ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಬ್ರಹ್ಮಾಂಡದ ದಿವ್ಯ ಚಿಂತನೆಗಳನ್ನು, ತತ್ವಗಳನ್ನು ತಮ್ಮ ಅನುಭವ, ಅಧ್ಯಯನದ ಮೂಲಕ ಸಾಹಿತ್ಯ ರೂಪದಲ್ಲಿ ನೀಡುತ್ತಿರುವ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಎಸ್ ಎಲ್ ಭೈರಪ್ಪನವರು ವಿಶ್ವದ ಶ್ರೇಷ್ಠ ಸಾಹಿತಿಗಳಾಗಿ, ಕನ್ನಡಿಗರಾಗಿ ಇರುವುದು ನಮ್ಮೆಲ್ಲರ ಪುಣ್ಯವೆಂದು ಸಂಸ್ಕೃತಿ ಚಿಂತಕ ,ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಋಗ್ವೇದಿ ಯೂತ್ ಕ್ಲಬ್ ಹಮ್ಮಿಕೊಂಡಿದ್ದ ಎಸ್ ಎಲ್ ಭೈರಪ್ಪನವರ ಸಾಹಿತ್ಯ ಕೊಡುಗೆಗಳು, ಜನ್ಮದಿನ, ವಿಶೇಷ ಪೂಜೆ, ಸಿಹಿ ಹಂಚಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಇವರ ಗೃಹಭಂಗ ,ದಾಟು ,ವಂಶವೃಕ್ಷ, ಸಾರ್ಥ, ಮಂತ್ರ ,ಆವರಣ ,ತಂತು ಮತದಾನ ,ತಬ್ಬಲಿಯು ನೀನಾದೆ ಮಗನೇ ಕಾದಂಬರಿಗಳು ಹಲವಾರು ಬಾರಿ ಮುದ್ರಣವಾಗುತ್ತಿದೆ,

ಭೈರಪ್ಪನವರ ಕಾದಂಬರಿಗಳು ಹಲವಾರು ನಾಟಕಗಳಾಗಿ, ಚಲನಚಿತ್ರಗಳಾಗಿ, ಧಾರಾವಾಹಿಗಳಾಗಿ ಸಮಾಜಕ್ಕೆ ಪರಿಣಾಮಕಾರಿಯಾದ ಪ್ರಭಾವವನ್ನು ಬೀರಿದೆ. ದೇಶ ವಿದೇಶಗಳ ಸಂಸ್ಕೃತಿ ,ಪರಂಪರೆ ಗ್ರಾಮೀಣ ಬದುಕು, ಗ್ರಾಮೀಣ ಜೀವನ , ವ್ಯಕ್ತಿಗಳ ಅಂತರ್ಮುಖಿ ಚಿಂತನೆ ಹಾಗೂ ಸಮಗ್ರವಾದ ನಿರಂತರವಾದ ಅಧ್ಯಯನದ ಜ್ಞಾನದ ಚಿಂತನೆಯ ಮೂಲಕ ಸಾಹಿತ್ಯವನ್ನು ರಚಿಸಿ ವಿಶ್ವ ಮಾನ್ಯ ಸಾಹಿತಿಯಾಗಿ ಭೈರಪ್ಪನವರು ಭಾರತದಲ್ಲಿ ಇರುವುದು ಹೆಮ್ಮೆಯಾಗಿದೆ .ಅವರ ಸಾಹಿತ್ಯ ಸೇವೆಯ ಜೊತೆಗೆ ಅಪಾರ ಸಮಾಜ ಸೇವೆಯನ್ನು ನೀಡಿ ಸಮಾಜದ ಪರಿವರ್ತನೆಗೊ ಕಾರಣರಾಗಿದ್ದಾರೆ. ಬೈರಪ್ಪನವರ ಸಮಾಜ ಸೇವೆಗೆ ಇತ್ತೀಚೆಗೆ ಅವರ ಹುಟ್ಟಿದ ಊರಿಗೆ ಕೆರೆಯನ್ನು ನಿರ್ಮಿಸುವ ಮೂಲಕ ಲಕ್ಷಾಂತರ ಜನರ ಬದುಕಿಗೆ ಕಾರಣವಾಗಿರುವ ಭೈರಪ್ಪ ನವರು ಮಾನವ ಶ್ರೇಷ್ಠ ಜೀವಿಯಾಗಿ ಮಾನವನ ಶ್ರೇಷ್ಠತೆಯನ್ನು ಹಾಗೂ ಮಹತ್ವವನ್ನು ಯುವ ಪೀಳಿಗೆಗೆ ನೀಡಿದ್ದಾರೆ . ಇವರ ಸೇವೆಯನ್ನು ಪರಿಗಣಿಸಿ ಪದ್ಮಭೂಷಣ, ಪದ್ಮಶ್ರೀ, ಹಾಗೂ ನೂರಾರು ಪ್ರಶಸ್ತಿಗಳು ದೊರೆತಿವೆ. ಭೈರಪ್ಪನವರು ಭಾರತೀಯತೆಯ ಪ್ರತೀಕವಾಗಿ ಭಾರತದ ಇತಿಹಾಸ, ಧರ್ಮ, ಸಂಸ್ಕೃತಿ ,ಪರಂಪರೆ, ಸಂಗೀತ ,ಸಾಹಿತ್ಯ, ಕಲೆ, ವಾಸ್ತುಶಿಲ್ಪ, ಮಾನವನ ಜೀವನ ಶೈಲಿಯ ಜೀವಂತಿಕೆಯ ಪ್ರತಿರೂಪವಾಗಿ ಸಾಹಿತ್ಯವನ್ನು ರಚಿಸಿ ವಿಶೇಷವಾದಂತಹ ಜ್ಞಾನದ ರಾಶಿಯನ್ನೇ ನೀಡಿದ್ದಾರೆ.

ಕಾರ್ಯಕ್ರಮವನ್ನು ಹಿರಿಯ ಕನ್ನಡ ಚಳುವಳಿಗಾರ ರಾಜಗೋಪಾಲ್ ಉದ್ಘಾಟಿಸಿ ಮಾತನಾಡಿ 95 ವಸಂತಗಳ ದಿವ್ಯ ಕಾಲವನ್ನು ಸಾಹಿತ್ಯ ರಚನೆಗೆ ನೀಡಿ ಭೈರಪ್ಪನವರು ಕನ್ನಡಿಗರ ಮನೆಮನೆಯ ಸಾಹಿತಿಯಾಗಿದ್ದಾರೆ. ಭೈರಪ್ಪನವರ ಪುಸ್ತಕಗಳು ವಿಶೇಷವಾಗಿದ್ದು ಅವರ ಎಲ್ಲಾ ಸಾಹಿತ್ಯಗಳು ಮನುಷ್ಯನ ಪೂರ್ಣತೆಗೆ ತೆಗೆದುಕೊಂಡು ಹೋಗುವ ಅನುಭವ ಉಂಟುಮಾಡುತ್ತದೆ. ಅವರ ಜ್ಞಾನ ಸಾಹಿತ್ಯ , ಚಿಂತನೆಗಳು ಸಾಹಿತ್ಯ ಲೋಕದ ಹೊಸ ಅವಲೋಕನವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಋಗ್ವೇದಿ ಯೂತ್ ಕ್ಲಬ್ ಭೈರಪ್ಪನವರ ಸಾಹಿತ್ಯ ಉತ್ಸವವನ್ನು ಹಮ್ಮಿಕೊಂಡು ವಿಶೇಷ ಪೂಜೆ ಸಲ್ಲಿಸಿ ಪುಸ್ತಕಗಳನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಹೆಮ್ಮೆಯಾಗಿದೆ ಎಂದು ತಿಳಿಸಿದರು.

ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿ ಬೈರಪ್ಪನವರ ಜನ್ಮದಿನವನ್ನು ಸಂತೋಷದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಿಕೆ ಆರಾಧ್ಯ, ಶಿವಲಿಂಗ ಮೂರ್ತಿ ,ಸರಸ್ವತಿ, ರವಿಚಂದ್ರಪ್ರಸಾದ್, ಮಹೇಶ್, ಕುಮಾರ್, ಅರವಿಂದ್, ಮೋಹನ್ ಮಾದೇಶ್ ಶೆಟ್ಟಿ, ಲೋಕೇಶ್ ನಾಯ್ಕ ,ಮೃತ್ಯುಂಜಯ ಮುಂತಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post