ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗಣಪತಿ ವಿಸರ್ಜನೆಗೆ ಹೋಗಿದ್ದ ಯುವಕ ಆನೆ ಟ್ರಂಚ್ ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತಾಲೂಕಿನ ಕುಂಸಿಯ ಸಿರಿಗೆರೆಯಲ್ಲಿ ನಡೆದಿದೆ.
ಕುಂಸಿ ಠಾಣೆ ವ್ಯಾಪ್ತಿಯ ಸಿರಿಗೆರೆ ಬಳಿಯ ಆಡಿನಕೊಟ್ಟಿಗೆ ಗ್ರಾಮದಲ್ಲಿ ನಡೆದಿದ್ದು, ಮೃತ ಯುವಕನನ್ನು ಸಿಎಂ ನಾಗರಾಜ(34) ಎಂದು ಗುರುತಿಸಲಾಗಿದೆ.
ನಿನ್ನೆ ಗಣಪತಿ ಪ್ರತಿಷ್ಠಾಪನೆ ಮಾಡಿ ಮೂರು ದಿನದ ಹಿನ್ನೆಲೆಯಲ್ಲಿ ವಿಸರ್ಜನೆ ಮಾಡಲಾಗಿದೆ. ಗಣೇಶ ವಿಸರ್ಜನೆಗೆ ತೆರಳಿದ್ದ ನಾಗರಾಜ್, ಕಾಲು ಜಾರಿ ಟ್ರಂಚ್’ಗೆ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಟ್ರಂಚ್’ನಲ್ಲಿ ನೀರು ತುಂಬಿದ್ದ ಹಿನ್ನೆಲೆಯಲ್ಲಿ ಯುವಕ ಮುಳುಗಿ ಸಾವನ್ನಪ್ಪಿರಬಹುದು ಎನ್ನಲಾಗಿದೆ.

ಇದೇ ವೇಳೆ, ಆನೆ ಟ್ರಂಚ್ ಅವೈಜ್ಞಾನಿಕವಾಗಿದೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.
ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದೆ ಯಾವುದೇ ಪ್ರಯೋಜನವಾಗರಲಿಲ್ಲ ಎಂದು ದೂರಿರುವ ಸ್ಥಳೀಯರು, ಗ್ರಾಮ ಪಂಚಾಯಿತಿಗೂ ಮನವಿ ನೀಡಲಾಗಿದೆ. ಮನವಿಗೆ ಯಾವ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ.
ಒಂದು ಮಗುವನ್ನು ತಂದೆಯಾಗಿದ್ದ ನಾಗರಾಜ್ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದರು ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post