಕವನ್ನು ನೆರವೇರಿಸಲಾಯಿತು.
ಭಕ್ತರು ಸನ್ನಿಧಿಯಲ್ಲಿ ಸಂಕಲ್ಪವನ್ನು ಮಾಡಿ ಗುರುಪಾದಪೂಜೆಯನ್ನು ಸಲ್ಲಿಸಿ ಫಲ ಮಂತ್ರಾಕ್ಷತೆ ಸ್ವೀಕರಿಸಿ ಗುರುರಾಯರ ಅನುಗ್ರಹಕ್ಕೆ ಪಾತ್ರರಾಗುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಹ್ಲಾದ ರಾಜರ ಮುಂಭಾಗದಲ್ಲಿ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿಯವರು ಸಂಕಲ್ಪವನ್ನು ಮಾಡಿ ಪಾದಪೂಜೆಯಲ್ಲಿ ಭಾಗವಹಿಸಿ ಲೋಕಕ್ಕೆ ಒಳ್ಳೆಯದಾಗಬೇಕೆಂದು ಪ್ರಾರ್ಥನೆಯೊಂದಿಗೆ ಸಂಕಲ್ಪವನ್ನು ಮಾಡಿದರು.
ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದಿಂದ್ರಚಾರ್ಯರು ಜಿಕೆ ಆಚಾರ್ಯರು ಹಾಗೂ ನಂದಕಿಶೋರ್ ಆಚಾರ್ಯರು ಉಪಸ್ಥಿತರಿದ್ದರು.
ಸುಧಾ ಮೂರ್ತಿಯವರಿಗೆ #Sudha Murthy ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರ ಆಚಾರ್ಯರು ಫಲ ಮಂತ್ರಾಕ್ಷತೆಯನ್ನು ಕೊಟ್ಟು ರಾಘವೇಂದ್ರ ಸ್ವಾಮಿಗಳ ಅನುಗ್ರಹ ಸದಾ ಕಾಲ ಇರಲಿ ಎಂದು ಆಶೀರ್ವದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post