ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ವ್ಯಾಪ್ತಿಯಲ್ಲಿ ಗಣಪತಿ ವಿಸರ್ಜನೆಗೆ ತೆಪ್ಪ ಬಲಕೆ ಮಾಡಿದಲ್ಲಿ ಅದರಲ್ಲಿ ತೆರಳುವವರು ಕಡ್ಡಾಯವಾಗಿ ಲೈಫ್ ಜಾಕೇಟ್ ಧರಿಸುವುದು ಹಾಗೂ ನುರಿತ ಈಜು ತಜ್ಞರು ಇರಬೇಕು ಎಂದು ಆದೇಶಿಸಲಾಗಿದೆ.
ಈ ಕುರಿತಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ #DC Gurudatta Hegde ಆದೇಶ ಹೊರಡಿಸಿದ್ದು, ನಗರ ಹಾಗೂ ಜಿಲ್ಲಾವ್ಯಾಪ್ತಿಯಲ್ಲಿ ಆ.27 ರಂದು ನಡೆಯಲಿರುವ ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಿದೆ. ನದಿ/ಕೆರೆಗಳು/ಹಿನ್ನೀರು ಪ್ರದೇಶಗಳಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ತೆಪ್ಪ ಬಳಕೆ ಮಾಡಿದಲ್ಲಿ ಕಡ್ಡಾಯವಾಗಿ 3-4 ಜನರಿಗೆ ಮಾತ್ರ ಅವಕಾಶವಿದ್ದು, ಲೈಫ್ ಜಾಕೇಟ್, ನುರಿತ ಈಜುಗಾರರು ಇರುವಂತೆ ಸೂಚಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post