ಸ್ವಾತಂತ್ರ್ಯ ಬಂದ ಮೇಲೆ ಮತ್ತೊಮ್ಮೆ ಹೊಡೆದಾಡಿಕೊಳ್ಳುವ ನೀತಿಯನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದು, ಹಿಂದೂ ಜಾತಿಗಳನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಆರೋಪಿಸಿದ್ದಾರೆ.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಜಾತಿಗಣತಿ ನಡೆಯುತ್ತಿದ್ದು, ಜಾತಿಗಳ ಕಾಲಂನಲ್ಲಿ ಆದಿ ದ್ರಾವಿಡ, ಕ್ರಿಶ್ಚಿಯನ್, ಅಕ್ಕಸಾಲಿಗ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್, ಮಾದಿಗ ಕ್ರಿಶ್ಚಿಯನ್ ಎಂದು ಹೊಸದಾಗಿ 49 ಕಾಲಂಗಳನ್ನು ಹುಟ್ಟುಹಾಕಿ ಹಿಂದೂ ಜಾತಿಗಳ ಮುಂದೆ ಕ್ರಿಶ್ಚಿಯನ್ ಪದ ಸೇರಿಸಿ ಮತಾಂತರವನ್ನು ರಾಷ್ಟ್ರಾಂತರ ಮಾಡಲಿಕ್ಕೆ ಹೊರಟಿದ್ದಾರೆ. ಇದನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಎಂದರು. ನಾಗಮಂಗಲ, ಹುಬ್ಬಳ್ಳಿಯಾಯಿತು ಸಾಗರದಲ್ಲಿಯೂ ಗಣಪತಿಗೆ ಕ್ಯಾಕರಿಸಿ ಉಗಿಯುವ ಮಕ್ಕಳ ಮಾನಸಿಕತೆ ನೋಡಿದ್ದಾಯಿತು. ಮಸೀದಿಯೊಳಗಿನಿಂದ ಕಲ್ಲು ಹೊಡೆಯುವ ಗೂಂಡಾಗಳ ಮೇಲೆ ಕ್ರಮ ಕೈಗೊಳ್ಳುವ ಬದಲು, ಅದನ್ನು ಪ್ರತಿಭಟಿಸಿದ ಮಹಿಳೆಯರ ಮೇಲೂ ಲಾಠಿಚಾರ್ಜ್ ಮಾಡಿದ್ದಾಯಿತು, ಭದ್ರಾವತಿ ಕಾಂಗ್ರೆಸ್ ಶಾಸಕರು ನಿನ್ನೆ ಮುಂದಿನ ಜನ್ಮದಲ್ಲಿ ನಾನು ಮುಸ್ಲಿಂನಾಗಿ ಹುಟ್ಟಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆ. ಈದ್ ಮಿಲಾದ್ ಮೆರವಣಿಗೆಯಲ್ಲಿ ಭದ್ರಾವತಿಯಲ್ಲಿ ಈ ದೇಶದ ಅನ್ನ ತಿಂದು, ಸಕಲ ಸೌಲಭ್ಯಗಳನ್ನು ಪಡೆದ ಯುವಕರ ಗುಂಪೊಂದು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಾರೆ. ಈ ಕಾಂಗ್ರೆಸ್ ಸರ್ಕಾರ ನಪುಂಸಕ ಸರ್ಕಾರವಾಗಿದೆ. ದೇಶದ್ರೋಹಿಗಳ ಮೇಲೆ ಕ್ರಮ ಕೈಗೊಳ್ಳುವ ತಾಕತ್ತು ಕಾಂಗ್ರೆಸ್ ಸರ್ಕಾರಕ್ಕಿಲ್ಲ. ರಾಜ್ಯದಲ್ಲಿ ಮುಸಲ್ಮಾನ್ ಗೂಂಡಾ ರಾಜ್ಯ ಸ್ಥಾಪನೆಗೆ ಕಾಂಗ್ರೆಸ್ ಹೊರಟಿದೆ. ನಾವು ಹಿಂದೂಸ್ತಾನ್ ಉಳಿವಿಗಾಗಿ ಮತ್ತು ಹಿಂದೂಸ್ತಾನ್ ಸಂರಕ್ಷಣೆಗಾಗಿಯೇ ರಾಜಕಾರಣ ಮಾಡುವವರು. ರಾಷ್ಟ್ರದ್ರೋಹಿಗಳಿಗೆ ರಕ್ಷಣೆ ಮಾಡುವ ಮನಸ್ಥಿತಿಯನ್ನು ಕಾಂಗ್ರೆಸ್ ಬಿಡಬೇಕು ಎಂದರು.
ಮೊನ್ನೆ ಶಿವಮೊಗ್ಗದಲ್ಲಿ ನಡೆದ ಹಿಂದೂ ಸಂಘಟನಾ ಮಹಾಮಂಡಳಿಯ ಗಣೇಶೋತ್ಸವ ಶಾಂತಿಯುತವಾಗಿ ನಭೂತೋ ನ ಭವಿಷ್ಯತೀ ಎಂಬಂತೆ ಅಭೂತಪೂರ್ವವಾಗಿ ನಡೆದಿದೆ. ಸಾರ್ವಜನಿಕರು ಕುಟುಂಬ ಸಮೇತರಾಗಿ ಪಾಲ್ಗೊಂಡು ಮಾಲಾರ್ಪಣೆ ಮಾಡುವುದರ ಮೂಲಕ ವೈಭವತೆಯನ್ನು ಹೆಚ್ಚಿಸಿದ್ದಾರೆ. ವಿಶೇಷವಾಗಿ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಮೆರವಣಿಗೆಯನ್ನು ಯಶಸ್ವಿಗೊಳಿಸಿದ್ದಾರೆ. ಇದಕ್ಕೆ ಕಾರಣರಾದ ಮಹಾಮಂಡಳಿಯ ಸದಸ್ಯರು, ಕಾರ್ಯಕರ್ತರು, ಜಿಲ್ಲಾ ರಕ್ಷಣಾಧಿಕಾರಿಗಳು, ಜಿಲ್ಲಾಧಿಕಾರಿಗಳು, ವಿವಿಧ ಪಕ್ಷಗಳ ಮುಖಂಡರು, ಎಲ್ಲಾ ಸಂಘಟನೆಗಳ ನಾಯಕರುಗಳಿಗೆ ಹಿಂದೂ ಮಹಾಸಾಗರದ ರೀತಿಯಲ್ಲಿ ಒಗ್ಗಟ್ಟಿನಿಂದ ಯಶಸ್ವಿಗೊಳಿಸಿದ್ದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಲೋಕಮಾನ್ಯ ಬಾಲಗಂಗಾಧರ ತಿಲಕ್ ಹಾಗೂ ವೀರ ಸಾವರ್ಕರ್ ಅವರನ್ನು ಈ ಸಂದರ್ಭದಲ್ಲಿ ನಮಿಸುವುದಾಗಿ ತಿಳಿಸಿದ ಅವರು, ಹಿಂದೂ ಸಮಾಜದ ಏಕತೆಗಾಗಿ ಅವರು ಈ ಗಣೇಶೋತ್ಸವವನ್ನು ಹಮ್ಮಿಕೊಂಡಿದ್ದರು ಎಂದು ಸ್ಮರಿಸಿದರು.
-ಎಸ್.ಎನ್. ಚನ್ನಬಸಪ್ಪ, ಶಾಸಕರು
ಭದ್ರಾವತಿಯಲ್ಲಿ ದೇಶದ್ರೋಹ ಘೋಷಣೆ ಕೂಗಿದವರನ್ನು ಇನ್ನೂ ಬಂಧಿಸಿಲ್ಲ. ಹಿಂದೂ ಸಮಾಜ ಏನು ಮಾಡಬೇಕು? ಎಷ್ಟು ಅಪಮಾನ ಸಹಿಸಬೇಕು ಬೂಕರ್ ಪ್ರಶಸ್ತಿ ಬರಲು ಕಾರಣವಾದ ಅನುವಾದಕರನ್ನು ಹೊರಗಿಡುತ್ತೀರಿ. ಅವಳು ಹಿಂದೂ ಹೆಣ್ಣು ಮಗಳು. ಅದಕ್ಕಾಗಿ ಎಂದ ಅವರು, ನ್ಯಾಯ ಕೇಳಿದರೆ ಲಾಠಚಾರ್ಜ್ ಮಾಡುತ್ತೀರಿ, ಗಣಪತಿ ಮೆರವಣಿಗೆಗೆ ಕಲ್ಲು ಹೊಡೆದವರಿಗೆ ಬಿಟ್ಟು ಹಿಂದೂಗಳನ್ನು ಬಂಧಿಸುತ್ತೀರಿ. ಇದು ಕಾಂಗ್ರೆಸ್ ಕೊಡುಗೆ ಕಾಂಗ್ರೆಸ್‍ನಲ್ಲಿ ಒಂದು ಕ್ರಿಶ್ಚಿಯನ್, ಒಂದು ಮುಸಲ್ಮಾನ್ ಜೀನ್ಸ್ ಇದೆ. ಆದ್ದರಿಂದ ಅವರ ವರ್ಗದ ತೃಪ್ತಿಗಾಗಿ ಹಿಂದೂಗಳ ಮೇಲೆ ದೌರ್ಜನ್ಯ, ಲಾಠಿಚಾರ್ಜ್ ನಡೆಯುತ್ತಿರುತ್ತದೆ ಎಂದರು.
ಗೃಹಸಚಿವರೇ ನಿಮ್ಮ ಜಾಗ ಕಿತ್ತುಕೊಳ್ಳುವ ಅಥವಾ ಕುತ್ತುಬರುವ ಭೀತಿಯಿಂದ ನೀವು ಒಂದು ವರ್ಗದ ಪರವಾಗಿ ಕೆಲಸ ಮಾಡುತ್ತಿದ್ದೀರಿ. ಎಚ್ಚರಿಕೆಯಿಂದ ಕ್ರಮ ಕೈಗೊಳ್ಳದಿದ್ದರೆ ಹಿಂದೂ ಸಮಾಜ ತಕ್ಕಪಾಠ ಕಲಿಸುತ್ತದೆ ಎಂದರು. ಡಿಜೆ ಹಾಕಿದವರಿಗೆ ನೋಟೀಸು ನೀಡುವ ನೀವು, ಜಿಲ್ಲಾ ರಕ್ಷಣಾಧಿಕಾರಿಗಳಿಗೆ ತಲ್ವಾರ್ ತೋರಿಸಿದಾಗ ನೋಟೀಸ್ ನೀಡಲಿಲ್ಲವೇಕೆ ? ಎಂದು ಪ್ರಶ್ನಿಸಿದರು. ಮದರಸದಲ್ಲಿ ಮಕ್ಕಳಿಗೆ ಉತ್ತಮ, ನೈತಿಕ ದೇಶಭಕ್ತಿಯ ಶಿಕ್ಷಣಕೊಡಿ. ಗೋ ಹಂತಕರನ್ನು ಬಂಧಿಸುವುದನ್ನು ಬಿಟ್ಟು ದೂರು ನೀಡಲು ಹೋದ ಗೋರಕ್ಷಕನನ್ನೇ ಬಂಧಿಸುತ್ತೀರಿ. ಇದು ಯಾವ ನ್ಯಾಯ ? ಎಂದರು. ನಾನು ಕೂಡ ನಾಳೆ ಮದ್ದೂರಿಗೆ ಹೊರಟಿದ್ದೇನೆ ಎಂದರು.
Discussion about this post