ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೈಕ್‌ನಿಂದ ಆಯತಪ್ಪಿ ರಸ್ತೆಗೆ ಬಿದ್ದ ಯುವತಿಯ ತಲೆ ಮೇಲೆ ಬಸ್ ಹರಿದ ಪರಿದ ಪರಿಣಾಮ ಯುವತಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ನಗರದ ಮಲವಗೊಪ್ಪದ ಬಳಿ ಸಂಭವಿಸಿದೆ
ಇಂದು ಬೆಳಿಗ್ಗೆ ಸುಮಾರು 9:30 ರ ಸುಮಾರಿನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಸಹೋದರ ಸಂತೋಷ್ ಜೊತೆ ಹೋಗುತ್ತಿದ್ದ ವೇಳೆ ಕುರುಕಲು ಪದಾರ್ಥ ಮಾರಾಟ ಮಾಡುವ ದ್ವಿಚಕ್ರ ವಾಹನದಲ್ಲಿ ಮಿತಿಮೀರಿ ಲಗೇಜ್ ಹೇರಿಕೊಂಡು ಬರುವಾಗ ಅದರ ಪ್ಯಾಕೆಟ್ ತಗುಲಿ ಕವಿತಾ ಮತ್ತು ಸಂತೋಷ್ ಕೆಳಗೆ ಬಿದ್ದಿದ್ದರು. ಸಂತೋಷ್ ರಸ್ತೆಯ ಫುಟ್ ಪಾತ್ ಕಡೆ ಬಿದ್ದರೆ, ಕವಿತಾ ರಸ್ತೆ ಮಧ್ಯೆ ಬಿದ್ದಿದ್ದಾರೆ. ಇದೇ ಸಂದರ್ಭದಲ್ಲಿ ಹಿಂದಿನಿಂದ ಬರುತ್ತಿದ್ದ ಖಾಸಗಿ ಸಿಟಿ ಬಸ್ ಕವಿತಾ ತಲೆಯ ಮೇಲೆ ಹರಿದಿದೆ. ಪರಿಣಾಮ ಯುವತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post