No Result
View All Result
Trade Challenges Pay10 Supports Women Entrepreneur
English Articles

“Pay10 Empowers Women in Global Trade”

by kalpa News
July 13, 2026
0

Kalpa Media House  |  New Delhi  | As women-led businesses emerge as one of the fastest-growing segments within India’s MSME ecosystem,...

Read moreDetails
“FZ Blue Flex Yamaha’s Ethanol-Ready Ride”

FZ Blue Flex | Yamaha Brings Ethanol-Ready Innovation to Indian Roads

July 13, 2026
“My Dad, My Hero Celebrating the Ultimate Bond with Hero Destini”

“My Dad, My Hero: Celebrating the Ultimate Bond with Hero Destini”

July 13, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

Indian Railways | Partial Cancellation of Trains on Bengaluru–Chennai

July 10, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
  • Advertise With Us
  • Grievances
  • About Us
  • Contact Us
Wednesday, July 15, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ಬೆಂಗಳೂರು | ಹಳಿ ತಪ್ಪಿದ್ದು, ಮಗುಚಿ ಬಿದ್ದಿದ್ದ ರೈಲ್ವೆ ಬೋಗಿ, ತುರ್ತು ಸೈರನ್ | ಹೇಗಿತ್ತು ಅಣುಕು ಅಭ್ಯಾಸ?

kalpa News by kalpa News
September 18, 2025
in ಬೆಂಗಳೂರು ನಗರ
0
ಬೆಂಗಳೂರು | ಹಳಿ ತಪ್ಪಿದ್ದು, ಮಗುಚಿ ಬಿದ್ದಿದ್ದ ರೈಲ್ವೆ ಬೋಗಿ, ತುರ್ತು ಸೈರನ್ | ಹೇಗಿತ್ತು ಅಣುಕು ಅಭ್ಯಾಸ?
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ವಿಪತ್ತು ಸನ್ನದ್ದತೆಯ ಕುರಿತಾಗಿ ಇಲ್ಲಿನ ಒಡ್ಡರಹಳ್ಳಿ ರೈಲ್ವೆ ಯಾರ್ಡ್’ನಲ್ಲಿ ಜಂಟಿ ಅಣುಕು ಅಭ್ಯಾಸ ನಡೆಸಲಾಯಿತು.

ಇಡೀ ದಿನ ನಡೆದ ಅಣುಕು ಅಭ್ಯಾಸದಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್’ಡಿಆರ್’ಎಫ್)ಯ 10 ನೇ ಬೆಟಾಲಿಯನ್ ಮತ್ತು ಇತರ ಸಂಸ್ಥೆಗಳು ಭಾಗವಹಿಸಿದ್ದವು. ಇಂತಹ ಅಣಕು ಅಭ್ಯಾಸಗಳು ವಿಪತ್ತಿನ ಸಂದರ್ಭದಲ್ಲಿ ವಿವಿಧ ಇಲಾಖೆಗಳ ನಡುವೆ ಸನ್ನದ್ಧತೆ ಮತ್ತು ಸಮನ್ವಯತೆಯನ್ನು ಹೆಚ್ಚಿಸಲು ನೆರವಾಗಲಿದೆ.

ಹೇಗಿತ್ತು ಅಣುಕು ಅಭ್ಯಾಸ?
ಈ ಅಣಕು ಪ್ರದರ್ಶನದ ಭಾಗವಾಗಿ, ಒಡ್ಡರಹಳ್ಳಿಯಲ್ಲಿ ಒಂದು ಬೋಗಿ ಹಳಿ ತಪ್ಪಿದ ಹಾಗೆ, ಮತ್ತೊಂದು ಬೋಗಿ ಮಗುಚಿ ಬಿದ್ದ ಹಾಗೆ ಒಂದು ಅಪಘಾತ ಸನ್ನಿವೇಶವನ್ನು ಸೃಷ್ಟಿಸಲಾಗಿತ್ತು. ತುರ್ತು ಸೈರನ್ ಮೊಳಗಿಸಿದ ನಂತರ ನಿಯಂತ್ರಣ ಕಚೇರಿಯ ಮೂಲಕ ಅಪಘಾತದ ಸಂದೇಶವನ್ನು ರವಾನಿಸಲಾಯಿತು. ವಿವಿಧ ರಕ್ಷಣಾ ತಂಡಗಳು ತ್ವರಿತವಾಗಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಗಳನ್ನು ಮಾಡಿ ತೋರಿಸಿದರು.ಯಾವೆಲ್ಲಾ ಪಡೆಗಳ ಸಹಯೋಗ?
10 ನೇ ಬೆಟಾಲಿಯನ್ ಉಪ ಕಮಾಂಡೆಂಟ್ ದಿಲ್ಬಾಗ್ ಸಿಂಗ್ ನೇತೃತ್ವದ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯು 27 ರಕ್ಷಣಾ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿತು.
ರಾಜ್ಯ ವಿಪತ್ತು ಸ್ಪಂದನಾ ಪಡೆ, ಗೃಹರಕ್ಷಕ ದಳ, ನಾಗರಿಕ ರಕ್ಷಣಾ ಪಡೆ, ಅಗ್ನಿಶಾಮಕ ಸೇವೆಗಳು, ಸರ್ಕಾರಿ ಆಸ್ಪತ್ರೆ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ರೈಲ್ವೆಯ ವೈದ್ಯಕೀಯ, ಕ್ಯಾರೇಜ್ ಮತ್ತು ವ್ಯಾಗನ್, ಸಿಗ್ನಲ್, ವಿದ್ಯುತ್, ರೈಲ್ವೆ ರಕ್ಷಣಾ ದಳ, ಪರಿಚಾಲನಾ ಮತ್ತು ವಾಣಿಜ್ಯ ಇಲಾಖೆಗಳ ಸಿಬ್ಬಂದಿಗಳು ಇದರಲ್ಲಿ ಭಾಗವಹಿಸಿದ್ದರು.

ಹೇಗಿತ್ತು ಅಣುಕು ಅಭ್ಯಾಸ?
ರಕ್ಷಣಾ ತಂಡಗಳು ವಿಶೇಷ ಉಪಕರಣಗಳನ್ನು ಬಳಸಿ ಒಳಗೆ ಸಿಲುಕಿರುವ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ನಿಟ್ಟಿನಲ್ಲಿ ಬೋಗಿಗಳ ಛಾವಣಿ, ವೆಸ್ಟಿಬುಲ್’ಗಳು ಮತ್ತು ಕಿಟಕಿಗಳನ್ನು ಕತ್ತರಿಸಿದವು. ವೈದ್ಯಕೀಯ ತಂಡವು ಗಾಯಗಳ ತೀವ್ರತೆಯ ಆಧಾರದ ಮೇಲೆ ಪ್ರಥಮ ಚಿಕಿತ್ಸೆ ನೀಡುವ ಮತ್ತು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ವರ್ಗಾಯಿಸುವ ಕಾರ್ಯವಿಧಾನಗಳನ್ನು ಪ್ರದರ್ಶಿಸಿದರು.ಈ ಅಣಕು ಅಭ್ಯಾಸವು ನೈಋತ್ಯ ರೈಲ್ವೆಯ ಪ್ರಧಾನ ಮುಖ್ಯ ಸುರಕ್ಷತಾ ಅಧಿಕಾರಿ ಎಂ. ರಾಮಕೃಷ್ಣರವರ ಮಾರ್ಗದರ್ಶನದಲ್ಲಿ ನಡೆಯಿತು.

ಅಣಕು ಅಭ್ಯಾಸ ಪ್ರದರ್ಶನ ಮುಗಿದ ನಂತರ ಮಾತನಾಡಿದ ರಾಮಕೃಷ್ಣ ಅವರು, ರಕ್ಷಣಾ ಕಾರ್ಯಾಚರಣೆಯ ಅಭ್ಯಾಸವನ್ನು ಸಮನ್ವಯತೆಯಿಂದ ಪೂರ್ಣಗೊಳಿಸಿದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

ಉತ್ತಮ ವಿಪತ್ತು ನಿರ್ವಹಣೆಗಾಗಿ ಪ್ರತಿ ಜಿಲ್ಲೆಯಲ್ಲಿ ಆಪದ ಮಿತ್ರ ಸ್ವಯಂಸೇವಕರ ಅಗತ್ಯದ ಕುರಿತು ಅವರು ತಿಳಿಸಿ, ಜಿಲ್ಲಾಡಳಿತವು ಹೆಚ್ಚು ಹೆಚ್ಚು ‘ಆಪದ ಮಿತ್ರ’ ಸ್ವಯಂಸೇವಕರನ್ನು ಹೊಂದಿರಬೇಕು ಎಂದರು.
ಡೀಸೆಲ್ ಮತ್ತು ವಿಪತ್ತು ನಿರ್ವಹಣೆಯ ಮುಖ್ಯ ಮೆಕ್ಯಾನಿಕಲ್ ಇಂಜಿನಿಯರ್ ಪಿ. ಬಾಲಸುಂದರ್, ಬೆಂಗಳೂರು ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಪರಿಚಾಲನೆ) ಪರೀಕ್ಷಿತ್ ಮೋಹನ್ಪುರಿಯಾ, ಬೆಂಗಳೂರು ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ವೆಂಕಟರಾಮಯ್ಯ, ಸೇರಿದಂತೆ ಹಲವಾರು ಹಿರಿಯ ರೈಲ್ವೆ ಅಧಿಕಾರಿಗಳು ಈ ಅಣಕು ಅಭ್ಯಾಸ ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ಗೃಹರಕ್ಷಕ ದಳದ ಉಪ ಕಮಾಂಡೆಂಟ್ ಮಹಾದೇವ ಮೂರ್ತಿ, ಅಗ್ನಿಶಾಮಕ ಸೇವೆಗಳ ಕಮಾಂಡಿಂಗ್ ಅಧಿಕಾರಿ ಎಚ್.ಜಿ. ಗೌತಮ್, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರತಿನಿಧಿ ಸ್ಮಿತಾ ಪ್ರಿಯದರ್ಶಿನಿ ಮತ್ತು ಎಸ್’ಡಿಆರ್’ಎಫ್ ಇನ್ಸ್ಪೆಕ್ಟರ್ ಅನುಕುಮಾರ್ ಸೇರಿದಂತೆ ರಾಜ್ಯ ಸಂಸ್ಥೆಗಳ ವಿವಿಧ ಅಧಿಕಾರಿಗಳು ಸಹ ಈ ಅಭ್ಯಾಸ ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ಹಿರಿಯ ವಿಭಾಗೀಯ ಸುರಕ್ಷತಾ ಅಧಿಕಾರಿ ಸುದರ್ಶನ್ ಭಟ್ ಅವರು ಈ ಅಣಕು ಅಭ್ಯಾಸವನ್ನು ಯಶಸ್ವಿಗೊಳಿಸಲು ಸಕ್ರಿಯವಾಗಿ ಭಾಗವಹಿಸಿದ ಎಲ್ಲ ಇಲಾಖೆಗಳಿಗೆ ವಂದನೆ ಸಲ್ಲಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   

http://kalpa.news/wp-content/uploads/2025/09/Vedic-Maths-New.mp4
http://kalpa.news/wp-content/uploads/2024/04/VID-20240426-WA0008.mp4

Tags: Emergency sirenIndian RailwayIRCTCKannada News WebsiteLatest News KannadaMock practiceNDRFOddarahalli Railway YardRailOneಅಣಕು ಅಭ್ಯಾಸಎನ್’ಡಿಆರ್’ಎಫ್ಒಡ್ಡರಹಳ್ಳಿ ರೈಲ್ವೆ ಯಾರ್ಡ್ತುರ್ತು ಸೈರನ್ಬೆಂಗಳೂರುರಾಜ್ಯ ವಿಪತ್ತು ಸ್ಪಂದನಾ ಪಡೆರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕೆಎಸ್’ಆರ್ ಬೆಂಗಳೂರು-ಯಶವಂತಪುರ ರೈಲು ನಿಲ್ದಾಣದಲ್ಲಿ ಸ್ವಚ್ಛತಾ ಹಿ ಸೇವಾ ಅಭಿಯಾನಕ್ಕೆ ಚಾಲನೆ

Next Post

Joint Mock Exercise on Disaster Preparedness conducted at Oddarahalli Railway Station Yard

kalpa News

kalpa News

Next Post
ಬೆಂಗಳೂರು | ಹಳಿ ತಪ್ಪಿದ್ದು, ಮಗುಚಿ ಬಿದ್ದಿದ್ದ ರೈಲ್ವೆ ಬೋಗಿ, ತುರ್ತು ಸೈರನ್ | ಹೇಗಿತ್ತು ಅಣುಕು ಅಭ್ಯಾಸ?

Joint Mock Exercise on Disaster Preparedness conducted at Oddarahalli Railway Station Yard

Leave a Reply Cancel reply

Your email address will not be published. Required fields are marked *

No Result
View All Result
Trade Challenges Pay10 Supports Women Entrepreneur
English Articles

“Pay10 Empowers Women in Global Trade”

by kalpa News
July 13, 2026
0

Kalpa Media House  |  New Delhi  | As women-led businesses emerge as one of the fastest-growing segments within India’s MSME ecosystem,...

Read moreDetails
“FZ Blue Flex Yamaha’s Ethanol-Ready Ride”

FZ Blue Flex | Yamaha Brings Ethanol-Ready Innovation to Indian Roads

July 13, 2026
“My Dad, My Hero Celebrating the Ultimate Bond with Hero Destini”

“My Dad, My Hero: Celebrating the Ultimate Bond with Hero Destini”

July 13, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

Indian Railways | Partial Cancellation of Trains on Bengaluru–Chennai

July 10, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL